ದಾವಣಗೆರೆ, ಡಿ.26- ದೇಶಾದ್ಯಂತ ಇಂದಿನಿಂದ ರೈಲ್ವೆ ಪ್ರಯಾಣದರ ಏರಿಕೆಯಾಗಿದೆ. ಬಿಜೆಪಿಯ ನಾಯಕರು ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಸ್ ಪ್ರಯಾಣದರ ಹೆಚ್ಚಳವಾದರೆ ಬಿಜೆಪಿಯವರು ಎಲ್ಲಾ ನಾಯಕರು ಟೀಕೆ ಮಾಡುತ್ತಾರೆ. ಆದರೆ ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣದರ ಹೆಚ್ಚಳ ಮಾಡಿರುವ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಟೀಕಿಸಿದರು.
ಮಾಜಿ ಸಚಿವ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಮತ್ತು ಉಪಮುಖ್ಯಮಂತ್ರಿಯವರು ಆಗಮಿಸಿದ್ದೇವೆ ಎಂದರು.
ದೆಹಲಿಗೆ ನಾನು ಪದೇಪದೇ ಭೇಟಿ ನೀಡುತ್ತಿಲ್ಲ. ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಗೆ ನನ್ನನ್ನು ಆಹ್ವಾನಿಸಲಾಗಿದೆ. ಅದರಲ್ಲಿ ಭಾಗವಹಿಸಲು ಇಂದು ದೆಹಲಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.
ಚಿತ್ರದುರ್ಗದ ಹಿರಿಯೂರು ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಲಾರಿ ಚಾಲಕನ ತಪ್ಪು ಕಂಡುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಏಕಮುಖವಾಗಿ ಚಲಿಸಬೇಕಿದ್ದ ಲಾರಿ ಬಲಭಾಗಕ್ಕೆ ನುಗ್ಗಿ ಖಾಸಗಿ ಬಸ್ಗೆ ಡಿಕ್ಕಿ ಹೊಡೆದಿದ್ದರಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಿದರು.
ಬಸ್ಗಳಲ್ಲಿ ಸುರಕ್ಷತಾ ಕ್ರಮಗಳು ಇರಬೇಕಾಗುತ್ತದೆ. ಬಸ್ ಗಳಲ್ಲಿನ ಸುರಕ್ಷತೆಯ ವಿಚಾರವಾಗಿ ತನಿಖೆ ನಡೆಸುವುದಾಗಿ ಅವರು ಹೇಳಿದರು.ನಾಯಕತ್ವ ಗೆ12ೂಂದಲಗಳ ಬಗ್ಗೆ ಚರ್ಚೆಗಳಿಗೆ ಇನ್ನೂ ಮುಂದೆ ತಾವು ಉತ್ತರ ನೀಡುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ನಿರ್ಗಮಿಸಿದರು.
