Monday, January 12, 2026
Homeರಾಜ್ಯಮೆಕ್ಕೆಜೋಳ ಖರೀದಿಗೆ ತಗಾದೆ, ರೈತರು ಕಂಗಾಲು

ಮೆಕ್ಕೆಜೋಳ ಖರೀದಿಗೆ ತಗಾದೆ, ರೈತರು ಕಂಗಾಲು

Farmers are worried about maize purchases

ಹಾವೇರಿ,ಜ.12– ಮೆಕ್ಕೆಜೋಳ ಸರಿಯಾದ ಗುಣಮಟ್ಟದಲ್ಲಿ ಇಲ್ಲ ಎಂದು ಈಗ ಹೊಸ ತಗಾದೆ ತೆಗೆದು ಖರೀದಿ ಕೇಂದ್ರದಲ್ಲಿ ನಿರಾಕರಿಸುತ್ತಿರುವುದಕ್ಕೆ ರೈತರು ಕಂಗಾಲಾಗಿದ್ದಾರೆ. ರೈತರು ಬೆಂಬಲ ಬೆಲೆ ಘೋಷಣೆ ಮಾಡುವಂತೆ ಸತತವಾಗಿ ಒಂದು ತಿಂಗಳ ಹೋರಾಟ ಮಾಡಿದರು. ಸರ್ಕಾರ 2,400 ರೂ. ಬೆಂಬಲ ಬೆಲೆ ಘೋಷಣೆ ಮಾಡಿದರು. ಆದರೆ ನೋಂದಣಿ ಮಾಡಿಕೊಂಡರೂ ಕೆ.ಎಂ.ಎ್‌‍ನಿಂದ ಮೆಕ್ಕೆಜೋಳ ಖರೀದಿ ಆಗುತ್ತಿಲ್ಲ ಎಂದು ರೈತರು ಈಗ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಕೆಲವೊಮ್ಮೆ ಎಥಿನಾಲ್‌ ಮತ್ತು ಕೋಳಿ ಸಾಕಾಣಿಕೆದಾರರು ಖರೀದಿ ಮಾಡುತ್ತಿದ್ದಾರೆ. ಅವರು ಸಹ ಮೆಕ್ಕೆಜೋಳಕ್ಕೆ ಂಗಸ್‌ ಆಗಿದೆ, ಸರಿಯಾದ ರೀತಿಯಲ್ಲಿ ಒಣಗಿಲ್ಲ ಎಂದು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಲಾಗಿದೆ. ಸತತವಾಗಿ 19 ದಿನಗಳ ಕಾಲ ಬಾಡಿಗೆ ಕೊಟ್ಟು ಮೆಕ್ಕೆಜೋಳ ಮಾರಾಟ ಮಾಡಲು ತಂದರೂ ಖರೀದಿ ಮಾಡುವ ಖರೀದಿ ಕೇಂದ್ರ ರಿಜೆಕ್ಟ್‌ ಮಾಡುತ್ತಿದ್ದಾರೆ ಎಂದು ರೈತರು ಕಣ್ಣೀರು ಹಾಕಿದ್ದಾರೆ.

ಸರ್ಕಾರ ಬೆಂಬಲ ಘೋಷಣೆ ಮಾಡಿದ ನಂತರ ರೈತರು ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಸಿಕ್ಕಿತು, ನಮ್ಮ ಸಾಲ ಸೂಲ ಕಡಿಮೆ ಅಂತ ರೈತರು ಅಂದುಕೊಂಡಿದ್ದರು. ಈಗ ಖರೀದಿ ಕೇಂದ್ರದಲ್ಲಿ ಕಾಟಾಚಾರಕ್ಕೆ ಖರೀದಿ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

50 ಟ್ರ್ಯಾಕ್ಟರ್‌ನಲ್ಲಿ 40 ಟ್ರ್ಯಾಕ್ಟರ್‌ , ತೇವಾಂಶ ಕಡಿಮೆ ಕಾರಣಕ್ಕಾಗಿ ರಿಜೆಕ್ಟ್‌ ಮಾಡುತ್ತಿದ್ದಾರೆ. 20 ದಿನ ಬಾಡಿಗೆ ಕೊಟ್ಟು ಖರೀದಿ ಕೇಂದ್ರಕ್ಕೆ ತಂದಿದ್ದೇವೆ. ಕಾಟಾಚಾರಕ್ಕೆ ಖರೀದಿ ಕೇಂದ್ರ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದ್ದಾರೆ. ಮೆಕ್ಕೆಜೋಳವನ್ನು ಕಡಿಮೆ ದರಕ್ಕೆ ಮಾರಿ ಹೋಗುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News