Monday, December 29, 2025
Homeರಾಜ್ಯಹಾಡಹಗಲೇ ಆಭರಣ ಅಂಗಡಿಗೆ ನುಗ್ಗಿ ಐದೇ ನಿಮಿಷದಲ್ಲಿ 7 ಕೆಜಿ ಚಿನ್ನ ದರೋಡೆ..!

ಹಾಡಹಗಲೇ ಆಭರಣ ಅಂಗಡಿಗೆ ನುಗ್ಗಿ ಐದೇ ನಿಮಿಷದಲ್ಲಿ 7 ಕೆಜಿ ಚಿನ್ನ ದರೋಡೆ..!

Robbery of 7 kg of gold in five minutes after entering a jewelry shop in broad daylight..!

ಹುಣಸೂರು,ಡಿ.29– ಮೈಸೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌‍ ರಸ್ತೆಯಲ್ಲಿರುವ ಆಭರಣ ಅಂಗಡಿಗೆ ಹಾಡಹಗಲೇ ನುಗ್ಗಿ ಚಿನ್ನಾ ಭರಣ ದರೋಡೆ ಮಾಡಿ ಪರಾರಿಯಾಗಿರುವ ದರೋಡೆಕೋರರ ಪತ್ತೆಗಾಗಿ ಐದು ತಂಡಗಳನ್ನು ರಚಿಸಲಾಗಿದೆ.ಈ ಬಗ್ಗೆ ಮಾಹಿತಿ ನೀಡಿದ ಮೈಸೂರು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ ಅವರು, ಐದು ಮಂದಿಯ ದರೋಡೆಕೋರರ ತಂಡದಿಂದ ಈ ಕೃತ್ಯ ನಡೆದಿದೆ. ವಿಶೇಷ ತನಿಖಾ ತಂಡಗಳು ಈಗಾಗಲೇ ಕಾರ್ಯೋನುಕವಾಗಿವೆ ಎಂದರು.

ದರೋಡೆಕೋರರ ಪೈಕಿ ಇಬ್ಬರು ಮುಸುಕುದಾರಿಗಳು. ಮತ್ತೆ ಮೂವರು ಮುಖ ಮುಚ್ಚಿಕೊಂಡಿರಲಿಲ್ಲ. ಎಷ್ಟು ಪ್ರಮಾಣದ ಚಿನ್ನಾಭರಣ ದೋಚಿದ್ದಾರೆ ಎಂಬ ಬಗ್ಗೆ ಜ್ಯೂವೆಲರಿ ಅಂಗಡಿ ಮಾಲೀಕರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ ಎಂದರು.ದ್ವಿಚಕ್ರ ವಾಹನದಲ್ಲಿ ಬಂದಿದ್ದಂತಹ ದರೋಡೆಕೋರರು ಹಿಂದಿ ಮಾತನಾಡುತ್ತಿದ್ದರು. ಅವರೆಲ್ಲರ ಕೈಯಲ್ಲೂ ಗನ್‌ ಇದ್ದವು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದರು.

ಜ್ಯೂವೆಲರಿ ಅಂಗಡಿ ಮಾಲೀಕನ ಹೇಳಿಕೆ:
ಈ ಹೆದ್ದಾರಿಯಲ್ಲಿ ಸುಮಾರು 20 ಮಳಿಗೆಗಳಿರುವ ಕಟ್ಟಡದಲ್ಲಿ ತಮದೊಂದೇ ಅಂಗಡಿ ತೆರೆಯಲಾಗಿದೆ. ಕಳೆದ 7 ತಿಂಗಳ ಹಿಂದೆಯಷ್ಟೇ ನಾವು ಸ್ಕೈ ಗೋಲ್‌್ಡ ಅಂಡ್‌ ಡೈಮಂಡ್‌್ಸ ಅಂಗಡಿಯನ್ನು ಪ್ರಾರಂಭ ಮಾಡಿದ್ದೇವೆ ಎಂದು ಮಾಲೀಕ ರಶೀದ್‌ ತಿಳಿಸಿದ್ದಾರೆ.
ನಿನ್ನೆ ಎಂದಿನಂತೆ ಬೆಳಗ್ಗೆ ಅಂಗಡಿ ತೆರೆದಿದ್ದವು. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಐದು ಮಂದಿ ದರೋಡೆಕೋರರು ಬಂದಿದ್ದರು. ಇಬ್ಬರ ಕೈಯಲ್ಲಿ ಎರಡೆರಡು ಗನ್‌ ಇದ್ದವು, ಮತ್ತೆ ಮೂವರ ಕೈಯಲ್ಲಿ ಒಂದೊಂದು ಗನ್‌ ಹಿಡಿದುಕೊಂಡು ನಮನ್ನು ಬೆದರಿಸಿದರು.

ಅಂಗಡಿಯಲ್ಲಿದ್ದ ದೊಡ್ಡ ದೊಡ್ಡ ಬಂಗಾರದ ಸರಗಳನ್ನು ಕೇವಲ ಐದು ನಿಮಿಷದೊಳಗೆ ಅಂದಾಜು 11 ಕೋಟಿ ಮೌಲ್ಯದ 7 ಕೆಜಿಗೂ ಹೆಚ್ಚು ಚಿನ್ನ ಹಾಗೂ ವಜ್ರದ ಆಭರಣಗಳನ್ನು ಬ್ಯಾಗಿಗೆ ತುಂಬಿಕೊಂಡು ಪರಾರಿಯಾದರು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಅಂಗಡಿಯಲ್ಲಿದ್ದ ಬೆಳ್ಳಿ ವಸ್ತುಗಳು ಮತ್ತು ಹಣವನ್ನು ಮುಟ್ಟಿಲ್ಲ. ಆಭರಣಗಳನ್ನು ತುಂಬಿಕೊಂಡು ಯಾರೂ ಹಿಂಬಾಲಿಸದಂತೆ ಗಾಳಿಯಲ್ಲಿ ಗುಂಡು ಹಾರಿಸಿ ಹೆದರಿಸಿ ದರೋಡೆಕೋರರು ಪರಾರಿಯಾಗಿದ್ದಾರೆಂದು ವಿವರಿಸಿದರು.

ಸಿಸಿ ಕ್ಯಾಮರಾದಲ್ಲಿ ಸೆರೆ:
ದರೋಡೆಕೋರರ ಭಾವಚಿತ್ರ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಲ್ಲದೇ ಒಂದು ಬೈಕ್‌ನಲ್ಲಿ ಇಬ್ಬರು, ಮತ್ತೊಂದು ಬೈಕ್‌ನಲ್ಲಿ ಮೂವರು ಹುಣಸೂರಿನಿಂದ ಕೆ.ಆರ್‌.ನಗರದ ಕಡೆಗೆ ಬೈಪಾಸ್‌‍ ರಸ್ತೆ ಮೂಲಕ ಹೋಗುತ್ತಿರುವ ದೃಶ್ಯ ಸಹ ಸೆರೆಯಾಗಿದೆ.

ಪ್ರತ್ಯಕ್ಷ ದರ್ಶಿಗಳ ಹೇಳಿಕೆ:
ಈ ಚಿನ್ನಾಭರಣ ಮಳಿಗೆ ಬಾಗಿಲ ಮುಂದೆ ಒಬ್ಬ ಬಂದೂಕು ಹಿಡಿದುಕೊಂಡು ಯಾರೂ ಈ ಅಂಗಡಿ ಬಳಿ ಬಾರದಂತೆ ನೋಡಿಕೊಳ್ಳುತ್ತಿದ್ದ. ದರೋಡೆ ಮಾಡಿದ ನಂತರ ಐದು ಮಂದಿ ಒಂದೊಂದು ಕಡೆ ಸ್ಕೂಟರ್‌ಗಳಲ್ಲಿ ಪ್ರತ್ಯೇಕವಾಗಿ ಅಂದರೆ, ಮೈಸೂರು ರಸ್ತೆ , ಕಬೀರ್‌ನಗರ, ಕಲ್ಪತರು ರಸ್ತೆ ಹಾಗೂ ಮಡಿಕೇರಿ ರಸ್ತೆಕಡೆ ವಿಭಜಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಪತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬೆಚ್ಚಿ ಬಿದ್ದ ಹುಣಸೂರು ಜನತೆ:
ಹುಣಸೂರಿನ ಹೊಸ ಬಸ್‌‍ ನಿಲ್ದಾಣ ಕೂಗಳತೆ ದೂರದಲ್ಲಿರುವ ಈ ಜ್ಯೂವೆಲರಿ ಶಾಪ್‌ಗೆ ಮಟ ಮಟ ಮಧ್ಯಾಹ್ನ ನುಗ್ಗಿದ ದರೋಡೆಕೋರರು ಗನ್‌ ಪಾಯಿಂಟ್‌ನಲ್ಲಿ ಅಂಗಡಿಯಲ್ಲಿದ್ದವರನ್ನು ಬೆದರಿಸಿ ಕೋಟ್ಯಾಂತರ ಮೌಲ್ಯದ ಆಭರಣ ಲೂಟಿ ಮಾಡಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದು, ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಆಭರಣಗಳನ್ನು ದೋಚಿ ತಾವು ಬಂದ ಬೈಕ್‌ಗಳಲ್ಲೇ ದರೋಡೆಕೋರರು ಪರಾರಿಯಾಗುವ ವೇಳೆ ಆತುರದಲ್ಲಿ ಒಂದು ಹೆಲೆಟ್‌ನ್ನು ಅಂಗಡಿಯಲ್ಲೇ ಬಿಟ್ಟು ಹೋಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಹುಣಸೂರು ಸರ್ಕಲ್‌ ಇನ್‌್ಸಪೆಕ್ಟರ್‌ ಸಂತೋಷ್‌ ಕಶ್ಯಪ್‌, ಡಿವೈಎಸ್‌‍ಪಿ ರವಿ, ಅಡಿಷನಲ್‌ ಎಸ್‌‍ಪಿ ನಾಗೇಶ್‌ ಸೇರಿದಂತೆ ಇತರೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಪರಿಶೀಲನೆ ನಡೆಸಿವೆ.

7 ಕೆ.ಜಿ. ಚಿನ್ನಾಭರಣ ದರೋಡೆಕೋರರ ಸುಳಿವು ಪತ್ತೆ..!

ಬೆಂಗಳೂರು,ಡಿ.29- ಮಟ ಮಟ ಮಧ್ಯಾಹ್ನ ಹುಣಸೂರಿನ ಬೈಪಾಸ್‌‍ ರಸ್ತೆಯ ಚಿನ್ನದ ಮಳಿಗೆಗೆ ನುಗ್ಗಿ ಐದು ನಿಮಿಷದಲ್ಲಿ 7 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆಯಲ್ಲಿ ಹೊರ ರಾಜ್ಯದ ಖದೀಮರ ಕೈವಾಡವಿರುವ ಬಗ್ಗೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ.
ಚಿನ್ನಾಭರಣ ಮಳಿಗೆಯನ್ನು ದರೋಡೆ ಮಾಡುವ ಬಗ್ಗೆ ಈ ಮೊದಲೇ ಮಾಸ್ಟರ್‌ ಪ್ಲಾನ್‌ ರೂಪಿಸಿದ್ದ ದರೋಡೆಕೋರರು ಮಳಿಗೆಯಿಂದ ಕೂಗಳತೆ ದೂರದಲ್ಲಿರುವ ಖಾಸಗಿ ಹೋಟೇಲ್‌ವೊಂದರಲ್ಲಿ ತಂಗಿದ್ದರು ಎಂಬ ಬಗ್ಗೆಯೂ ಮಾಹಿತಿ ಲಭಿಸಿದೆ. ಹೊರ ರಾಜ್ಯದ ದರೋಡೆಕೋರರು ಹುಣಸೂರಿನ ಚಿನ್ನಾಭರಣ ಮಳಿಗೆಗೆ ನುಗ್ಗಿ 11 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದರೋಡೆಕೋರರ ಸುಳಿವು:
ಚಿನ್ನಾಭರಣ ದೋಚಿ ಪರಾರಿಯಾಗಿರುವ ದರೋಡೆಕೋರರ ಸುಳಿವು ಸಿಕ್ಕಿದ್ದು ಆದಷ್ಟು ಶೀಘ್ರ ಬಂಧಿಸಲಾಗುವುದೆಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ದರೋಡೆ ಮಾಡಲೆಂದೇ ದರೋಡೆಕೋರರು ಯೋಜನೆ ರೂಪಿಸಿಕೊಂಡು ಹುಣಸೂರಿಗೆ ಆಗಮಿಸಿ ಈ ಕೃತ್ಯವೆಸಗಿದ್ದಾರೆ ಎಂದು ಅಧಿಕಾರಿಯೊಬ್ಬರು ಈ ಸಂಜೆಗೆ ಖಚಿತಪಡಿಸಿದ್ದಾರೆ.ಕೆಲ ದಿನಗಳ ಹಿಂದೆ ಹೊರ ರಾಜ್ಯದಿಂದ ಬಂದು ಹುಣಸೂರಿನ ಲಾಡ್‌್ಜವೊಂದರಲ್ಲಿ ಉಳಿದುಕೊಂಡು ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದರು ಎಂಬುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಅವರು ತಿಳಿಸಿದ್ದಾರೆ.

ದರೋಡೆ ನಡೆದ ಚಿನ್ನಾಭರಣ ಮಳಿಗೆಯಲ್ಲಿ ಪ್ರತಿನಿತ್ಯ ಎಷ್ಟು ವಹಿವಾಟು ನಡೆಯುತ್ತದೆ. ಯಾವ ಯಾವ ಸಮಯದಲ್ಲಿ ಹೆಚ್ಚು ಗ್ರಾಹಕರು ಅಂಗಡಿಯಲ್ಲಿರುತ್ತಾರೆ, ಯಾವ ಸಮಯದಲ್ಲಿ ಕಡಿಮೆ ಜನ ಇರುತ್ತಾರೆ ಎಂಬುದರ ಸಂಪೂರ್ಣ ಮಾಹಿತಿ ಪಡೆದೇ ನಿನ್ನೆ ಮಧ್ಯಾಹ್ನ ದರೋಡೆಕೋರರು ಆಭರಣ ದರೋಡೆ ಮಾಡಿದ್ದಾರೆಂದು ಅವರು ವಿವರಿಸಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದರೋಡೆಕೋರರ ಚಲನವಲನ, ಭಾವಚಿತ್ರಗಳ ದೃಶ್ಯಾವಳಿಯನ್ನಾಧರಿಸಿ ಅವರ ಬಂಧನಕ್ಕೆ ನಮ ಪೊಲೀಸರು ಬಲೆ ಬೀಸಿದ್ದಾರೆ ಎಂದು ಅವರು ಹೇಳಿದರು.

ದರೋಡೆಕೋರರ ಬಗ್ಗೆ ನೆರೆ ರಾಜ್ಯಗಳ ಪೊಲೀಸರಿಗೂ ಮಾಹಿತಿ ರವಾನಿಸಲಾಗಿದೆ. ಅವರು ರಾಜ್ಯ ಬಿಟ್ಟು ಹೋಗದಂತೆ ಗಡಿ ಪ್ರದೇಶಗಳಲ್ಲಿ ವ್ಯಾಪಕ ಬಂದೋಬಸ್ತ್‌ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಸೆರೆ ಹಿಡಿಯುತ್ತೇವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News