ಬೆಂಗಳೂರು,ಜ.9- ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ.2025ನೇ ಸಾಲಿನ ವಿಶೇಷ ಪ್ರಶಸ್ತಿಯನ್ನು ಈ ಬಾರಿ ಹಿರಿಯ ಪತ್ರಕರ್ತೆ ಸರಿತಾ ರೈ ಅವರಿಗೆ ನೀಡಲಾಗುತ್ತಿದ್ದು, ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ.
ಉಳಿದಂತೆ ಡಿ.ಕುಮಾರಸ್ವಾಮಿ, ಬನಶಂಕರಿ ಆರಾಧ್ಯ, ಹೇಮಾ ವೆಂಕಟ್, ವೈ.ಎಲ್.ಮಂಜುನಾಥ್, ಅನಂತ್ ನಾಡಿಗ್ ಸೇರಿದಂತೆ 30 ಮಂದಿ ಹಿರಿಯ ಪತ್ರಕರ್ತರಿಗೆ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಭಿಮಾನಿ ದತ್ತಿ ಪ್ರಶಸ್ತಿಗೆ ವಿಜಯವಾಣಿ ಪತ್ರಿಕೆಯ ಹುಣಸೂರು ವರದಿಗಾರ ಶಿವು ಅವರಿಗೆ ಲಭಿಸಿದ್ದು, ಅರಗಿಣಿ ದತ್ತಿ ಪ್ರಶಸ್ತಿ ಸಿನಿಮಾ ಪತ್ರಕರ್ತ ಚೇತನ್ ನಾಡಿಗೇರ ಅವರಿಗೆ ನೀಡಲಾಗುತ್ತಿದೆ.
ಉಳಿದಂತೆ ಮೈಸೂರು ದಿಗಂತ ದತ್ತಿ ಪ್ರಶಸ್ತಿಗೆ ಬೆಳಗಾವಿಯ ಪ್ರಜಾವಾಣಿ ಪತ್ರಿಕೆಯ ಸಂತೋಷ್ ಇ.ಚಿನಗೂಡಿ, ಅಭಿಮನ್ಯು ದತ್ತಿ ಪ್ರಶಸ್ತಿ ವಿಜಯಕರ್ನಾಟಕದ ಸಿಂಧನೂರಿನ ಚಂದ್ರಶೇಖರ್ ಬೆನ್ನೂರು ಅವರಿಗೆ ಪ್ರಜಾ ಸಂದೇಶ ದತ್ತಿ ಪ್ರಶಸ್ತಿ, ಟಿವಿ5 ಕೊಪ್ಪಳ ಜಿಲ್ಲಾ ವರದಿಗಾರ ನಾಗರಾಜು ವೈ. ಅವರು ಆಯ್ಕೆಯಾಗಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗೆ ಡಾ.ಎ.ನಾರಾಯಣ, ಬಸವರಾಜ ದೊಡ್ಡಮನಿ, ಕೃಷಿ ಪತ್ರಿಕೋದ್ಯಮ ಪ್ರಶಸ್ತಿಗೆ ಸಿದ್ದೇಶ್ ತ್ಯಾಗಟೂರು, ಸಿ.ವಿ.ರಾಜಗೋಪಾಲ್ ದತ್ತಿ ಪ್ರಶಸ್ತಿಗೆ ಪ್ರಹ್ಲಾದ್ ಕುಳಲಿ ಮತ್ತು ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿಗೆ ಕೆ.ಆನಂದ್ ಶೆಟ್ಟಿ ಆಯ್ಕೆಯಾಗಿದ್ದಾರೆ ಎಂದು ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾದ ಆಯಿಷಾಖಾನಂ, ಕಾರ್ಯದರ್ಶಿ ಸಹನಾ ಅವರು ತಿಳಿಸಿದ್ದಾರೆ.
