Wednesday, January 14, 2026
Homeರಾಜ್ಯಸಂಕ್ರಾಂತಿ ರಜೆ ಹಿನ್ನೆಲೆಯಲ್ಲಿ ರೆಡ್‌ ಬಸ್‌ ಬುಕ್ಕಿಂಗ್‌ನಲ್ಲಿ ಶೇ.26ರಷ್ಟು ಹೆಚ್ಚಳ

ಸಂಕ್ರಾಂತಿ ರಜೆ ಹಿನ್ನೆಲೆಯಲ್ಲಿ ರೆಡ್‌ ಬಸ್‌ ಬುಕ್ಕಿಂಗ್‌ನಲ್ಲಿ ಶೇ.26ರಷ್ಟು ಹೆಚ್ಚಳ

Red Bus bookings up by 26% ahead of Sankranti holidays

ಬೆಂಗಳೂರು,ಜ.14- ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವವರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ರೆಡ್‌ ಬಸ್‌‍ ಮೂಲಕ ಪ್ರಯಾಣಿಸುವವರು ಶೇ.26 ರಷ್ಟು ಹೆಚ್ಚಾಗಿದ್ದಾರೆ.

ರೆಡ್‌ ಬಸ್‌‍ ಪ್ಲಾಟ್‌ಫಾರಂ ದತ್ತಾಂಶದ ಪ್ರಕಾರ ಕರ್ನಾಟಕದಲ್ಲಿ ಬಸ್‌‍ ಬುಕ್ಕಿಂಗ್‌ಗಳು ಈ ಹಬ್ಬದ ಪ್ರಯಾಣದ ಸಂದರ್ಭದಲ್ಲಿ ಶೇ.26ರಷ್ಟು ಹೆಚ್ಚಳ ಕಾಣಲಿವೆ. ಈ ವಿಶ್ಲೇಷಣೆಯು ಜ. 9 ಮತ್ತು ಜ.18, ನಡುವಿನ ಬುಕ್ಕಿಂಗ್‌ ಗಳನ್ನು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಹೆಚ್ಚಳ ಕಂಡುಬಂದಿದೆ.

ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಪ್ರಯಾಣಕ್ಕೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ರೆಡ್‌ ಬಸ್‌‍ ಜ.8 ರಿಂದ26ರವರೆಗೆ ಡಿಸ್ಕವರ್‌ ಭಾರತ್‌ ಮಾರಾಟ ನಡೆಸುತ್ತಿದೆ. ಈ ಮಾರಾಟವು ಭಾರತದಾದ್ಯಂತ ಪ್ರಯಾಣದ ಆಯ್ಕೆಗಳನ್ನು ನೀಡುತ್ತಿದ್ದು, ಪ್ರತಿ ಸೀಟಿಗೆ ರೂ.299ರಿಂದ ಪ್ರಾರಂಭವಾಗುತ್ತದೆ. ಇದರೊಂದಿಗೆ ಬಸ್‌‍ ಗಳು, ರೈಲುಗಳು ಮತ್ತು ಹೋಟೆಲ್‌ಗಳ ಮೇಲೆ ಶೇ.50ರವೆರೆಗೆ ರಿಯಾಯಿತಿ ಇರುತ್ತದೆ.

RELATED ARTICLES

Latest News