Friday, December 12, 2025
Homeರಾಜ್ಯಜೈಲಿನಲ್ಲಿ ಖೈದಿಗಳಿಗೆ ರಾಜ್ಯಾತಿಥ್ಯ ನೀಡುತ್ತಿರುವ ಕುರಿತು ಪರಿಷತ್‌ನಲ್ಲಿ ಪ್ರಸ್ತಾಪ

ಜೈಲಿನಲ್ಲಿ ಖೈದಿಗಳಿಗೆ ರಾಜ್ಯಾತಿಥ್ಯ ನೀಡುತ್ತಿರುವ ಕುರಿತು ಪರಿಷತ್‌ನಲ್ಲಿ ಪ್ರಸ್ತಾಪ

Council Session

ಬೆಳಗಾವಿ,ಡಿ.11- ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್‌ ಸರ್ಜಿ ಅವರು ವಿಷಯ ಪ್ರಸ್ತಾಪಿಸಿದರು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ ವಿಷಯವನ್ನು ಸಹ ಅವರು ಪ್ರಸ್ತಾಪ ಮಾಡಿದರು.

ನಟ ದರ್ಶನ್‌ ಪ್ರಕರಣವೂ ಉಲ್ಲೇಖ ಮಾಡಿ, ಖೈದಿಗಳಿಗೆ ರಾಜಾತಿಥ್ಯದ ವಿಚಾರ ಜಗಜ್ಜಾಹಿರಾಗಿದೆ. ರಾಜ್ಯ ಸರ್ಕಾರದ ವೈಫಲ್ಯದಿಂದ ಸಾಮಾಜಿಕ ಜಾಲತಾಣ ನಗೆಪಾಟಲಿಗಿಡಾಗಿದೆ. ಆದರೆ ಜೈಲುಗಳ ಸುಧಾರಣೆಗೆ ಸಮಿತಿ ವರದಿ ನೀಡಿದೆ. ವರದಿ ನೀಡಿ ವರ್ಷಗಳೇ ಕಳೆದರೂ ಸರ್ಕಾರದ ಕವಾಟಿನಲ್ಲಿ ಧೂಳು ತಿನ್ನುತ್ತಿವೆ ಎಂದರು.
ಇದೇ ಸಮಯದಲ್ಲಿ ಸರ್ಕಾರ ಮತ್ತೊಂದು ಹೊಸದಾಗಿ ಸಮಿತಿ ರಚನೆ ಮಾಡಿ ಆದೇಶಿಸಿದೆ. 2017 ಅದೇ ಕೇಂದ್ರ ಕಾರಾಗೃಹದಲ್ಲಿ ತಮಿಳುನಾಡಿನ ರಾಜಕಾರಣಿಗೆ ವಿಐಪಿ ಸೌಲಭ್ಯ ನೀಡಲಾಗಿತ್ತು. 2022ರಲ್ಲಿ ಶಂಕಿತ ಉಗ್ರರು ಹಾಗೂ ಖೈದಿಗಳು ಮೊಬೈಲ್‌ ಬಳಕೆ ಬಗ್ಗೆ ಮಾಡಿದ್ದರು.

ವಿಡಿಯೋ ಬಯಲಾಗಿದ್ದಾಗ ಎಡಿಜಿಪಿ ಮುರುಗನ್‌ ಸಮಿತಿ ರಚನೆಯಾಗಿ ವರದಿ ನೀಡಿದರು, ಆದರೆ ಅಧಿಕಾರಗಳ ವರ್ಗಾವಣೆ ಬಿಟ್ಟು ಯಾವುದೇ ಸುಧಾರಣೆ ಆಗಲಿಲ್ಲ ಎಂದು ಆಕ್ಷೇಪಿಸಿದರು.ಕಳೆದ ವರ್ಷವೂ ನಟ ದರ್ಶನ್‌ ಹಾಗೂ ಅವರ ಸಹಚರರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜ್ಯಾತಿ ನೀಡಲಾಗಿದೆ ಎಂಬ ಆರೋಪ ಬಂದಿತ್ತು.

ಅಂದು ಸಿಸಿಬಿ ಮುಖ್ಯಸ್ತರಾಗಿದ್ದ ಐಜಿಪಿ ಡಾ.ಚಂದ್ರಗುಪ್ತ ನೇತೃತ್ತದ ಸಮಿತಿಯನ್ನು ಇದೇ ಕಾಂಗ್ರೆಸ್‌‍ ಸರ್ಕಾರ ನೇಮಕ ಮಾಡಿದ್ದು. ಅವರು ಸುದೀರ್ಘ ಅಧ್ಯಯನದೊಂದಿಗೆ 4 ತಿಂಗಳ ಹಿಂದೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಅನೇಕ ಶಿಫಾರಸ್ಸುಗಳನ್ನು ಮಾಡಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ವರದಿ ಕಪಾಟು ಸೇರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರವು ತನ್ನ ವಿಫಲತೆಯನ್ನು ಮರೆಮಾಚಲು ಸಮಿತಿಯ ಮೇಲೊಂದು ಸಮಿತಿ ನೇಮಕ ಮಾಡುವುದನ್ನು ಬಿಟ್ಟು ಈಗಾಗಲೇ ಸಮಿತಿಗಳು ನೀಡಿರುವ ವರದಿ ಅನುಷ್ಠಾನ ಮಾಡಿ ಎಂದು ಸರ್ಜಿ ಒತ್ತಾಯಿಸಿದರು.

RELATED ARTICLES

Latest News