ಪ್ರೇಗ್, ಡಿ 22- ಚೆಕ್ ಗಣರಾಜ್ಯದ ಪ್ರೇಗ್ ಡೌನ್‍ಟೌನ್‍ನಲ್ಲಿರುವ ವಿಶ್ವವಿದ್ಯಾನಿಲಯದ ಕಟ್ಟಡದಲ್ಲಿ ಏಕಾಂಗಿ ಬಂದೂಕುಧಾರಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲ್ಸರ್ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ವಿಭಾಗದ ಕಟ್ಟಡದಲ್ಲಿ ರಕ್ತಪಾತ ನಡೆದಿದ್ದು,ಮನಬಂದಂತೆ ಗುಂಡು ಹಾರಿಸಿದವನು ವಿದ್ಯಾರ್ಥಿಯಾಗಿದ್ದ ಎಂದು ಪ್ರೇಗ್ ಪೊಲೀಸ್ ಮುಖ್ಯಸ್ಥ ಮಾರ್ಟಿನ್ ವೊಂಡ್ರಾಸೆಕ್ ಹೇಳಿದ್ದಾರೆ. ಈ ಘಟನೆಯಲ್ಲಿ ಬಂದೂಕುಧಾರಿಯೂ ಸಾವನ್ನಪ್ಪಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.
15 ಮಂದಿ ಸಾವನ್ನಪ್ಪಿದ್ದಾರೆ ಮತ್ತು 24 ಮಂದಿ ಗಾಯಗೊಂಡಿದ್ದಾರೆ ಎಂದು ಮೊದಲು ವರದಿ ಮಾಡಿದ ನಂತರ 14 ಜನರು ಸಾವನ್ನಪ್ಪಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ ಎಂದು ವೊಂಡ್ರಾಸೆಕ್ ಸಂಜೆ ಹೇಳಿದರು. ಅವರು ಬದಲಾವಣೆಯನ್ನು ವಿವರಿಸಲಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಪೊಲೀಸರು ಬಲಿಪಶುಗಳ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ ಅಥವಾ ಜನ್ ಪಲಾಚ್ ಸ್ಕ್ವೇರ್‍ನಲ್ಲಿರುವ ವ್ಲ್ತಾವಾ ನದಿಯ ಬಳಿ ಇರುವ ಕಟ್ಟಡದಲ್ಲಿ ಗುಂಡಿನ ದಾಳಿಗೆ ಸಂಭವನೀಯ ಉದ್ದೇಶವನ್ನು ನೀಡಿಲ್ಲ. ಜೆಕ್ ಆಂತರಿಕ ಸಚಿವ ವಿಟ್ ರಕುಸನ್ ಅವರು ತನಿಖಾಧಿಕಾರಿಗಳು ಯಾವುದೇ ಉಗ್ರಗಾಮಿ ಸಿದ್ಧಾಂತ ಅಥವಾ ಗುಂಪುಗಳಿಗೆ ಸಂಪರ್ಕವನ್ನು ಅನುಮಾನಿಸುವುದಿಲ್ಲ ಎಂದು ಹೇಳಿದರು.
ಬಂದೂಕುಧಾರಿಯು ತನ್ನ ತಂದೆಯನ್ನು ಪ್ರೇಗ್‍ನ ಪಶ್ಚಿಮ ಭಾಗದಲ್ಲಿರುವ ಹೋಸ್ಟೌನ್‍ನಲ್ಲಿ ಗುರುವಾರ ಮುಂಜಾನೆ ಕೊಂದಿz್ದದ್ದಾನೆ. ಕೊಲೆಗಾರ ಯಾವುದೇ ಕ್ರಿಮಿನಲ್ ದಾಖಲೆಯಿಲ್ಲದ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದ ಆದರೆ, ಇಂತಹ ದುಷ್ಕøತ್ಯ ಏಕೆ ನಡೆಸಿದ ಎಂದು ಇನ್ನು ತಿಳಿದುಬಂದಿಲ್ಲ.
ಆರ್ಸಿಬಿಗೆ ಕಾಡಲಿದೆ ಸ್ಪಿನ್ನರ್ ಕೊರತೆ
ತಕ್ಷಣವೇ ಜಾರಿಗೆ ಬರುವಂತೆ ವಿಶ್ವವಿದ್ಯಾನಿಲಯದ ಕಟ್ಟಡಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸುವುದಾಗಿ ವಿಶ್ವವಿದ್ಯಾಲಯದ ಅಕಾರಿಗಳು ತಿಳಿಸಿದ್ದಾರೆ.ನಮ್ಮ ವಿಶ್ವವಿದ್ಯಾನಿಲಯದ ಸಮುದಾಯದ ಸದಸ್ಯರ ಜೀವಹಾನಿಗೆ ನಾವು ಶೋಕಿಸುತ್ತೇವೆ, ಎಲ್ಲಾ ದುಃಖಿತರಿಗೆ ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಮತ್ತು ನಮ್ಮ ಆಲೋಚನೆಗಳು ದುರಂತದಿಂದ ಸಂತ್ರಸ್ತರಾದ ಎಲ್ಲರೊಂದಿಗೂ ಇರುತ್ತವೆ ಎಂದು ಚಾಲ್ಸರ್ವಿ ಶ್ವವಿದ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಶೂಟಿಂಗ್ ನಡೆದ ಕಟ್ಟಡವು ಪ್ರೇಗ್‍ನ ಓಲ್ಡ ಟೌನ್‍ನಲ್ಲಿರುವ ಜನನಿಬಿಡ ಪ್ರವಾಸಿ ಪ್ರದೇಶವಾದ ಜನ್ ಪಲಾಚ್ ಸ್ಕ್ವೇರ್‍ನಲ್ಲಿರುವ ವಲ್ತಾವಾ ನದಿಯ ಸಮೀಪದಲ್ಲಿದೆ. ಸುಂದರವಾದ ಓಲ್ಡ ಟೌನ್ ಸ್ಕ್ವೇರ್‍ನಿಂದ ಇದು ಕೆಲವೇ ನಿಮಿಷಗಳ ನಡಿಗೆಯಾಗಿದೆ, ಇದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ಜನಪ್ರಿಯ ಕ್ರಿಸ್ಮಸ್ ಮಾರುಕಟ್ಟೆಯು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.