ಲಂಡನ್, ಮಾ.13- ಕಿಡ್ನಿ ಮಾರಾಟದ ದಂಧೆ ಬಗ್ಗೆ ಕೇಳಿರಬಹುದು ಆದರೆ, ನಿಮಗೆ ಕನ್ಯತ್ವ ಮಾರಾಟದ ವಿಷಯ ತಿಳಿದಿದೆಯೇ ಇಲ್ಲ ಎಂದಾದರೆ ಈ ಸುದ್ದಿ ನೋಡಿ. ಇಲ್ಲೊಬ್ಬ ವಿದ್ಯಾರ್ಥಿನಿ ತನ್ನ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಬರೊಬ್ಬರಿ 18 ಕೋಟಿ ರೂ.ಗಳಿಗೆ ತನ್ನ ಕನ್ಯತ್ವ ಮಾರಿಕೊಂಡಿದ್ದಾರೆ.
ಅಷ್ಟು ದೊಡ್ಡ ಮೊತ್ತಕ್ಕೆ ಕನ್ಯತ್ವ ಖರೀದಿಸಿರುವು ಹಾಲಿವುಡ್ ಸ್ಟಾರ್ ಅಂತೆ ಆದರೆ, ಸ್ಟಾರ್ ಹೆಸರನ್ನು ಇದುವರೆಗೂ ಯಾರು ಬಹಿರಂಗಪಡಿಸಿಲ್ಲ. ಇತ್ತೀಚೆಗೆ ನಡೆದ ಬಿಡ್ಡಿಂಗ್‌ನಲ್ಲಿ ಲಂಡನ್ ಮೂಲದ ಲೌರಾ ಎಂಬ ವಿದ್ಯಾರ್ಥಿನಿ ಜೀವನದಲ್ಲಿ ಸೆಟಲ್ ಆಗಬೇಕು ಎಂಬ ಆಸೆಯಿಂದ ಇಂತಹ ಗಟ್ಟಿ ತೀರ್ಮಾನ ಕೈಗೊಂಡಿದ್ದಾರೆ.
ಆಕೆಗಿನ್ನೂ 22 ವರ್ಷ ಅವಳು ತನ್ನ ಕನ್ಯತ್ವವನ್ನು ವೆಬ್ ಸೈಟ್ ಮೂಲಕ ಹರಾಜಿಗೆ ಇಟ್ಟಿದ್ದಳು. ಈ ಹರಾಜಿನಲ್ಲಿ ಜನಸಾಮಾನ್ಯರು, ಉದ್ಯಮಿಗಳು, ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಭಾಗಿ ಆಗಿದ್ದರು. ಈಗ ಈ ಹುಡುಗಿಯ ಕನ್ಯತ್ವ ಹಾಲಿವುಡ್ ಹೀರೋಗೆ ಮಾರಾಟ ಆಗಿದೆ.
ಅವಳಿಗೆ ತನ್ನ ನಿರ್ಧಾರದ ಬಗ್ಗೆ ಯಾವುದೇ ಬೇಸರ ಇಲ್ಲ. ತನ್ನ ಜೀವನ ಸೆಟಲ್ ಮಾಡಿಕೊಳ್ಳಲು ಇದು ಒಳ್ಳೆಯ ಆಯ್ಕೆ ಎಂದು ಆಕೆ ಹೇಳಿದ್ದಾಳೆ. ನನಗೆ ಆ ಬಗ್ಗೆ ಬೇಸರ ಇಲ್ಲ. ಪ್ರತಿಯಾಗಿ ಏನೂ ಸಿಗದೇ ಕೆಲವರು ಕನ್ಯತ್ವ ಕಳೆದುಕೊಳ್ಳುತ್ತಾರೆ. ನನಗೆ ಭವಿಷ್ಯವೇ ಸೆಟಲ್ ಆಗುತ್ತಿದೆ ಎಂದು ಅವಳು ಹೇಳಿದ್ದಾಗಿ ವರದಿ ಆಗಿದೆ.
ಲೌರಾಳ ಕನ್ಯತ್ವ ಪಡೆದುಕೊಳ್ಳಲು ಹಾಲಿವುಡ್ ನ ಹೀರೋ ಜೊತೆ ಅನೇಕ ರಾಜಕಾರಣಿಗಳು, ಉದ್ಯಮಿಗಳು ರೇಸ್‌ನಲ್ಲಿ ಇದ್ದರು. ಅಂತಿಮವಾಗಿ 18 ಕೋಟಿ ರೂಪಾಯಿ ಕೊಡಲು ರೆಡಿ ಆದ ಹೀರೋಗೆ ಲೌರಾ ಸಿಕ್ಕಿದ್ದಾಳೆ.
ಲೌರಾ ಇನ್ನೂ ಶಿಕ್ಷಣ ಪಡೆಯುತ್ತಿದ್ದಾಳೆ. ಈ ರೀತಿ ಬಂದ ಹಣವನ್ನು ಓದಿಗೆ ಬಳಕೆ ಮಾಡೋದಾಗಿ ಹೇಳಿದ್ದಾಳೆ. ಅಲ್ಲದೆ, ಭವಿಷ್ಯದಲ್ಲಿ ಹಣಕ್ಕಾಗಿ ಸುಗರ್ ಡ್ಯಾಡಿನ ಹುಡುಕಿಕೊಳ್ಳೋದಾಗಿ ಹೇಳಿದ್ದಾಳೆ.
ಲೌರಾ ಕನ್ಯ ಹೌದೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಲು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಆಕೆ ಕನ್ಯತ್ವ ಹೊಂದಿದ್ದಾಳೆ ಎಂಬ ವರದಿ ಬಂದ ಬಳಿಕವೇ ಅವಳನ್ನು ಹರಾಜಿಗೆ ಇಡಲಾಗಿತ್ತು. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಕೆಲವರು ಇದನ್ನು ಟೀಕಿಸಿದ್ದಾರೆ. ಆದರೆ, ಇದಕ್ಕೆ ಲೌರಾ ತಲೆಕೆಡಿಸಿಕೊಂಡಿಲ್ಲ.