Friday, January 9, 2026
Homeರಾಜ್ಯಕೋಗಿಲು ಬಡಾವಣೆ ತೆರವು ಸಂತ್ರಸ್ಥ 37 ಕುಟುಂಬಳಿಗೆ ಮಾತ್ರ ವಸತಿ ಭಾಗ್ಯ

ಕೋಗಿಲು ಬಡಾವಣೆ ತೆರವು ಸಂತ್ರಸ್ಥ 37 ಕುಟುಂಬಳಿಗೆ ಮಾತ್ರ ವಸತಿ ಭಾಗ್ಯ

Only 37 families affected by Kogil Layout eviction will be given housing

ಬೆಂಗಳೂರು, ಜ.8- ಭಾರಿ ಸದ್ದು ಮಾಡಿದ್ದ ಕೋಗಿಲ್‌ ಲೇಔಟ್‌ ಬಡಾವಣೆ ತೆರವು ಕಾರ್ಯಚರಣೆಯಲ್ಲಿ ನ್ಯಾಯ ಸಮತವಾಗಿ ಮರು ವಸತಿ ಕಲ್ಪಿಸಬೇಕಿರುವುದು ಕೇವಲ 37 ಕುಟುಂಬಗಳಿಗೆ ಮಾತ್ರ ಎಂಬ ಅಂಕಿ ಅಂಶವನ್ನು ಅಧಿಕಾರಿಗಳು ರೆಡಿ ಮಾಡಿದ್ದಾರೆ.

ಮನೆ ತೆರವು ಮಾಡಲಾಗಿದ್ದ ಕೋಗಿಲ್‌ ಲೇಔಟ್‌ನಲ್ಲಿ ಇರುವ ಒಟ್ಟು ಕುಟುಂಬಗಳ ಸಂಖ್ಯೆ 119, ಇದರಲ್ಲಿ ಆಧಾರ್‌ ಕಾರ್ಡ್‌ ಹೊಂದಿರುವವರ ಸಂಖ್ಯೆ 118, ವೋಟರ್‌ ಐಡಿಗಳು ಹೊಂದಿದ 102 ಕುಟುಂಬಗಳಿದ್ದರೆ, 77 ಕುಟುಂಬಗಳು ರೇಷನ್‌ ಕಾರ್ಡ್‌ ಪಡೆದುಕೊಂಡಿದ್ದರೆ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಇರುವ ಕುಟುಂಬಗಳು 63+56 ಮಾತ್ರ.

ತೆರವಾದ ಜಾಗದಲ್ಲಿ ಕಳೆದ ಐದು ವರ್ಷಗಳಿಂದ ನೆಲೆಸಿರುವವರಿಗೆ ಮಾತ್ರ ಮರು ವಸತಿ ಕಲ್ಪಿಸಬೇಕು ಎಂಬ ನಿಯಮ ಜಾರಿಗೆ ಬಂದರೆ ಆ ಜಾಗದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ 37 ಕುಟುಂಬಗಳಿಗೆ ಮಾತ್ರ ವಸತಿ ಕಲ್ಪಿಸಬೇಕಾಗುತ್ತದೆ.

ಆದರೆ, ಆರು ತಿಂಗಳ ಹಿಂದೆ ಬಂದು ಇಲ್ಲಿ ನೆಲೆಸಿರುವ ವಲಸಿಗರು ನಮಗೆ ಮನೆ ಬೇಕೆಂದು ಆಗ್ರಹ ಮಾಡುತ್ತಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.ಹೀಗಾಗಿ ಸರ್ಕಾರ ಕೇವಲ ಮೂಲ ನಿವಾಸಿಗಳಾದ 37 ಕುಟುಂಬಗಳಿಗೆ ಮಾತ್ರ ಮರು ವಸತಿ ಕಲ್ಪಿಸುತ್ತೋ ಅಥವಾ ಉಳಿದ 82 ಕುಟುಂಬಗಳಿಗೂ ಮನೆ ಭಾಗ್ಯ ಕಲ್ಪಿಸುವುದೋ ಎನ್ನುವುದು ಕೂತುಹಲಕ್ಕೆ ಎಡೆ ಮಾಡಿಕೊಟ್ಟಿದೆ.

RELATED ARTICLES

Latest News