Tuesday, December 30, 2025
Homeರಾಜ್ಯಕೋಗಿಲು ಲೇಔಟ್‌ನ ಅಕ್ರಮ ವಾಸಿಗಳಿಗೆ ಮನೆ ಭಾಗ್ಯ : ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ

ಕೋಗಿಲು ಲೇಔಟ್‌ನ ಅಕ್ರಮ ವಾಸಿಗಳಿಗೆ ಮನೆ ಭಾಗ್ಯ : ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ

Houses for illegal residents of Kogilu Layout: Public outrage against government

ಬೆಂಗಳೂರು,ಡಿ.30- ರಾಜಧಾನಿ ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಕಾನೂನು ಬಾಹಿರವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಂಡವರಿಗೆ ಸರ್ಕಾರ ಹೊಸದಾಗಿ ಮನೆಗಳನ್ನು ನಿರ್ಮಿಸಿ ಕೊಡಲು ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರಿ ಜಾಗದಲ್ಲಿ ನಿವೇಶನ ಮಾಡಿ ಮನೆಗಳನ್ನು ಕಟ್ಟಿಕೊಂಡಿರುವುದೇ ಕಾನೂನು ಉಲ್ಲಂಘನೆ. ವಾಸ್ತವತೆ ಹೀಗಿರುವಾಗ ಸರ್ಕಾರ ಅವರಿಗೆ ಯಾವ ಅರ್ಹತೆಯ ಮೇಲೆ ಹೊಸದಾಗಿ ಮನೆಗಳನ್ನು ನಿರ್ಮಿಸಿ ಕೊಡುತ್ತದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಈ ಹಿಂದೆ ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಬೆಳಗಾವಿ ಸೇರಿದಂತೆ ನಾನಾ ಕಡೆ ಸರ್ಕಾರಿ ಜಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಾಗ ಕನಿಷ್ಠ ಪಕ್ಷ ಅವರಿಗೆ ಒಂದೇ ಒಂದು ನೋಟಿಸ್‌‍ ಕೂಡ ಕೊಡದೆ ರಾತ್ರೋರಾತ್ರಿ ತೆರವುಗೊಳಿಸಿ ಎತ್ತಂಗಡಿ ಮಾಡಲಾಗಿತು.್ತ ಅಂದು ಯಾವ ಸರ್ಕಾರವು ಸಂತ್ರಸ್ತರಿಗೆ ಸಹಾನುಭೂತಿ, ಅನುಕಂಪ, ಇಲ್ಲವೇ ಮಾನವೀಯತೆ ತೋರದೆ ನಿರ್ದಾಕ್ಷಣ್ಯವಾಗಿ ಮಕ್ಕಳು, ಹಿರಿಯರು ಮಹಿಳೆಯರು ಎನ್ನದೆ ಎಲ್ಲರನ್ನೂ ಬೀದಿಗೆ ಹಾಕಿತ್ತು.

ಮನೆ ಕಳೆದುಕೊಂಡ ಸಂತ್ರಸ್ಥರು ಅಂದು ಸಾತ್ವಿಕವಾಗಿ ಸರ್ಕಾರ ಮತ್ತು ಸ್ಥಳೀಯ ಆಡಳಿತದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರೆ ವಿನಃ ಆಕಾಶಭೂಮಿ ಒಂದಾಗುವಂತೆ ಹಾದಿ-ಬೀದಿಯಲ್ಲಿ ರಂಪಾಟ ಮಾಡಿರಲಿಲ್ಲ. ಕೋಗಿಲು ಪ್ರದೇಶದ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದೇ ಕಾನೂನುಬಾಹಿರವಾಗಿರುವಾಗ ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಿಕೊಡುವುದು ಎಷ್ಟರಮಟ್ಟಿಗೆ ಸರಿ ? ಎಂಬ ಮೂಲಭೂತ ಪ್ರಶ್ನೆಯನ್ನು ಎತ್ತುತ್ತಿದ್ದಾರೆ.

ಒಂದು ವೇಳೆ ಇವರು ಕಾನುನುಬದ್ಧವಾಗಿ ನಿವೇಶನಗಳನ್ನು ಖರೀದಿಸಿ ಮನೆಗಳನ್ನು ನಿರ್ಮಿಸಿಕೊಂಡಿದ್ದರೆ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲವೇ? ಕಾನೂನು ಬದ್ಧವಾಗಿ ಇರುವಾಗ ಮನೆಗಳನ್ನು ಹೇಗೆ ತೆರವುಗೊಳಿಸಿದರು? ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಬೇಕಿತ್ತು. ಅಲ್ಲದೆ ಈಗ ಸರ್ಕಾರವೇ ಹಣ ಹಾಕಿ ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡುತ್ತೇನೆ ಎಂದು ಹೇಳುತ್ತಿರುವುದು ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸಿಕೊಳ್ಳುವ ಕಾರಣಕ್ಕಾಗಿ ಸರ್ಕಾರ ಮನೆ ನಿರ್ಮಿಸಿಕೊಡಲು ಮುಂದಾಗಿದೆ. ಈ ಹಿಂದೆ ಅನೇಕ ಮನೆಗಳನ್ನು ತೆರವು ಮಾಡಲಾಗಿತ್ತು. ಅದರಲ್ಲಿ ಬಹುತೇಕರು ದಲಿತರು, ಪರಿಶಿಷ್ಟ ಪಂಗಡ, ಹಿಂದುಳಿದವರು, ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚಾಗಿದ್ದರು. ಆದರೆ. ಅಂದು ಮನೆಗಳನ್ನು ತೆರವುಗೊಳಿಸಿದಾಗ ಇಲ್ಲದ ಮಾನವೀಯತೆ ಈಗ ರಾತೋರಾತ್ರಿ ಹೇಗೆ ಬಂತು? ಎಂದು ಮನೆ ಕಳೆದುಕೊಂಡವರೇ ಪ್ರಶ್ನೆ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಬಿಡಿಎ, ಬಿಬಿಎಂಪಿ, ಅರಣ್ಯ, ಕಂದಾಯ ಸೇರಿದಂತೆ ಇತರೆ ಇಲಾಖೆಗಳಿಗೆ ಸೇರಿದ ಜಮೀನಿನಲ್ಲಿ ನಿವೇಶನಗಳನ್ನು ನಿರ್ಮಿಸಿಕೊಂಡರೆ ಅಂತವರಿಗೆ ಇಂತಹ ಸಮಯದಲ್ಲಿ ಮನೆಗಳನ್ನು ತೆರವು ಮಾಡುತ್ತೇವೆ. ನೀವು ಮನೆ ಖಾಲಿ ಮಾಡಿ ಎಂದು ನೋಟಿಸ್‌‍ ನೀಡಲಾಗುತ್ತದೆ. ಇವರಿಗೆ ಮೊದಲೇ ಇದರ ಸೂಚನೆಯನ್ನು ನೀಡಲಾಗಿತ್ತು.

ಈ ಹಿಂದೆ ಸಾವಿರಾರು ಮನೆಗಳನ್ನು ತೆರವುಗೊಳಿಸಿದಾಗ ಯಾವುದೇ ನೋಟಿಸ್‌‍ ಕೂಡ ಕೊಡದೆ ತೆರವು ಮಾಡಿರುವ ನಿದರ್ಶನಗಳು ಸಾಕಷ್ಟಿವೆ. ಈಗ ಒಂದು ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಸರ್ಕಾರದ ಈ ಕ್ರಮ ಸರಿಯೇ ಎಂಬ ಪ್ರಶ್ನೆ ಸಾರ್ವಜನಿಕದಲ್ಲಿ ಕೇಳಿ ಬರುತ್ತದೆ.

ಕರ್ನಾಟಕದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರ ಇರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲವೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಮೇಲೆ ಹೈಕಮಾಂಡ್‌ ನಾಯಕರು ಒತ್ತಡ ಹಾಕಿ ಮನೆ ನಿರ್ಮಿಸಿ ಕೊಡುವಂತೆ ಸೂಚಿಸಿದ್ದು ಸರಿಯೇ ಎಂಬ ಪ್ರಶ್ನೆಯನ್ನು ಮಾಡುತ್ತಿದ್ದಾರೆ. ಅದರಲ್ಲೂ ಕೇರಳದ ಸಂಸದ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಅವರ ಒಂದೇ ಒಂದು ಟ್ವೀಟ್‌ ಮಾಡಿದರು ಎಂಬ ಕಾರಣಕ್ಕಾಗಿ ಸರ್ಕಾರ ಹೊಸದಾಗಿ ಮನೆ ನಿರ್ಮಾಣ ಮಾಡಲು ಮುಂದಾಗಿರುವುದು ಹಲವರ ಕಣ್ಣು ಕೆಂಪಾಗುವಂತೆ ಮಾಡಿದೆ.

ಸಿಎಂ ಕುರ್ಚಿ ಮೇಲೆ ಕಣ್ಣು :
ಅಂದಹಾಗೆ ಕರ್ನಾಟಕದ ಕೋಗಿಲು ಲೇಔಟ್‌ನಲ್ಲಿ ಮನೆಗಳನ್ನು ತೆರವುಗೊಳಿಸಿರುವುದಕ್ಕೂ, ಮುಂದಿನ ವರ್ಷ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೂ ಒಂದಕ್ಕೊಂದು ಸಂಬಂಧವಿದೆ ಎನ್ನಲಾಗುತ್ತಿದೆ.

ಇತ್ತೀಚಿಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಆಡಳಿತರೂಢ ಎಲ್‌ಡಿಎಫ್‌ ಹಿಂದಿಕ್ಕಿ ಪ್ರತಿಪಕ್ಷ ಸ್ಥಾನದಲ್ಲಿದ್ದ ಯುಡಿಎಫ್‌ ಹೆಚ್ಚಿನ ಸ್ಥಾನ ಗಳಿಸಿತ್ತು. ಅದರಲ್ಲೂ ಎಡಪಂಥೀಯರ ಭದ್ರಕೋಟೆ ಎನಿಸಿದ ಕೇರಳದ ರಾಜಧಾನಿ ತಿರುವಂತನಪುರಂನಲ್ಲಿ ಕಾಂಗ್ರೆಸ್‌‍ ಮತ್ತು ಎಡಪಕ್ಷಗಳನ್ನು ಹಿಂದಿಕ್ಕಿ ಬಿಜೆಪಿ ಮೊದಲ ಬಾರಿಗೆ ಅಧಿಕಾರ ಗದ್ದುಗೆ ಹಿಡಿದಿದ್ದು ಎರಡು ಪಕ್ಷಗಳಿಗೆ ನುಂಗಲಾದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ನಾರಾಯಣ ಗುರುಗಳ ತವರೂರಾದ ಕೇರಳದಲ್ಲಿ ಇತ್ತೀಚೆಗೆ ರಾಜಕೀಯ ಧೃವೀಕರಣ ನಡೆಯುತ್ತಿರುವುದು ಸುಳ್ಳಲ್ಲ.

ಹಿಂದೂ ಸಮುದಾಯದವರು ನಿಧಾನವಾಗಿ ಬಿಜೆಪಿ ಕಡೆ ವಾಲುತ್ತಿದ್ದರೆ, ಎಂದಿನಂತೆ ಅಲ್ಪಸಂಖ್ಯಾತರು ಮತ್ತಿತರರು ಎಲ್‌ಡಿಎಪ್‌ ಮತ್ತು ಯುಡಿಎಫ್‌ ನಡುವೆ ಹಂಚಿ ಹೋಗಿದ್ದಾರೆ. ಮುಂದಿನ ವರ್ಷ ಕೇರಳದಲ್ಲಿ ವಿಧಾನಸಭೆ ಚುನಾವಣೆ ಜರುಗಲಿದ್ದು ಸತತ ಎರಡು ಬಾರಿ ಅಧಿಕಾರ ನಡೆಸಿರುವ ಮುಖ್ಯಮಂತ್ರಿ ಪಿಣರಾಯಿ ನೇತೃತ್ವದ ಎಲ್‌ಡಿಎಫ್‌ ಆಡಳಿತ ವಿರೋಧಿ ಅಲೆಗೆ ಸಿಲುಕಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದಿರುವ ಯುಡಿಎಫ್‌ ಈ ಬಾರಿ ಕೇರಳದಲ್ಲಿ ಅಧಿಕಾರದ ಗದ್ದಿಗೆ ಹಿಡಿಯಲೇ ಬೇಕೆಂಬ ಹಠಕ್ಕೆ ಬಿದ್ದಿದೆ.

ದೇಶದಲ್ಲಿ ಕಾಂಗ್ರೆಸ್‌‍ ಅನೇಕ ರಾಜ್ಯಗಳಲ್ಲಿ ಸೋತು ಸುಣ್ಣವಾಗಿರುವಾಗ ಅದಕ್ಕೆ ಆಸರೆಯಾಗಿರುವುದು ಕೇರಳ. ಒಂದು ವೇಳೆ ಕೇರಳದಲ್ಲಿ ಯುಡಿಎಫ್‌ ಅಧಿಕಾರಕ್ಕೆ ಬಂದರೆ ಸಹಜವಾಗಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕೆ.ಸಿ.ವೇಣುಗೋಪಾಲ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್‌‍ ಪಕ್ಷದ ಹಿರಿಯ ನಾಯಕ ಎ.ಕೆ.ಆ್ಯಂಟನಿ ಸದ್ಯಕ್ಕೆ ಸಕ್ರಿಯ ರಾಜಕಾರಣದಲ್ಲಿ ಇಲ್ಲ. ಗಾಂಧಿ ಕುಟುಂಬಕ್ಕೆ ಅತ್ಯಂತ ಆತೀಯರಾಗಿರುವ ವೇಣುಗೋಪಾಲ್‌ ಕೇರಳದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯೂ ಹೌದು.

ಕಾಂಗ್ರೆಸ್‌‍ಗೆ ಭದ್ರಕೋಟೆಯಾಗಿರುವ ಅಲ್ಪಸಂಖ್ಯಾತರು ಮುನಿಸಿಕೊಂಡರೆ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂಬ ಭೀತಿಯಿಂದಾಗಿ ಬೆಂಗಳೂರಿನ ಕೋಗಿಲು ಪ್ರದೇಶದಲ್ಲಿ ವಿಶೇಷ ಮುತುವರ್ಜಿ ವಹಿಸಿ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರಕ್ಕೆ ಸೂಚನೆ ಕೊಟ್ಟಿರಬಹುದು ಎಂಬ ಆರೋಪ ಕೇಳಿ ಬರುತ್ತಿದೆ.

ಅಲ್ಪಸಂಖ್ಯಾತರನ್ನು ಓಲೈಸಿಕೊಂಡರೆ ಕೇರಳದಲ್ಲಿ ಹೆಚ್ಚಾಗಿರುವ ಈ ಸಮುದಾಯದವರು ಕಾಂಗ್ರೆಸ್ಸಿಗೆ ಬೆನ್ನೆಲುಬಾಗಿ ನಿಲ್ಲಬಹುದೆಂಬ ದೂರದೃಷ್ಟಿಯೂ ಇದೆ. ಆದರೆ ಸರ್ಕಾರದ ನಡಿಗೆ ಸಾರ್ವಜನಿಕ ವಲಯದಲ್ಲಿ ಬೇರೆಯದೇ ಆದ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಅಲ್ಪಸಂಖ್ಯಾತರಿಗೆ ಮನೆಗಳನ್ನು ನಿರ್ಮಿಸಿಕೊಡಲು ನಮದೇನೂ ಅಭ್ಯಂತರವಿಲ್ಲ ಆದರೆ ಕೇವಲ ಮತಕ್ಕೋಸ್ಕರ ಅವರಿಗೆ ಮನೆ ಕಟ್ಟಿಕೊಟ್ಟು ನಮನ್ನು ಬೀದಿಗೆ ಬೀಳಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಂತ್ರಸ್ತರ ಅಳಲು. ಉತ್ತರಿಸಬೇಕಾದ ಸರ್ಕಾರ ಇಕ್ಕಟ್ಟಿನಲ್ಲಿದೆ.

RELATED ARTICLES

Latest News