Wednesday, December 17, 2025
Homeರಾಜ್ಯನಕಲಿ ಪಾನ್‌ಕಾರ್ಡ್‌ ಬಳಿಸಿ ಜನರ ಆಸ್ತಿ ಲಪಟಾಯಿಸುತ್ತಿರುವುದರ ಕುರಿತು ಎಳೆಎಳೆಯಾಗಿ ವಿವರಿಸಿದ ಸಚಿವ ಕೃಷ್ಣಭೈರೇಗೌಡ

ನಕಲಿ ಪಾನ್‌ಕಾರ್ಡ್‌ ಬಳಿಸಿ ಜನರ ಆಸ್ತಿ ಲಪಟಾಯಿಸುತ್ತಿರುವುದರ ಕುರಿತು ಎಳೆಎಳೆಯಾಗಿ ವಿವರಿಸಿದ ಸಚಿವ ಕೃಷ್ಣಭೈರೇಗೌಡ

Minister Krishna Byre Gowdaa gave a detailed explanation about the people's property being looted using fake PAN cards

ಬೆಳಗಾವಿ,ಡಿ.17- ರಾಜ್ಯದಲ್ಲಿ ನಕಲಿ ಪಾನ್‌ಕಾರ್ಡ್‌ ಬಳಸಿಕೊಂಡು ಬೇರೆಯವರು ಹೇಗೆ ಜನರ ಆಸ್ತಿಯನ್ನು ಲಪಟಾಯಿಸುತ್ತಾರೆ ಎಂಬುದರ ಬಗ್ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್‌ನಲ್ಲಿ ಎಳೆಎಳೆಯಾಗಿ ವಿವರಿಸಿದರು. ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಡಿ.ಎಸ್‌‍. ಅರುಣ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಶೇ.98.90 ಜನರ ಬಳಿ ಆಧಾರ್‌ ಕಾರ್ಡ್‌ಗಳಿವೆ. ಇದೇ ಸಂದರ್ಭದಲ್ಲಿ ಶೇ.46ರಷ್ಟು ಮಂದಿ ನಕಲಿ ಪಾನ್‌ಕಾರ್ಡ್‌ ಹೊಂದಿದ್ದಾರೆ ಎಂದು ತಿಳಿಸಿದರು.

ಹಿಂದೆ ಆಧಾರ್‌, ಪಾನ್‌ ,ಪಾಸ್‌‍ ಪೋರ್ಟ್‌ ನಲ್ಲಿ ಯಾವುದಾದರೂ ಒಂದು ಇದ್ದರೆ ಸಾಕಿತ್ತು. ಆದ್ರೆ ಪಾನ್‌ ಕಾರ್ಡ್‌ ಕೊಟ್ಟಾಗ ಐಟಿ ಅವರು ಒಪ್ಪಲಿಲ್ಲ. ಕೆಲವರು ನಕಲಿ ಕಾರ್ಡ್‌ ಕೊಟ್ಟರು. ಹೀಗಾಗಿ ಮೋಸ ತಡೆಯಲು ಬಯೋಮೆಟ್ರಿಕ್‌ ಕಡ್ಡಾಯ ಮಾಡಲಾಗಿದೆ. ಕೆಲವರಿಗೆ ಇದು ಸಮಸ್ಯೆಯಾಗಿದೆ. ಎಲ್ಲಾ ಮಾಲಿಕತ್ವಕ್ಕೆ ಆಧಾರ್‌ ಇಂಟಿಗ್ರೇಟೆಡ್‌ ಮಾಡಬೇಕಿದೆ.
ಇವತ್ತು ಯಾವ ಕಾರ್ಡ್‌ ಬೇಕಾದರೂ ನಕಲಿ ಮಾಡಬಹುದು. ಕೆಲವರ ಖಾತೆ ಆಗ್ತಿಲ್ಲ.. ಒಪ್ಪುತ್ತೇನೆ. ಆದರೆ ಕೆಲವೊಂದನ್ನು ಬದಲಾವಣೆ ಮಾಡಿದಾಗ ಜನ ನಮ ಮೇಲೆ ಆರೋಪ ಮಾಡುತ್ತಾರೆ.

ವಿಭಾಗ ಪತ್ರ ಮಾಡಬೇಕಾದವರು ಲೋಕಲ್‌ ಸಂಸ್ಥೆಯವರು. ಅಲ್ಲಿ ವಿಭಾಗಪತ್ರ ಮಾಡಿಸಿಕೊಳ್ಳದೇ ರಿಜಿಸ್ಟರ್‌ ಮಾಡಿ ಅನ್ನುತ್ತಾರೆ. ಇಂತಹದ್ದನ್ನೆಲ್ಲಾ ನಾವು ಬಂದ್‌ ಮಾಡಿದ್ದೇವೆ. ಇದು ಕೆಲವರಿಗೆ ಅಸಮಾಧಾನ ಇರಬಹುದು..

ಲೋಪಗಳನ್ನು ಸರಿ ಮಾಡಿರುವುದಕ್ಕೆ ನಮ ಮೇಲೆ ಈ ರೀತಿಯ ಆರೋಪವಿದೆ. ಇದು ಕಾವೇರಿಯ ಸಮಸ್ಯೆ ಅಲ್ಲ. ಸರ್ವರ್‌ ಸಮಸ್ಯೆಯೂ ಇದೆ. ಅದನ್ನು ಒಪ್ಪಿಕೊಳ್ಳುತ್ತೇವೆ. ಮುಂದೆ ಸರಿಯಾಗಲಿದೆ ಎಂದು ಸಚಿವರು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಡಿ.ಎಸ್‌‍ ಅರುಣ್‌ ಅವರು, ಕಾವೇರಿ ಆನ್‌ಲೈನ್‌ ಸರ್ವೀಸ್‌‍ – 2 ಪ್ರಾರಂಭವಾದ ಬಳಿಕ ವಿಭಾಗ ಪತ್ರ, ದಾನಪತ್ರ ನೋಂದಣಿ ಪ್ರಕ್ರಿಯೆ ವಿಳಂಬವಾಗಿದೆ. ಏನೇ ಇದ್ದರೂ ಸರ್ವರ್‌ ಸಮಸ್ಯೆ ಅನ್ನುತ್ತಾರೆ. ಸಾಫ್‌್ಟವೇರ್‌ ಯುಗದಲ್ಲಿ ಸರ್ವರ್‌ ಕೆಪಾಸಿಟಿ ಹೆಚ್ಚಿಸಿ, ವಯಸ್ಸಾದವರು ಬಯೋಮೆಟ್ರಿಕ್‌ ಸಮಸ್ಯೆ ಎದುರಿಸುತ್ತಿದ್ದಾರೆ. ಅಂಥವರಿಗೆ ಆಧಾರ್‌ ಅಥವಾ ಪಾನ್‌ ಬಳಸಿ ಎಂದು ಸಚಿವರಲ್ಲಿ ಮನವಿ ಮಾಡಿದರು.

RELATED ARTICLES

Latest News