Saturday, December 20, 2025
Homeರಾಜ್ಯಐದು ಮಂದಿ ವಿರುದ್ಧ ಧರ್ಮಸ್ಥಳ ಪೊಲೀಸ್‌‍ ಠಾಣೆಯಲ್ಲಿ ಬೆದರಿಕೆ ದೂರು ನೀಡಿದ ಚಿನ್ನಯ್ಯ

ಐದು ಮಂದಿ ವಿರುದ್ಧ ಧರ್ಮಸ್ಥಳ ಪೊಲೀಸ್‌‍ ಠಾಣೆಯಲ್ಲಿ ಬೆದರಿಕೆ ದೂರು ನೀಡಿದ ಚಿನ್ನಯ್ಯ

Chinnaiah files threat complaint against five people at Dharmasthala police station

ಬೆಳ್ತಂಗಡಿ,ಡಿ.20- ಧರ್ಮಸ್ಥಳ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಜೈಲು ಸೇರಿ ಹೊರಬಂದ ಬುರುಡೆ ಚಿನ್ನಯ್ಯ ಇದೀಗ ಐದು ಮಂದಿ ವಿರುದ್ಧ ಬೆದರಿಕೆಯ ದೂರು ನೀಡಿ ಸೂಕ್ತ ರಕ್ಷಣೆ ನೀಡುವಂತೆ ಧರ್ಮಸ್ಥಳ ಪೊಲೀಸ್‌‍ ಠಾಣೆಗೆ ಅರ್ಜಿ ಸಲ್ಲಿಸಿದ್ದಾನೆ.

ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಜೈಲು ಸೇರಿ ಡಿ.18 ರಂದು ಬೆಳಗ್ಗೆ ಶಿವಮೊಗ್ಗ ಜೈಲಿನಿಂದ ಹೊರ ಬಂದ ಬುರುಡೆ ಚಿನ್ನಯ್ಯ, ತನ್ನ ಪತ್ನಿ ಮಲ್ಲಿಕಾ ಮತ್ತು ಸಹೋದರಿ ರತ್ನ ಜೊತೆ ಅಂದು ರಾತ್ರಿ 8 ಗಂಟೆಗೆ ಧರ್ಮಸ್ಥಳ ಪೊಲೀಸ್‌‍ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ಮಹೇಶ್‌ ಶೆಟ್ಟಿ ತಿಮರೋಡಿ, ಜಯಂತ್‌. ಟಿ, ಯೂಟ್ಯೂಬರ್‌ ಸಮೀರ್‌, ಸೌಜನ್ಯ ಮಾವ ವಿಠಲ್‌ ಗೌಡ, ಗಿರೀಶ್‌ ಮಟ್ಟಣ್ಣವರ್‌ ಹಾಗೂ ಸಂಗಡಿಗರಿಂದ ತನಗೆ ಮತ್ತು ತನ್ನ ಪತ್ನಿ ಮಲ್ಲಿಕಾ ಅಲಿಯಾಸ್‌‍ ನಾಗಮಗೆ ಜೀವಬೆದರಿಕೆ ಇರುವ ಕಾರಣದಿಂದ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಇವರುಗಳಿಂದ ನನ್ನ ಕುಟುಂಬಕ್ಕೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಕೊಡುವ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಈ ಪಿಟಿಷನ್‌ ದಾಖಲಿಸಿಕೊಂಡಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್‌‍ಪಿ ತಿಳಿಸಿದ್ದಾರೆ.

RELATED ARTICLES

Latest News