Tuesday, January 13, 2026
Homeರಾಜ್ಯಜರ್ಮನಿಯ ಚಾನ್ಸೆಲರ್‌ ಫೆಡ್ರಿಕ್‌ ಮೆರ್ಜ್‌ ನೇತೃತ್ವದ ನಿಯೋಗ ಬೆಂಗಳೂರಿಗೆ ಭೇಟಿ

ಜರ್ಮನಿಯ ಚಾನ್ಸೆಲರ್‌ ಫೆಡ್ರಿಕ್‌ ಮೆರ್ಜ್‌ ನೇತೃತ್ವದ ನಿಯೋಗ ಬೆಂಗಳೂರಿಗೆ ಭೇಟಿ

German Chancellor Friedrich Merz visits Bengaluru

ಬೆಂಗಳೂರು, ಜ.13- ಫೆಡರಲ್‌ ರಿಪಬ್ಲಿಕ್‌ ಆಫ್‌ ಜರ್ಮನಿಯ ಚಾನ್ಸೆಲರ್‌ ಫೆಡ್ರಿಕ್‌ ಮೆರ್ಜ್‌ ಅವರು ತಮ ನಿಯೋಗದೊಂದಿಗೆ ಇಂದು ಬೆಂಗಳೂರಿಗೆ ಆಗಮಿಸಿದರು.

ನಾಡುಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಬಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌ ಅವರು ಆತೀಯವಾಗಿ ಸ್ವಾಗತಿಸಿದರು.

ಈ ಸಮಯದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಕೆ.ಜಿ.ಜಗದೀಶ, ಬೆಂಗಳೂರುನಗರ ಜಿಲ್ಲಾಧಿಕಾರಿ ಜಿ.ಜಗದೀಶ್‌, ಬೆಂಗಳೂರು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌, ಬೆಂಗಳೂರು ಪ್ರಾದೇಶಿಕ ಪಾಸ್‌‍ ಪೋರ್ಟ್‌ ಅಧಿಕಾರಿಗಳು ಹಾಗೂ ಜರ್ಮನಿ ಕಾನ್ಸೂಲೇಟ್‌ ಜನರಲ್‌ ನವದೆಹಲಿ ಕಚೇರಿಯ ಅಧಿಕಾರಿಗಳು ಇದ್ದರು.

ಫೆಡರಲ್‌ ರಿಪಬ್ಲಿಕ್‌ ಆಫ್‌ ಜರ್ಮನಿಯ ಚಾನ್ಸಲರ್‌ ಮತ್ತು ಅವರ ನಿಯೋಗವು ಬೆಂಗಳೂರಿನ ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ಇಂದು ಸಂಜೆ ವಾಪಸ್ಸಾಗಲಿದ್ದಾರೆ.

RELATED ARTICLES

Latest News