ತುಮಕೂರು,ಜ.7- ಅವಳಿ ಮಕ್ಕಳ ಜೊತೆ ಸಂಪ್‌ಗೆ ಬಿದ್ದು ತಾಯಿ ಆತಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂ ಕಿನ ಹಿರೇಹಳ್ಳಿಯ ಸಮೀಪದ ಸಿಂಗನಹಳ್ಳಿ ಕಾಲೋನಿಯಲ್ಲಿ ನಡೆದಿದೆ.
ವಿಜಯಲಕ್ಷ್ಮಿ(26), ಚೇತನ(5), ಚೈತನ್ಯ(5) ಸಾವನ್ನಪ್ಪಿದವರು. ಶಿವಗಂಗೆ ಮೂಲದ ಸಂಪತ್‌ಕುಮಾರ್ ಹಾಗೂ ನೆಲಮಂಗಲದ ವಿಜಯಲಕ್ಷ್ಮಿ ಅವರು ವಿವಾಹವಾಗಿ ಕೇವಲ 6 ವರ್ಷವಷ್ಟೆ ಆಗಿತ್ತು.
ಸಂಪತ್‌ಕುಮಾರ್ ಖಾಸಗಿ ಕಂಪನಿ ಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಿಂಗನಹಳ್ಳಿ ಕಾಲೋನಿಯಲ್ಲಿ ಬಾಡಿಗೆಮನೆಯಲ್ಲಿ ಹೆಂಡತಿ, ಮಕ್ಕಳು ಹಾಗೂ ಅತ್ತೆಯೊಂದಿಗೆ ವಾಸವಾಗಿದ್ದರು. ಅತ್ತೆ ಹಾಗೂ ಪತಿ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿಯೇ ಇದ್ದ ವಿಜಯಲಕ್ಷ್ಮಿ ತಮ ಮಕ್ಕಳೊಂದಿಗೆ ಸಂಪಿಗೆ ಹಾರಿ ಆತಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೆಲಸ ಮುಗಿಸಿಕೊಂಡು ಸಂಜೆ ಪತಿ ಮನೆಗೆ ಬಂದಾಗ ಮನೆಬಾಗಿಲು ಮುಚ್ಚಿದ್ದು, ಮನೆಯ ಬಳಿ ಹುಡುಕಾಡಿದರೂ ಎಲ್ಲಿಯೂ ಕೂಡ ಪತ್ನಿ ಹಾಗೂ ಮಕ್ಕಳು ಕಾಣಲಿಲ್ಲ. ಕೊನೆಗೆ ಸಂಪಿನ ಬಳಿ ಹೋಗಿ ನೋಡಿದಾಗ ಆತಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕ್ಯಾತಸಂದ್ರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ.ಈ ಸಂಬಂಧ ಕ್ಯಾತಸಂದ್ರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತಹತ್ಯೆಗೆ ಕಾರಣ ನಿಗೂಢವಾಗಿದೆ.
