ಬೆಂಗಳೂರು,ಡಿ.13-ಹಣ ಕೊಡದಿದ್ದರೆ ಮಾನ ಹಾನಿ ಮಾಡುವುದಾಗಿ ನನಗೆ ಕೆಲವರು ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿ ಮೆಳೆಕೋಟೆಯ ಸ್ವಾಮೀಜಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೆಳೆಕೋಟೆಯ ನರೇಶ್, ಅವರ ಪತ್ನಿ ಭಾಗ್ಯಲಕ್ಷ್ಮಿ ಸೈಟ್ ವಿಚಾರವಾಗಿ ನನ್ನನ್ನು ಭೇಟಿ ಮಾಡಿ ಮಾತನಾಡಿದ್ದಾರೆ.ಇದೀಗ ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆಂದು ದೊಡ್ಡಬಳ್ಳಾಪುರ ತಾಲ್ಲೂಕು ತೂಬಗೆರೆ ಹೋಬಳಿಯ ಮೆಳೆಕೋಟೆ ಮಠದ ಶ್ರೀ ಬ್ರಹಾನಂದ ಸ್ವಾಮೀಜಿ ಅವರು ದೂರಿನಲ್ಲಿ ಹೇಳಿದ್ದಾರೆೆ.
ದೂರಿನಲ್ಲಿ ನರೇಶ್, ಭಾಗ್ಯಲಕ್ಷ್ಮಿ, ಅವರ ಅಣ್ಣಂದಿರಾದ ರಮೇಶ್, ಗಂಗರಾಜು ಮತ್ತು ತಾಯಿ ಗಂಗಮ ಹೆಸರು ಉಲ್ಲೇಖಿಸಿ ಇವರು ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆಂದು ತಿಳಿಸಿದ್ದಾರೆ.
ಹಣ ಕೊಡದಿದ್ದರೆ ನಿಮ ಪೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕುವುದಾಗಿ ಎದರಿಸುತ್ತಿದ್ದಾರೆಂದು ದೂರಿನಲ್ಲಿ ಸ್ವಾಮೀಜಿ ವಿವರಿಸಿದ್ದಾರೆ.
ಪ್ರತಿ ದೂರು:
ಈ ಸ್ವಾಮೀಜಿಯ ವಿರುದ್ಧವೂ ಮಹಿಳೆಯ ಪತಿ ದೂರು ನೀಡಿದ್ದಾರೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.
