Thursday, January 8, 2026
Homeರಾಜ್ಯಫೇಸ್‌‍ಬುಕ್‌, ಇನ್‌ಸ್ಟಾಗ್ರಾಮ್ ಹ್ಯಾಕ್‌ ಮಾಡಿ ಯುವತಿಯೊಬ್ಬಳಿಗೆ ಅಶ್ಲೀಲ ಸಂದೇಶ ರವಾನೆ : ಸೈಬರ್‌ ಪೊಲೀಸರಿಗೆ ದೂರು

ಫೇಸ್‌‍ಬುಕ್‌, ಇನ್‌ಸ್ಟಾಗ್ರಾಮ್ ಹ್ಯಾಕ್‌ ಮಾಡಿ ಯುವತಿಯೊಬ್ಬಳಿಗೆ ಅಶ್ಲೀಲ ಸಂದೇಶ ರವಾನೆ : ಸೈಬರ್‌ ಪೊಲೀಸರಿಗೆ ದೂರು

Facebook, Instagram hacked and obscene messages sent to a young woman

ಬೆಂಗಳೂರು,ಜ.7- ಫೇಸ್‌‍ಬುಕ್‌, ಇನ್ಸ್ಟಾಗ್ರಾಮ್‌ ಖಾತೆಯನ್ನು ಹ್ಯಾಕ್‌ ಮಾಡಿ ಯುವತಿಯೊಬ್ಬಳಿಗೆ ಅಶ್ಲೀಲ ಸಂದೇಶ ಕಳುಹಿಸಲಾಗಿದೆ ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಸೈಬರ್‌ಕ್ರೈಂಗೆ ದೂರು ನೀಡಿದ್ದಾರೆ.
ತಮ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಫೇಸ್‌‍ಬುಕ್‌, ಇನ್ಸ್ಟಾಗ್ರಾಮ್‌ನಲ್ಲಿ ಹಲವರಿಗೆ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸಲಾಗಿದೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ರಾಮಮೂರ್ತಿ ಬೆಂಗಳೂರು ದಕ್ಷಿಣ ಸೈಬರ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ತಮ ಮೊಬೈಲ್‌ ಅನ್ನು ಹ್ಯಾಕ್‌ ಮಾಡಲಾಗಿದೆ ಎಂದು ದೂರು ನೀಡಿರುವ ಅವರು, ತಮ ಅಧಿಕೃತ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಮಹಿಳೆಗೆ ಹಾಯ್‌, ಹಲೊ, ಗುಡ್‌ಮಾರ್ನಿಂಗ್‌, ಗುಡ್‌ ಇವನಿಂಗ್‌, ಸೂಪರ್‌ ಇತ್ಯಾದಿ ಮೆಸೇಜ್‌ಗಳನ್ನು ಕಳುಹಿಸಲಾಗಿದೆ. ನನ್ನ ರಾಜಕೀಯ ಏಳಿಗೆಯನ್ನು ಸಹಿಸದವರು ಮಾಡಿರುವ ಕುತಂತ್ರ ಇದಾಗಿದೆ ಎಂದು ದೂರಿದ್ದಾರೆ.

ಸೈಬರ್‌ ಕ್ರೈಂಗೆ ದೂರು ನೀಡಿರುವ ಅವರು, ಹ್ಯಾಕರ್‌ರ‍ಸ ಹಾಗೂ ನಕಲಿ ಖಾತೆ ಸೃಷ್ಟಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಈ ಸಂಬಂಧ ಸೈಬರ್‌ ಕ್ರೈಂಗೆ ಕಾಂಗ್ರೆಸ್‌‍ ಐಟಿಸೆಲ್‌ಗೂ ದೂರು ನೀಡಲಾಗುವುದು. ರಾಜಕೀಯವನ್ನು ರಾಜಕೀಯವಾಗಿ ನೋಡಿದರೆ ಇಂತಹ ಪ್ರಮಾದಗಳು ನಡೆಯುವುದಿಲ್ಲ. ನನ್ನ ಏಳಿಗೆಯನ್ನು ಸಹಿಸದವರು ಇಂತಹ ಹೀನ ಕೃತ್ಯ ಮಾಡಿದ್ದಾರೆ. ಅವರಿಗೆ ಕಾನೂನಿನ ಮೂಲಕವೇ ಪಾಠ ಕಲಿಸಲಾಗುವುದು ಎಂದು ರಾಮಮೂರ್ತಿ ಎಚ್ಚರಿಸಿದ್ದಾರೆ.

RELATED ARTICLES

Latest News