ಮಂಗಳೂರು,ಜ.25-ಕೌಟುಂಬಿಕ ಕಲಹದಲ್ಲಿ ತಂದೆಗೆ ಚೂರಿಯಿಂದ ಇರಿದ ಮಗ ಬಳಿಕ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.ಕಡಬದ ರಾಮಕುಂಜ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೋಕ್ಷ (15) ಆತಹತ್ಯೆ ಮಾಡಿಕೊಂಡಿದ್ದು,ವಸಂತ ಅಮೀನ್ (48)ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಸಂತ್ ಅವರ ಪತ್ನಿ ತಾಯಿ ಮನೆಯಲ್ಲಿ ಹೋಗಿದ್ದಾರು ಈ ವೇಳೆ ತಂದೆ ಹಾಗೂ ಮಗ ಕಳೆದ ರಾತ್ರಿ ಗಲಾಟೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗ ಮೋಕ್ಷ ತಂದೆಯ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಮಗ ತಂದೆಯ ಪರವಾನಗಿ ಹೊಂದಿರುವ ಬಂದೂಕಿನಿಂದ ತನ್ನ ಮುಖಕ್ಕೆ ಗುಂಡು ಹಾರಿಸಿಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ.
ಸ್ಥಳೀಯರು ಶಬ್ದ ಕೇಳಿ ಮನೆ ಬಳಿ ಬಂದು ನೋಡಿ ಗಾಯಗೊಂಡಿದ್ದ ವಸಂತ ಅಮೀನ್‌ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಡಬ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
