Thursday, January 8, 2026
Homeರಾಜ್ಯKSRTC ಐಷಾರಾಮಿ ಬಸ್‌‍ಗಳಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ

KSRTC ಐಷಾರಾಮಿ ಬಸ್‌‍ಗಳಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ

Good news for those travelling in KSRTC luxury buses

ಬೆಂಗಳೂರು,ಜ.7- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಬೆಂಗಳೂರಿನಿಂದ ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳ ಮಹಾನಗರಗಳಿಗೆ ಸಂಚರಿಸುವ ವಿವಿಧ ಮಾರ್ಗಗಳ ಪ್ರತಿಷ್ಠಿತ ಬಸ್‌‍ಗಳ ದರದಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದೆ.

ಸೋಮವಾರದಿಂದಲೇ ಜಾರಿಗೆ ಬರುವಂತೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮದ ವತಿಯಿಂದ ಆಯ್ದ ಮಾರ್ಗಗಳಲ್ಲಿ ಸಂಚರಿಸುವ ಪ್ರತಿಷ್ಠಿತ ರಾಜಹಂಸ, ನಾನ್‌ ಎಸಿ ಸ್ಲೀಪರ್‌, ಐರಾವತ, ಐರಾವತ ಕ್ಲಬ್‌ ಕ್ಲಾಸ್‌‍, ಎಸಿ ಸ್ಲೀಪರ್‌, ಮಲ್ಟಿ ಆಕ್ಸೆಲ್‌ ಎಸಿ ಸ್ಲೀಪರ್‌ ಮಾದರಿಯ ಬಸ್‌‍ಗಳ ಪ್ರಯಾಣ ದರದಲ್ಲಿ ರಿಯಾಯಿತಿ ಸಿಗಲಿದೆ. ದೂರದ ಸ್ಥಳಕ್ಕೆ ಪ್ರಯಾಣಿಸುವವರಿಗೆ ಈ ನಿರ್ಧಾರದಿಂದ ಹೆಚ್ಚಿನ ಅನುಕೂಲ ಆಗಲಿದೆ.

ಬಹು ಮಾರ್ಗಗಳಲ್ಲಿ ತನ್ನ ಹಲವಾರು ಪ್ರೀಮಿಯಂ ಬಸ್‌‍ ಸೇವೆಗಳ ದರವನ್ನು ಶೇ. 5ರಿಂದ ಶೇ. 15ರಷ್ಟು ಕಡಿಮೆ ಮಾಡಿದೆ.ಏಪ್ರಿಲ್‌ನಿಂದ ಜೂನ್‌ ಮತ್ತು ಅಕ್ಟೋಬರ್‌ ನಿಂದ ಡಿಸೆಂಬರ್‌ ನಂತಹ ಸಮಯದಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚಿರುತ್ತೆ. ಈ ಸಮಯದಲ್ಲಿ ಕೆಎಸ್‌‍ಆರ್‌ಟಿಸಿ ಸಾಮಾನ್ಯವಾಗಿ ಪ್ರೀಮಿಯಂ ಸೇವೆಗಳ ದರವನ್ನು ಶೇ.10-15ರಷ್ಟು ಹೆಚ್ಚಿಸುತ್ತದೆ. ಆದರೆ ಇದೀಗ ಆಫ್‌ ಸೀಸನ್‌ ಸಮಯದಲ್ಲಿ ಬಸ್‌‍ ಟಿಕೆಟ್‌ ದರ ಇಳಿಸುವ ಮೂಲಕ, ಪ್ರಯಾಣಿಕರಿಗೆ ಇಲಾಖೆ ಬಿಗ್‌ ಆಫರ್‌ ನೀಡುತ್ತಿದೆ.

ಇನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದ್ದು, ಜನವರಿ 5ರಿಂದಲೇ ದರ ರಿಯಾಯಿತಿ ಜಾರಿಯಾಗಿದೆ. ರಾಜಹಂಸ, ನಾನ್‌ ಎಸಿ ಸ್ಲೀಪರ್‌, ಐರಾವತ, ಐರಾವತ ಕ್ಲಬ್‌ ಕ್ಲಾಸ್‌‍, ಎಸಿ ಸ್ಲೀಪರ್‌, ಮಲ್ಟಿ ಆಕ್ಸೆಲ್‌ ಎಸಿ ಸ್ಲೀಪರ್‌ ಸಾರಿಗೆ ಬಸ್‌‍ಗಳ ಟಿಕೆಟ್‌ ದರದಲ್ಲಿ ರಿಯಾಯಿತಿ ನೀಡಲಾಗಿದೆ.

ಬೆಂಗಳೂರಿನಿಂದ ಹೊರಡುವ ಬೆಂಗಳೂರು-ಮಂಗಳೂರು, ಬೆಂಗಳೂರು-ಕುಂದಾಪುರ, ಬೆಂಗಳೂರು-ಉಡುಪಿ, ಬೆಂಗಳೂರು-ಧರ್ಮಸ್ಥಳ, ಬೆಂಗಳೂರು-ಕುಕ್ಕೆಸುಬ್ರಮಣ್ಯ, ಬೆಂಗಳೂರು-ಪುತ್ತೂರು, ಬೆಂಗಳೂರು-ಮಡಿಕೇರಿ/ವಿರಾಜಪೇಟೆ. ಬೆಂಗಳೂರು-ದಾವಣಗೆರೆ, ಬೆಂಗಳೂರು-ಶಿವಮೊಗ್ಗ/ಸಾಗರ ಮಾರ್ಗಗಳ ಬಸ್‌‍ಗಳ ಟಿಕೆಟ್‌ ದರದಲ್ಲಿ ಶೇಕಡ 5 ರಿಂದ 15 ರವರೆಗೆ ರಿಯಾಯಿತಿ ನೀಡಲು ನಿಗಮ ನಿರ್ಧರಿಸಿದೆ.

ಇದರೊಂದಿಗೆ ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದರಾಬಾದ್‌/ಸಿಕಂದರಾಬಾದ್‌, ಬೆಂಗಳೂರು-ತಿರುಪತಿ, ಬೆಂಗಳೂರು-ಮಂತ್ರಾಲಯ, ಬೆಂಗಳೂರು-ಪುಣೆ/ಮುಂಬೈ, ಬೆಂಗಳೂರು-ವಿಜಯವಾಡ, ಬೆಂಗಳೂರು-ಎರ್ನಾಕುಲಂ, ಬೆಂಗಳೂರು-ಮದುರೈ, ಬೆಂಗಳೂರು-ಕೋಯಿಮತ್ತೂರು, ಬೆಂಗಳೂರು-ತಿಶ್ರೂರು ಇನ್ನು ಕೆಲವು ಆಯ್ದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಎಸಿ ಸ್ಲೀಪರ್‌ ಮಾದರಿಯ ಬಸ್‌‍ಗಳ ಟಿಕೆಟ್‌ ದರದಲ್ಲಿ (ಶೇಕಡ 5 ರಿಂದ 15 ರಿಯಾಯಿತಿ) ಭರ್ಜರಿ ರಿಯಾಯಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿಗಮದ ಅಧಿಕೃತ ವೆಬ್‌ಸೈಟ್‌ನಲ್ಲಿ ಞಡಿಣಛಿ.ಟಿ ಪಡೆಯಬಹುದಾಗಿದೆ.

ಬಸ್‌‍ ಪ್ರಯಾಣದ ಹೊಸ, ಹಳೆ ದರ ಬೆಂಗಳೂರು-ಶಿರಡಿಗೆ ಮೊದಲು 2500 ರೂಪಾಯಿ ಇತ್ತು. ಈ ರಿಯಾಯಿತಿ ಅನ್ವಯವಾಗಿ ಸದ್ಯ ಅದೇ ಮಾರ್ಗದ ಪ್ರಯಾಣದ ದರವು 2000 ರೂಪಾಯಿಗೆ ಇಳಿಕೆ ಆಗಿದೆ. ಇದರಿಂದ ಒಬ್ಬ ಪ್ರಯಾಣಿಕರಿಗೆ ಒಂದು ಪ್ರಯಾಣದಲ್ಲಿ 500 ರೂಪಾಯಿ ಉಳಿತಾಯವಾಗಲಿದೆ.

  • ಬೆಂಗಳೂರು-ಮುಂಬೈ ಬಸ್‌‍ ಟಿಕೆಟ್‌ ದರ: ಮೊದಲು 2500 ರೂ., ಈಗ 2000 ರೂಪಾಯಿ
  • ಬೆಂಗಳೂರು- ಪುಣೆ ಬಸ್‌‍ ಟಿಕೆಟ್‌ ದರ: ಮೊದಲು 2300 ರೂ., ಈಗ 1700 ರೂಪಾಯಿ
  • ಬೆಂಗಳೂರು-ಮುರಡೇಶ್ವರ ಟಿಕೆಟ್‌ ದರ: ಅಂಬಾರಿ ಉತ್ಸವ ಕ್ರಮವಾಗಿ 1900 ರೂ. ಸದ್ಯ 1700 ರೂಪಾಯಿ, ಅಂಬಾರಿ ಡ್ರೀಮ್‌ ಬಸ್‌‍ 1800 ರೂ. ಈಗ 1500 ರೂಪಾಯಿ.
  • ಬೆಂಗಳೂರು-ಉಡುಪಿ/ಮಣಿಪಾಲ: ಅಂಬಾರಿ ಉತ್ಸವ ಬಸ್‌‍- ಮೊದಲು 1620 ರೂ, ಈಗ 1450ರೂ, ಅಂಬಾರಿ ಡ್ರೀಮ್‌ ಬಸ್‌‍ ಕ್ರಮವಾಗಿ 1560 ರೂ. 1300 ರೂ, ಐರಾವತ 2.0 ಬಸ್‌‍ 1440 ರೂ. ಈಗ 1260, ಐರಾವರ ಕ್ಲಬ್‌ ಕ್ಲಾಸ್‌‍ 1270 ರೂ. ಇದೀಗ 1060 ರೂಪಾಯಿ ಆಗಿದೆ.
  • ಬೆಂಗಳೂರು-ದಾವಣಗೆರೆ ಬಸ್‌‍ ಐರಾವತ ಬಸ್‌‍ ಟಿಕೆಟ್‌ ಬೆಲೆ ಮೊದಲು 740 ರೂ. ಈಗ 700 ರೂಪಾಯಿ
  • ಬೆಂಗಳೂರು ಏರ್‌ಪೋಟ್‌- ದಾವಣಗೆರೆ ಫ್ಲೈ ಬಸ್‌‍ ಪ್ರಯಾಣದ ದರ 1250 ರೂ. ನಿಗದಿಪಡಿಸಲಾಗಿದೆ ಎಂದು ಕೆಎಸ್‌‍ರ್‌ಟಿಸಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
RELATED ARTICLES

Latest News