Thursday, December 11, 2025
Homeರಾಜ್ಯಸಚಿವಾಲಯದಲ್ಲಿ ನೇರ ನೇಮಕಾತಿ ದಾಖಲಾತಿಗೆ ಸಿಎಸ್‌‍ಗೆ ಪತ್ರ

ಸಚಿವಾಲಯದಲ್ಲಿ ನೇರ ನೇಮಕಾತಿ ದಾಖಲಾತಿಗೆ ಸಿಎಸ್‌‍ಗೆ ಪತ್ರ

Letter to CS for direct appointment documentation in the ministry

ಬೆಳಗಾವಿ,ಡಿ.9- ಸಚಿವಾಲ ಯದ 8 ಅಭ್ಯರ್ಥಿಗಳ ನೇರ ನೇಮಕಾತಿ ಮಾಡಿಕೊಂಡಿರುವ ಕುರಿತು ತಮಗೆ ಸೂಕ್ತ ದಾಖಲೆಗಳನ್ನು ನೀಡಬೇಕು ಎಂದು ವಿಧಾನಪರಿಷತ್‌ ಕಾಂಗ್ರೆಸ್‌‍ ಸದಸ್ಯ ನಾಗರಾಜ್‌ ಯಾದವ್‌ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.

ಒಂದು ವೇಳೆ ತಮಗೆ ದಾಖಲೆಗಳನ್ನು ನೀಡದಿದ್ದರೆ ವಿಧಾನಪರಿಷತ್‌ ಕಾರ್ಯದರ್ಶಿ ವಿರುದ್ಧ ಅಧಿಕಾರ ದುರುಪಯೋಗ ಆರೋಪದಡಿ ದೂರು ದಾಖಲಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಅಲ್ಲದೆ ಈ ಅಧಿವೇಶನದಲ್ಲೇ ಸಭಾಪತಿ ಬಸವರಾಜ್‌ ಹೊರಟ್ಟಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ವಿಧಾನಪರಿಷತ್‌ ಸಚಿವಾಲಯಕ್ಕೆ ಅಭ್ಯರ್ಥಿ ಗಳ ನೇರ ನೇಮಕಾತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನೇಮಕಾತಿ ಮಾಡಲಾಗಿದೆ. ಇದರ ಹಿಂದೆ ಸಭಾಪತಿ ಹೊರಟ್ಟಿ ಅವರ ಕೈವಾಡವಿದೆ. ತಮಗೆ ಯಾವ ನಿಯಮದಡಿ ನೇರ ನೇಮಕಾತಿ ಮಾಡಿಕೊಂಡಿದ್ದೀರಿ? ಎಂಬುದರ ಕುರಿತು ದಾಖಲೆಗಳನ್ನು ಒದಗಿಸಬೇಕೆಂದು ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಸದಸ್ಯರಾಗಿ ನನಗೆ ಇದರ ಮಾಹಿತಿ ಪಡೆಯುವ ಹಕ್ಕು ಕಾನೂನಿನಲ್ಲಿ ಇದೆ. ನೇರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವ ವಾಸನೆ ಕಂಡುಬಂದಿದೆ. ನಾನೊಬ್ಬ ಸದಸ್ಯನಾಗಿ ಅದರ ಮಾಹಿತಿ ಪಡೆಯುವುದು ನನ್ನ ಹಕ್ಕು. ನನ್ನ ಪತ್ರಕ್ಕೆ ನೀವು ಸೂಕ್ತವಾದ ದಾಖಲೆಗಳನ್ನು ಒದಗಿಸುವಂತೆ ಕೋರಿದ್ದಾರೆ.

ಹಾಗೊಂದು ವೇಳೆ ತನ್ನ ಪತ್ರವನ್ನು ನಿರ್ಲಕ್ಷಿಸಿ ದಾಖಲೆ ಕೊಡದಿದ್ದರೆ ತಮ ವಿರುದ್ಧ ದೂರು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಸಹ ಕೊಟ್ಟಿದ್ದಾರೆ. ಇನ್ನು ನಾಗರಾಜ್‌ ಯಾದವ್‌ ತಮ ಪತ್ರದಲ್ಲಿ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಹೇಳಿದ್ದಾರೆ.

ನಿಯಮಗಳ ಪ್ರಕಾರ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಬೇಕಾದರೆ ಸದನ ಆರಂಭಕ್ಕೂ ಮುನ್ನವೇ ಅಂದರೆ 15 ದಿನಗಳ ಮುಂಚಿತವಾಗಿ ನೋಟಿಸ್‌‍ ನೀಡಬೇಕು. ಈಗ ನಾಗರಾಜ್‌ ಯಾದವ್‌ ಬರೆದಿರುವ ಪತ್ರವು ಮಾನ್ಯವಾಗುತ್ತದೆಯೇ ಎಂಬ ಮೂಲಭೂತ ಪ್ರಶ್ನೆ ಎದುರಾಗಿದೆ.ಅಲ್ಲದೆ ಆ ಪತ್ರವನ್ನು ಬೆಂಬಲಿಸಿ ಸದಸ್ಯರು ಸಹಿ ಹಾಕಬೇಕು. ಕೇವಲ ನಾಗರಾಜ್‌ ಯಾದವ್‌ ಮಾತ್ರ ಪತ್ರ ಬರೆದಿರುವುದರಿಂದ ಕಾರ್ಯದರ್ಶಿಗಳ ನಿರ್ಧಾರವನ್ನು ಕಾದು ನೋಡಬೇಕಿದೆ.

RELATED ARTICLES

Latest News