Thursday, March 13, 2025
Homeರಾಜ್ಯಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ : ಗೃಹ ಸಚಿವಪರಮೇಶ್ವರ್‌ ಎಚ್ಚರಿಕೆ

ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ : ಗೃಹ ಸಚಿವಪರಮೇಶ್ವರ್‌ ಎಚ್ಚರಿಕೆ

Strict action against those spreading fake news: Home Minister Parameshwara

ಬೆಂಗಳೂರು,ಮಾ.13- ದಿನದಿಂದ ದಿನಕ್ಕೆ ಸೈಬರ್‌ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೇಕ್‌ ನ್ಯೂಸ್‌‍ (ಸುಳ್ಳು ಸುದ್ದಿ) ಹಬ್ಬಿಸುವವರ ಕಟ್ಟು ನಿಟ್ಟಿನ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಎಚ್ಚರಿಕೆ ನೀಡಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ನವೀನ್‌ ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಒಂದು ವರ್ಷದ ಅವಧಿಯಲ್ಲಿ 22 ಸಾವಿರ ಸೈಬರ್‌ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜನ ಜಾಗೃತ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದರೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಎಂದು ವಿಷಾದಿಸಿದರು.

ಆತ್ಯಾಚಾರ, ಕೊಲೆ ಫೋಕ್ಸೊ ಕೇಸ್‌‍ ಪ್ರಕರಣ ಕಡಿಮೆ ಆಗುತ್ತಿದೆ. ಆದರೆ ಸೈಬರ್‌ ಅಪರಾಧ ಕಡಿಮೆಯಾಗಿಲ್ಲ. ಇದಕ್ಕೆ ಕಾನೂನು ಕಡಿಮೆ ಇರುವ ಕೇಂದ್ರ ಸರ್ಕಾರ ನೂತನ ಕಾಯ್ದೆಯನ್ನು ಮಾಡಬೇಕು. ಹೀಗಾಗಿ ನಮ ಸರ್ಕಾರ ಮಾಡಲು ಮುಂದಾಗಿದೆ. ಯಾವ ಕಾನೂನು ಅಗತ್ಯ ಎಂದು ಚರ್ಚೆ ಮಾಡುತ್ತೇವೆ. ಹೆಚ್ಚಾಗಿ ಹಣ ಬೇಕಾದಾಗ ಬಜೇಟ್‌ ನಲ್ಲಿ ಅನುದಾನ ಕೇಳುತ್ತೇವೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಕುವವರ ವಿರುದ್ಧ ಸುಮೋಟೊ ದೂರು ದಾಖಲಿಸಿಕೊಳ್ಳಲಾಗುತ್ತದೆ. 2023 ರಲ್ಲಿ -228 , 2024 ರಲ್ಲಿ -338, 2025 ರಲ್ಲಿ ಇಲ್ಲಿ ತನಕ 68 ಸುಮೋಟೊ ಪ್ರಕರಣ ದಾಖಲಾಗಿದೆ ಎಂದು ಅಂಕಿ ಸಂಖ್ಯೆಗಳ ವಿವರಣೆ ನೀಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಇದನ್ನು ಮಾನಿಟರ್‌ ಮಾಡಲು ಒಬ್ಬ ವ್ಯಕ್ತಿ ನಿಯೋಜನೆ ಒಳಗೊಂಡ ಒಂದು ಡ್ಕೆ್‌ ಮಾಡಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆ,ಪರ್ಸನಲ್‌ ಪ್ಟೋ್‌ ಮಾಡುವವರ ಬಗ್ಗೆ ಗಮನಿಲು ಒಂದು ಡ್ಕೆ್‌ ರಚನೆ ಮಾಡಿದ್ದೇವೆ. ಕೆಲವು ಸಂಘಟನೆಗಳು ಏನೋನು ಪ್ಟೋ್‌ ಮಾಡುತ್ತಾರೆ. ಪ್ರತಿ ಪೊಲೀಸ್‌‍ ಠಾಣೆಯಲ್ಲಿ ವಾರದ 24 ಗಂಟೆಯೂ ಕಾರ್ಯ ನಿರ್ವಾಹಿಸುತ್ತಾರೆ. ಇದನ್ನು ನೋಡಿಕೊಳ್ಳಲು ನಾಲ್ಕು ವಿಂಗ್‌ ಮಾಡಿದ್ದೇವೆ ಎಂದು ಹೇಳಿದರು.

RELATED ARTICLES

Latest News