Thursday, December 11, 2025
Homeರಾಜ್ಯಕಲಾಪದಲ್ಲಿ ಅಡ್ಡಿ ಪಡಿಸುವ ಶಾಸಕರಿಗೆ ಮೊಗಸಾಲೆಯಲ್ಲಿ ಕೂರಿಸುವ ದಂಡನೆ

ಕಲಾಪದಲ್ಲಿ ಅಡ್ಡಿ ಪಡಿಸುವ ಶಾಸಕರಿಗೆ ಮೊಗಸಾಲೆಯಲ್ಲಿ ಕೂರಿಸುವ ದಂಡನೆ

MLAs who disrupt proceedings will be punished by being made to sit in the gallery.

ಬೆಳಗಾವಿ, ಡಿ.11- ವಿಧಾನಸಭೆಯ ಚರ್ಚೆಯ ನಡುವೆ ತಮಷ್ಟಕ್ಕೆ ತಾವು ಕುಳಿತ ಜಾಗದಲ್ಲಿಯೇ ಮಾತನಾಡಿ ಅಡ್ಡಿಪಡಿಸುವ ಶಾಸಕರನ್ನು ಒಂದು ದಿನದ ಮಟ್ಟಿಗೆ ಮೊಗಸಾಲೆಯಲ್ಲಿ ಕೂರಿಸುವ ದಂಡನೆ ವಿಧಿಸುವುದಾಗಿ ಸಭಾಧ್ಯಕ್ಷ ಯು.ಟಿ.ಖಾದರ್‌ ಎಚ್ಚರಿಸಿದ್ದಾರೆ.

ಪ್ರಶ್ನೋತ್ತರದ ಬಳಿಕ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆಗೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರಿಗೆ ಸಭಾಧ್ಯಕ್ಷರು ಅವಕಾಶ ಕೊಟ್ಟರು. ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ತಾವು ಮೂರು ದಿನಗಳಿಂದಲೇ ಕೇಳುತ್ತಿದ್ದೇನೆ. ಈವರೆಗೂ ಅವಕಾಶ ಸಿಕ್ಕಿಲ್ಲ ಎಂದು ಆಕ್ಷೇಪಿಸಿದರು. ವಿರೋಧ ಪಕ್ಷದ ಉಪನಾಯಕರಿಗೆ ಅನುಮತಿ ನೀಡಲಾಗಿದೆ. ಮುಂದಿನ ಸರದಿಯಲ್ಲಿ ನಿಮಗೆ ಅವಕಾಶ ನೀಡುವುದಾಗಿ ಯತ್ನಾಳ್‌ ಅವರನ್ನು ಸಭಾಧ್ಯಕ್ಷರು ಸಮಾಧಾನ ಪಡಿಸಿದರು.

ಈ ಹಂತದಲ್ಲಿ ಗಂಭೀರ ಚರ್ಚೆ ನಡೆಯುವಾಗ ಕೆಲವು ಶಾಸಕರು ತಮ ಸ್ಥಾನದಲ್ಲೇ ಕುಳಿತು ಮೈಕ್‌ ಆನ್‌ ಮಾಡಿಕೊಂಡು ಮಾತನಾಡಿ, ಚರ್ಚೆಗೆ ಅಡ್ಡಿಪಡಿಸುವುದು ಕಂಡುಬಂದಿದೆ. ಇದು ಸರಿಯಲ್ಲ, ಚರ್ಚೆಯ ದಿಕ್ಕನ್ನು ತಪ್ಪಿಸುತ್ತಿದೆ ಎಂದು ಹೇಳಿದರು. ಫುಟ್ಬಾಲ್‌ ಆಟದಲ್ಲಿ ನಿಯಮ ಮೀರುವ ಆಟಗಾರರಿಗೆ ಕೆಂಪು, ಬಿಳಿ ಮತ್ತು ಹಳದಿ ಕಾರ್ಡ್‌ಗಳನ್ನು ತೋರಿಸುವ ಪದ್ಧತಿ ಇದೆ.

ಅದೇ ರೀತಿ ಚರ್ಚೆಗೆ ಅಡ್ಡಿಪಡಿಸುವ ಶಾಸಕರಿಗೆ ಎಚ್ಚರಿಕೆಯ ಕಾರ್ಡ್‌ಗಳನ್ನು ತೋರಿಸಲಾಗುವುದು. ಅದರ ನಂತರವೂ ತಿದ್ದಿಕೊಳ್ಳದಿದ್ದರೆ ಒಂದು ದಿನದ ಮಟ್ಟಿಗೆ ವಿಧಾನಸಭೆಯ ಮೊಗಸಾಲೆಯಲ್ಲಿ ಕೂರಿಸುವ ದಂಡನೆ ವಿಧಿಸುವುದಾಗಿ ಹೇಳಿದರು. ವಿರೋಧ ಪಕ್ಷದ ನಾಯಕರಗಳ ಚರ್ಚೆಗೆ ಅಡ್ಡಿಪಡಿಸುವ ಸಚಿವರಿಗೆ ಯಾವ ಶಿಕ್ಷೆ ಎಂದು ಯತ್ನಾಳ್‌ ಪ್ರಶ್ನಿಸಿದರು. ಸಕಾರಾತಕ ಮತ್ತು ಅಭಿವೃದ್ಧಿಶೀಲ ಚರ್ಚೆಗೆ ಎಲ್ಲರ ಸಹಕಾರ ಅಗತ್ಯ ಎಂದು ಸಭಾಧ್ಯಕ್ಷರು ಹೇಳಿದರು.

RELATED ARTICLES

Latest News