ಮುಂಬೈ, ಫೆ.9 (ಪಿಟಿಐ)-ಆಯಾ ರಾಜ್ಯಗಳ ತೆರಿಗೆಯ ಕೊಡುಗೆಗೆ ಅನುಗುಣವಾಗಿ ಕೇಂದ್ರದ ಹಣವನ್ನು ಪಡೆಯಬೇಕು ಎಂಬ ಕೆಲವು ರಾಜ್ಯಗಳ ಬೇಡಿಕೆಯು ಕ್ಷುಲ್ಲಕ ಚಿಂತನೆ ಮತ್ತು ದುರದಷ್ಟಕರ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ದೇಶವು ಅಭಿವದ್ಧಿ ಹೊಂದಬೇಕಾದರೆ, ಈಶಾನ್ಯ ಮತ್ತು ಪೂರ್ವ ಭಾರತದ ರಾಜ್ಯಗಳಾದ ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್‌ಗಳು ಅಭಿವದ್ಧಿ ಹೊಂದಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ ಎಂದು ಗೋಯಲ್‌ಹೇಳಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಅಂತರ-ರಾಜ್ಯ ಜೀವನದಲ್ಲಿ ವಿದ್ಯಾರ್ಥಿಗಳ ಅನುಭವ (ಎಸ್‌ಇಐಎಲ್) ಉಪಕ್ರಮವು ಇಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಏಕಾತತಾ ಯಾತ್ರೆ 2025 ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಮಾತನಾಡುತ್ತಿದ್ದರು.
ಕಳೆದ 11 ವರ್ಷಗಳಲ್ಲಿ, ಮಹಾಭಾರತದ ಅರ್ಜುನನಂತೆ ಮೋದಿ ಸರ್ಕಾರದ ಲೇಸರ್ ಫೋಕಸ್ ಈಶಾನ್ಯ ಮತ್ತು ಪೂರ್ವ ರಾಜ್ಯಗಳ ಮೇಲೆ ಇತ್ತು ಎಂದು ಸಚಿವರು ಹೇಳಿದರು.
ಕೆಲವು ರಾಜ್ಯಗಳು ಮತ್ತು ಕೆಲವು ನಾಯಕರು … ನಾನು ಇದನ್ನು ರಾಜಕೀಯಗೊಳಿಸಲು ಬಯಸುವುದಿಲ್ಲ ಆದರೆ ಮಹಾರಾಷ್ಟ್ರದ ಕೆಲವು ನಾಯಕರು ಹೇಳುತ್ತಿದ್ದರು, ಆದರೆ ಎರಡೂವರೆ ವರ್ಷಗಳ ಹಿಂದಿನ ಸರ್ಕಾರದ ನಾಯಕರು ಮುಂಬೈ ಮತ್ತು ಮಹಾರಾಷ್ಟ್ರ ಪಾವತಿಸಿದ ತೆರಿಗೆಯನ್ನು ಲೆಕ್ಕ ಹಾಕುತ್ತಿದ್ದರು ಮತ್ತು (ಬೇಡಿಕೆ) ಇಷ್ಟು ಮೊತ್ತವನ್ನು (ಕೇಂದ್ರದ ನಿಧಿಯನ್ನು) ಹಿಂತಿರುಗಿಸಬೇಕು ಎಂದು ಗೋಯಲ್ ಹೇಳಿದರು. ಮುಂಬೈ ಉತ್ತರದ ಸಂಸದರು ಹಿಂದಿನ ಉದ್ಧವ್ ಠಾಕ್ರೆ ನೇತತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉಲ್ಲೇಖಿಸುತ್ತಿದ್ದರು.
ಕರ್ನಾಟಕ, ತಮಿಳುನಾಡು, ತೆಲಂಗಾಣದಂತಹ ಕೆಲವು ರಾಜ್ಯಗಳು ತಾವು ಪಾವತಿಸಿದ ತೆರಿಗೆಯ ಮೊತ್ತವನ್ನು ವಾಪಸ್ ಪಡೆಯಬೇಕು ಎಂದು ಹೇಳುತ್ತಿವೆ. ಇದಕ್ಕಿಂತ (ಹೆಚ್ಚಿನ) ಕ್ಷುಲ್ಲಕ ಚಿಂತನೆ (ಛೋಟಿ ಸೋಚ್) ಇರಲಾರದು. ಇದಕ್ಕಿಂತ (ಹೆಚ್ಚು) ದುರದಷ್ಟಕರ ಮತ್ತೊಂದಿಲ್ಲ ಎಂದು ಅವರು ಹೇಳಿದರು.