ಬೆಳಗಾವಿ,ಡಿ.9– ವಿಧಾನ ಮಂಡಲ ಅಧಿವೇಶನದ ಎರಡನೇ ದಿನ ಇಂದು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ ಅವರನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮುಖ್ಯಮಂತ್ರಿ ಎಂದು ಜಾಲತಾಣದಲ್ಲಿ ಸಂಬೋದಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಎಂಎಲ್ಸಿಚನ್ನರಾಜ ಹಟ್ಟಿಹೊಳಿ ಈ ರೀತಿ ಬರೆದುಕೊಂಡಿದ್ದು ಆಕಸ್ಮಿಕವೇನಲ್ಲ. ಅದು ಜಾನತನದಿಂದಲೇ ಕೂಡಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಗರಿಗೆದರಿದೆ. ಡಿ.ಕೆ. ಶಿವಕುಮಾರ ಬಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಅವರ ಸಹೋದರ ಗುರುತಿಸಿಕೊಂಡು ಡಿಕೆಶಿ ಮುಖ್ಯಮಂತ್ರಿ ಗಾದಿಗೆ ಸಪೋರ್ಟ್ ನೀಡುತಿದ್ದಾರೆ ಎಂದು ಬಣ್ಣಿಸಲಾಗಿದೆ.
ನಂತರ ಮತ್ತೆ ಸಾಮಾಜಿಕ ಜಾಲತಾಣದ ತಮ ಬರಹವನ್ನು ನಂತರ ಬದಲಾಯಿಸಿ ಉಪ ಮುಖ್ಯಮಂತ್ರಿ ಎಂದು ಉಲೇಖಿಸಿ ಸ್ವಾಗತಿಸಿದ್ದಾರೆ.

