ಲಕ್ನೋ,ನ.3- ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಐಐಟಿ ಕ್ಯಾಂಪಸ್‍ನ ವಿದ್ಯಾರ್ಥಿನಿಯನ್ನು ಮೂವರು ಅಪರಿಚಿತ ವ್ಯಕ್ತಿಗಳು ವಿವಸ್ತ್ರಗೊಳಿಸಿ ಆಕೆಗೆ ಚುಂಬಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಮೂವರು ಅಪರಿಚಿತ ವ್ಯಕ್ತಿಗಳು ಮಹಿಳಾ ವಿದ್ಯಾರ್ಥಿನಿಯನ್ನು ಕಿಸ್ ಮಾಡಿ ವಿವಸ್ತ್ರಗೊಳಿಸಿದ್ದಾರೆ ಎಂದು ಆರೋಪಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ಈ ಘಟನೆ ನಡೆದಿದ್ದು, ಬೈಕ್ ನಲ್ಲಿ ಬಂದ ಮೂವರು ಕೃತ್ಯದ ವಿಡಿಯೋ ಕೂಡ ರೆಕಾರ್ಡ್ ಮಾಡಿದ್ದಾರೆ.
ಘಟನೆಯಲ್ಲಿ ಹೊರಗಿನವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹೊರಗಿನವರು ಕ್ಯಾಂಪಸ್‍ಗೆ ಪ್ರವೇಶಿಸುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‍ಯು) ಕ್ಯಾಂಪಸ್‍ನಿಂದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಅನ್ನು ಪ್ರತ್ಯೇಕಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ವಿದ್ಯಾರ್ಥಿ ಪ್ರತಿನಿಗಳೊಂದಿಗಿನ ಸಭೆಯ ನಂತರ ಸಂಸ್ಥೆಯು ಈ ಪ್ರಸ್ತಾಪವನ್ನು ಶಿಕ್ಷಣ ಸಚಿವಾಲಯದೊಂದಿಗೆ ಚರ್ಚಿಸುವುದಾಗಿ ತಿಳಿಸಿದೆ.
ಶಾಸಕರಿಗೆ 50 ಕೋಟಿ ಆಫರ್ : ಸಿಒಡಿ ಆಂತರಿಕ ವಿಚಾರಣೆ
ಕ್ಯಾಂಪಸ್‍ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಶೀಘ್ರದಲ್ಲೇ ಕ್ಯಾಂಪಸ್‍ನಲ್ಲಿ ಹೆಚ್ಚಿನ ಸಿಸಿಟಿವಿಗಳನ್ನು ಅಳವಡಿಸಲಾಗುವುದು ಎಂದು ರಿಜಿಸ್ಟ್ರಾರ್ ಹೇಳಿದರು. ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ವಿದ್ಯಾರ್ಥಿಗಳ ಓಡಾಟವನ್ನು ನಿರ್ಬಂಧಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ವಿದ್ಯಾರ್ಥಿನಿ ಸ್ನೇಹಿತನೊಂದಿಗೆ ಹೊರಗೆ ಹೋಗಿದ್ದಾಗ ಆಕೆಯ ಮೇಲೆ ಹಲ್ಲೆನಡೆಸಲಾಗಿದೆ. ಅವರು ಕರ್ಮಾನ್ ಬಾಬಾ ದೇವಸ್ಥಾನದ ಬಳಿ ಇದ್ದಾಗ ಮೂವರು ಪುರುಷರು ಮೋಟಾರ್ ಸೈಕಲ್‍ನಲ್ಲಿ ಬಂದು ಅವಳನ್ನು ಬಲವಂತವಾಗಿ ಒಂದು ಮೂಲೆಗೆ ಕರೆದೊಯ್ದು ಅವಳ ಸ್ನೇಹಿತನಿಂದ ಬೇರ್ಪಡಿಸಿದ ನಂತರ ಅವಳ ಬಾಯಿಯನ್ನು ಬಿಗಿದರು.
ನಂತರ ಆರೋಪಿ ಮಹಿಳೆಯನ್ನು ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿ ಫೋಟೋ ಕ್ಲಿಕ್ಕಿಸಿದ್ದಾನೆ. ಅವರು 15 ನಿಮಿಷಗಳ ನಂತರ ಆಕೆಯನ್ನು ಹೋಗಲು ಬಿಟ್ಟು ಆಕೆಯ ಫೋನ್ ಸಂಖ್ಯೆಯನ್ನು ತೆಗೆದುಕೊಂಡರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟೀಮ್‍ಇಂಡಿಯಾ ನಾಯಕತ್ವ ಹೆಮ್ಮೆ ತಂದಿದೆ : ರೋಹಿತ್
ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಕ್ಯಾಂಪಸ್‍ನಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿಶ್ವವಿದ್ಯಾಲಯದ ಆಡಳಿತದೊಂದಿಗೆ ಜಂಟಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.