Wednesday, August 20, 2025
Homeಜಿಲ್ಲಾ ಸುದ್ದಿಗಳು | District Newsಚಿತ್ರದುರ್ಗ | Chitradurgaರಾಷ್ಟ್ರೀಯ ಹೆದ್ದಾರಿ 48ರ ಪಕ್ಕ ವಿದ್ಯಾರ್ಥಿನಿ ಶವ ಪತ್ತೆ, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ

ರಾಷ್ಟ್ರೀಯ ಹೆದ್ದಾರಿ 48ರ ಪಕ್ಕ ವಿದ್ಯಾರ್ಥಿನಿ ಶವ ಪತ್ತೆ, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ

Student's body found near National Highway 48, of rape and murder suspected

ಚಿತ್ರದುರ್ಗ,ಆ.20-ಕಾಲೇಜು ವಿದ್ಯಾರ್ಥಿನಿಯ ಶವ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕ ಪತ್ತೆಯಾಗಿದ್ದು , ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಕೊಲೆಯಾದ ಯುವತಿಯನ್ನ ಹಿರಿಯೂರು ತಾಲೂಕಿನ ಕೋವೇರಹಟ್ಟಿ ಗ್ರಾಮದ ವರ್ಷಿತಾ (19) ಎಂದು ಗುರುತಿಸಲಾಗಿದೆ.

ಈಕೆ ಇಲ್ಲಿನ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು,ನಿಗೂಢವಾಗಿ ನಾಪತ್ತೆಯಾಗಿದ್ದಳು. ಹೆದ್ದಾರಿ ಪಕ್ಕ ಕಳೆದ ರಾತ್ರಿ ಶವ ಪತ್ತೆಯಾದ ನಂತರ ಯುವತಿಯ ಕೈ ಮೇಲಿನ ಟ್ಯಾಟುನಿಂದ ಗುರುತುಪತ್ತೆಯಾಗಿದೆ.

ಮೃತ ಯುವತಿ ಕಾಲೇಜು ವಿದ್ಯಾರ್ಥಿನಿ ವರ್ಷಿತಾ ಎಂದು ಗೊತ್ತಾಗುತ್ತಿದ್ದಂತೆ ಪೋಷಕರು ಸ್ಥಳಕ್ಕೆ ದಾವಿಸಿದ್ದಾರೆ.ಯುವತಿ ಸಂಪರ್ಕದಲ್ಲಿದ್ದ ಯುವಕ ಚೇತನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಚೇತನ್‌ ಕ್ಯಾನ್ಸರ್‌ ರೋಗ ಪೀಡಿತನಾಗಿದ್ದು 3ನೇ ಹಂತದಲ್ಲಿರುವ ಬಗ್ಗೆ ಮಾಹಿತಿ ಇದೆ. ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು ಆತ್ಯಾಚಾರ ನಡೆಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಘಟನೆ ಖಂಡಿಸಿ ಎಬಿವಿಪಿ ಸಂಘಟನೆ ಇಂದು ಪ್ರತಿಭಟನೆಗೆ ನಡೆಸಿದೆ ಇನ್ನು ಕಾಲೇಜು ಬಂದ್‌ಗೆ ಕರೆ ನೀಡಲಾಗಿದೆ.

ಡಿಸಿ ಕಚೇರಿಯ ಸಮೀಪ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆದಿದ್ದು , ಕುಟುಂಬಸ್ಥರು, ವಿವಿಧ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

RELATED ARTICLES

Latest News