Friday, November 28, 2025
Homeರಾಜ್ಯಪ್ರಧಾನಿ ಮೋದಿಗೆ "ಭಾರತ ಭಾಗ್ಯವಿಧಾತ" ಬಿರುದು

ಪ್ರಧಾನಿ ಮೋದಿಗೆ “ಭಾರತ ಭಾಗ್ಯವಿಧಾತ” ಬಿರುದು

Prime Minister Modi conferred with the title of "Bharata Bhagya Vidhath"

ಉಡುಪಿ,ನ.28- ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮಿಕೊಂಡಿರುವ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಭಾರತ ಭಾಗ್ಯ ವಿಧಾತ ಬಿರುದು ನೀಡಿ ಸನಾನಿಸಲಾಯಿತು.

ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು, ಬಿರುದು ನೀಡಿ ಸನಾನಿಸಿದರು. ಬಳಿಕ ಕಾಶಿ ಕಾರಿಡಾರ್‌ ರೀತಿಯಲ್ಲಿ ಉಡುಪಿ ಕಾರಿಡಾರ್‌ ಅಭಿವೃದ್ಧಿ ಪಡಿಸುವಂತೆ ಅವರು ಮನವಿ ಮಾಡಿದರು.ಲಕ್ಷ ಕಂಠ ಗೀತಾ ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯ 15ನೇ ಅಧ್ಯಾಯದ ಕೊನೆಯ ಕೆಲವು ಶ್ಲೋಕಗಳನ್ನು ಸಾಮೂಹಿಕವಾಗಿ ಪಠಣ ಮಾಡಲಾಯಿತು.

ಬಳಿಕ ಮೋದಿ ಅವರು, ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಮಾತು ಆರಂಭಿಸಿ, ಕನಕದಾಸರಿಗೆ ನಮಿಸುವ ಪುಣ್ಯ ನನಗೆ ಸಿಕ್ಕಿದೆ. ನನ್ನಂತ ಎಲ್ಲಾ ಭಕ್ತರಿಗೂ ಕಿಂಡಿಯ ಮೂಲಕ ಕೃಷ್ಣ ದರ್ಶನ ಆಗುವಂತೆ ಮಾಡಿದ್ದು ಕನಕದಾಸರು. ಭಗವಾನ್‌ ಕೃಷ್ಣನ ಪ್ರೀರಣೆಯಿಂದಲೇ ಕೆಲವೊಂದು ಯೋಜನೆಗಳನ್ನ ಮಾಡಲಾಗಿದೆ ಎಂದು ಹೇಳಿದರು.

RELATED ARTICLES

Latest News