Wednesday, December 24, 2025
Homeರಾಜ್ಯವಸತಿ ಸಚಿವ ಜಮೀರ್‌ ಅಹಮದ್‌ ಅವರ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಶಾಕ್..!

ವಸತಿ ಸಚಿವ ಜಮೀರ್‌ ಅಹಮದ್‌ ಅವರ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಶಾಕ್..!

Lokayukta shocks Housing Minister Zameer Ahmed's personal secretary..!

ಬೆಂಗಳೂರು, ಡಿ.24- ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಆಪ್ತ ಕಾರ್ಯದರ್ಶಿ ಹಾಗೂ ಹಿರಿಯ ಕೆಎಎಸ್‌‍ ಶ್ರೇಣಿ ಅಧಿಕಾರಿ ಸರ್ಫರಾಜ್‌ ಖಾನ್‌ ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಸರ್ಫ್‌ರಾಜ್‌ ಖಾನ್‌ ಅವರು ಹಲಸೂರು ನಿವಾಸ ಸೇರಿದಂತೆ ರಾಜ್ಯದ್ಯಾಂತ ಇರುವ ಅವರ ಹತ್ತಕ್ಕೂ ಹೆಚ್ಚು ಕಟ್ಟಡಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಖಾನ್‌ ಅವರ ವಿರುದ್ಧ ಬೇನಾಮಿ ಹಾಗೂ ಅಕ್ರಮ ಆಸ್ತಿ ಸಂಪಾದನೆ ದೂರಿನ ಹಿನ್ನೆಲೆಯಲ್ಲಿ ಇಂದು ಬೆಂಗಳೂರು, ಕೊಡಗು ಸೇರಿದಂತೆ ಅವರ ಒಡೆತನದ ಹತ್ತಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳು ಹಾಗೂ ರೆಸಾರ್ಟ್‌ಗಳ ಮೇಲೆ ದಾಳಿ ನಡೆಸಲಾಗಿದೆ.

ಹಲಸೂರಿನಲ್ಲಿರುವ ಸರ್ದಾರ್‌ ಸರ್ಫರಾಜ್‌ ಖಾನ್‌ ಅವರ ಮನೆ ಮತ್ತು ಸಂಬಂಧಿಕರ ನಿವಾಸ ಸೇರಿದಂತೆ ಒಟ್ಟು ಐದು ಕಡೆ ಬೆಂಗಳೂರಿನಲ್ಲೇ ದಾಳಿ ನಡೆದಿದೆ ಎಂದು ಮೂಲಗಳು ಈಸಂಜೆಗೆ ತಿಳಿಸಿವೆ. ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡು ದಾಖಲೆಯಿಲ್ಲದ ಅಪಾರ ಪ್ರಮಾಣದ ನಗದನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಕೆಎಎಸ್‌‍ ಅಧಿಕಾರಿಯಾಗಿರುವ ಸರ್ಫ್‌ರಾಜ್‌ ಖಾನ್‌ ಅವರು ರಾಜಕೀಯ ಪ್ರಾಬಲ್ಯ ಹೊಂದಿರುವ ವ್ಯಕ್ತಿಯಾಗಿದ್ದು, ಅವರು ಈ ಹಿಂದೆ ಬಿಬಿಎಂಪಿಯಲ್ಲಿ ಯಲಹಂಕ ವಲಯದ ಜಂಟಿ ಆಯುಕ್ತ, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ನಂತರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ವಸತಿ ಸಚಿವ ಜಮೀರ್‌ ಆಹದ್‌ಖಾನ್‌ ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

RELATED ARTICLES

Latest News