ಚಾಮರಾಜನಗರ,ಜ.27- ಪ್ರಯಾಣಿಕರ ಕಾರೊಂದನ್ನು ಒಂಟಿಸಲಗ ಅಟ್ಟಾಡಿಸಿರುವ ಘಟನೆ ಕರ್ನಾಟಕ-ತಮಿಳುನಾಡು ಗಡಿಭಾಗದ ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇಂದು ಬೆಳ್ಳಂಬೆಳಿಗ್ಗೆ ನಡೆದಿದೆ.
ಕಾಡಿನಿಂದ ಏಕಾಏಕಿ ರಸ್ತೆಗೆ ಬಂದ ಒಂಟಿಸಲಗ ತಮಿಳುನಾಡು ಕಡೆಗೆ ತೆರಳುತ್ತಿದ್ದ ಕಾರಿನ ಮೇಲೆ ದಾಳಿ ಮಾಡಲು ಯತ್ನಿಸಿದೆ. ಚಾಲಕ ಹಿಮುಖವಾಗಿ ಚಾಲನೆ ಮಾಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯಪ್ರದೇಶದ ಬಿಳಿಗಿರಿ ಟೈಗರ್ ರಿಸರ್ವ್ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಈ ಭಾಗದಲ್ಲಿ ಆಗಾಗ್ಗೆ ಆನೆಗಳು ರಸ್ತೆಗೆ ಬರುತ್ತವೆ. ಇದರಿಂದ ಸ್ಥಳೀಯರು ಹಾಗೂ ಪ್ರಯಾಣಿಕರಲ್ಲಿ ಆತಂಕದ ವಾತಾರಣ ನಿರ್ಮಾಣವಾಗಿದೆ.
