ಬೆಂಗಳೂರು, ಡಿ.31- ಕೋಗಿಲು ಕ್ರಾಸ್ನ ಫಕೀರ್ ಬಡಾವಣೆಯ ನಿರಾಶ್ರೀತರ ದಾಖಲೆ ಕಲೆ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. ನಗರ ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರು ಉತ್ತರ ಪಾಲಿಕೆ, ರಾಜೀವ್ಗಾಂಧಿ ವಸತಿ ಯೋಜನೆ ಹಾಗೂ ಸ್ಲಮ್ ಬೋರ್ಡ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.
ನಾಲ್ಕು ಇಲಾಖೆಯ ಅಧಿಕಾರಿಗಳು ಇಂದು ಖುದ್ದು ಸಂತ್ರಸ್ಥರ ಮನೆ ಬಳಿಗೆ ತೆರಳಿ ಅವರಿಂದ 18 ಮಾದರಿಯ ದಾಖಲೆ ಸಂಗ್ರಹಿಸುತ್ತಿದ್ದಾರೆ.ಸ್ಥಳದಿಂದ ತೆರವುಗೊಳಿಸಿರುವ ಮನೆ ಮನೆಗಳ ಮುಂದೆ ತೆರಳಿ ಮನೆ ಯಜಮಾನರಿಂದ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.
ಸ್ಥಳೀಯರ ಆಧಾರ್ ಕಾರ್ಡ್ , ವೋಟರ್ ಐಡಿ, ರೇಶನ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಬ್ಯಾಕ್ ಡೀಟೈಲ್್ಸ, ಮಾತೃಭಾಷೆ, ವಿದ್ಯುತ್ ಬಿಲ್, ಗ್ಯಾಸ್ ಬಿಲ್ ಹಾಗೂ ಜಿಪಿಎಸ್ ಫೋಟೋಗಳನ್ನು ಸಂಗ್ರಹ ಮಾಡಲಾಗುತ್ತಿದೆ.
