ಮೈಸೂರು,ಡಿ.14- ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್‌ನೊಂದಿಗೆ ಪರಾರಿಯಾಗಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡುತ್ತ ಕಾನ್ಸ್ ಟೇಬಲ್ ಜತೆಗೆ ಜಾಲಿ ಮಾಡುತ್ತಿದ್ದ ಮೋನಿಕಾ, ಇದೀಗ ಗಂಡನಿಗೆ ಮೋಸ ಮಾಡಿ ಮನೆಯಿಂದ 160 ಗ್ರಾಂ ಚಿನ್ನಾಭರಣ, 1.80 ಲಕ್ಷ ಹಣ ತೆಗೆದುಕೊಂಡು ಓಡಿ ಹೋಗಿದ್ದಾಳೆ.
ಮಂಜುನಾಥ್ ಎಂಬುವರೊಂದಿಗೆ ಮೋನಿಕಾ ಮದುವೆಯಾಗಿದ್ದು, ದಂಪತಿಗೆ 12 ವರ್ಷದ ಮಗ ಇದ್ದಾನೆ. ಈ ಕುಟುಂಬ ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ವಾಸವಾಗಿದೆ. ಮೋನಿಕಾಗೆ ರೀಲ್ಸ್ ಮಾಡುವ ಗೀಳಿತ್ತು. ಸಾಮಾಜಿಕ ಜಾಲತಾಣದಲ್ಲಿ ಆಕೆಯ ರೀಲ್ಸ್ ನೋಡಿ ಕಾನ್‌ಸ್ಟೆಬಲ್ ರಾಘವೇಂದ್ರ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು, ನಂತರ ಇಬ್ಬರು ಮೊಬೈಲ್ ನಂಬರ್ ಪಡೆದುಕೊಂಡು ಮಾತನಾಡುತ್ತಿದ್ದರು.
ಇಬ್ಬರ ನಡುವೆ ಆತೀಯತೆ ಬೆಳೆದು ಜೊತೆಯಲ್ಲಿ ತಿರುಗಾಡಿದ್ದಾರೆ. ಇತ್ತೀಚೆಗೆ ಮನೆಯನ್ನು ತೊರೆದು ಆತನೊಂದಿಗೆ ಪರಾರಿಯಾಗಿದ್ದಾಳೆ. ಈ ಬಗ್ಗೆ ಮೋನಿಕಾ ಅವರ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನು ತಿಳಿದು ಮೋನಿಕಾ ಸಹ ನನ್ನ ಗಂಡ ಸರಿ ಇಲ್ಲ, ಅವನಿಗೆ ಬುದ್ಧಿ ಹೇಳಿ ಎಂದು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ವಿಚಾರ ತಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು ಕಾನ್‌ಸ್ಟೆಬಲ್ ರಾಘವೇಂದ್ರನನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ.
