ಬೆಂಗಳೂರು,ಡಿ.6- ಸೈಕ್ಲೋನ್ ಪ್ರಮಾಣ ತಗ್ಗಿದರೂ ಸಹ ರಾಜ್ಯದ ವಿವಿಧೆಡೆ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ವಾತಾವರಣದಿಂದ ಚಳಿಗೆ ಜನರು ಥಂಡಾ ಹೊಡೆದು ಹೋಗಿದ್ದಾರೆ. ಕಳೆದ ಎರಡು ವಾರಗಳಿಂದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳು ತಂಪು ತಂಪು ಕೂಲ್ ಕೂಲ್ ಸಿಟಿಗಳಾಗಿ ಮಾರ್ಪಟ್ಟಿವೆ.
ಹಾಗೊಮೆ, ಹೀಗೊಮೆ ಮೋಡ ಕವಿದ ವಾತಾವರಣದಿಂದ ಚಳಿಗೆ ಜನರು ಮನೆಯಿಂದ ಹೊರಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಸೂರ್ಯನ ದರ್ಶನ ಅಪರೂಪವಾಗಿದೆ. ಆಗಾಗ ಕಾಣಿಸಿಕೊಂಡುಕಣ್ಮರೆಯಾಗುತ್ತಿದ್ದಾನೆ. ಮನೆಯಲ್ಲಿದ್ದರೂ ಚಳಿ, ಹೊರಬಂದರೂ ಚಳಿಯಾಗುತ್ತಿದೆ.
ಬೆಂಗಳೂರಿನಲ್ಲಿ ನಿನ್ನೆ ಕನಿಷ್ಠ 20 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಕನಿಷ್ಠ ಉಷ್ಣಾಂಶ 17 ರಿಂದ 18 ಡಿ.ಸೆ. ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಳಿಗೆ ಆರೋಗ್ಯ ಸಮಸ್ಯೆ :
ದಿಢೀರನೆ ಬದಲಾದ ವಾತಾವರಣದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಅದರಲ್ಲೂ ಮಕ್ಕಳು ಮತ್ತು ವೃದ್ಧರು ಕೆಮು, ಜ್ವರ, ನೆಗಡಿಯಿಂದ ಬಳಲುತ್ತಿದ್ದಾರೆ. ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆದಷ್ಟು ಬೆಚ್ಚಗಿನ ನೀರು, ಆಹಾರ ಸೇವಿಸುವುದಲ್ಲದೆ ಬೆಚ್ಚಗಿನ ಉಡುಪುಗಳನ್ನು ಧರಿಸುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.
