ಬೆಂಗಳೂರು, ಜು-19, ಕಲಾಪ ವೀಕ್ಷಣೆಗೆಂದು ವಿವಿಧ ಶಾಲೆಯ ವಿದ್ಯಾರ್ಥಿಗಳು ವಿಧಾನಸೌಧಕ್ಕೆ ಖುಷಿ-ಖುಷಿಯಿಂದ ಬಂದಿದ್ದರು. ತಮ್ಮ ಶಾಲಾ ಬ್ಯಾಗುಗಳ ಸಮೇತ ಆಗಮಿಸಿದ್ದ ವಿದ್ಯಾರ್ಥಿಗಳ ಬ್ಯಾಗುಗಳನ್ನು ಒಳಗೆ ಬಿಡದೆ ವಿಧಾನಸೌಧ ಮುಂದಿನ ಬೃಹತ್ ಮೆಟ್ಟಿಲುಗಳ ಕೆಳಗಡೆ ಇರಿಸಲಾಯಿತು.
ಪಾಪ ವಿದ್ಯಾರ್ಥಿಗಳು ವಿಧಾನ ಮಂಡಲದ ಕಾರ್ಯ-ಕಲಾಪಗಳನ್ನು ವೀಕ್ಷಿಸಲು ಒಳಗೆ ಹೋದರೆ, ಇತ್ತ ಹೊರಗಡೆ ಮಳೆ ಸುರಿದು ಮೆಟ್ಟಿಲು ಕೆಳಗೆ ಇಟ್ಟಿದ್ದ ಬ್ಯಾಗುಗಳು ನೆಂದು ಒಳಗಿದ್ದ ಪುಸ್ತಕಗಳು ಹಾಳಾಯಿತು.
ಬ್ಯಾಗುಗಳನ್ನು ಒಳಗೆ ಬಿಡದಿದ್ದರೂ ಪರವಾಗಿಲ್ಲ, ಸುರಕ್ಷಿತ ಜಾಗದಾಲ್ಲಾದರೂ ಇರಿಸಬಹುದಿತ್ತು. ಮೆಟ್ಟಿಲುಗಳ ಕೆಳಗೆ ಇರಿಸಿ ಬ್ಯಾಗು, ಪುಸ್ತಕಗಳು ನೆನೆಯಲು ಕಾರಣವಾಗಿದ್ದು ನೋವಿನ ಸಂಗತಿ.
ಹೊರಗಡೆ ಮಳೆ ಬರುತ್ತಿದೆ, ಮಳೆಯಲ್ಲಿ ಬ್ಯಾಗುಗಳು ನೆನೆದು ಅದರ ಒಳಗಿರುವ ಪುಸ್ತಕಗಳು ಹಾಳಾಗಬಹುದೆಂಬ ಕಲ್ಪನೆಯೂ ಅಲ್ಲಿನ ಸಿಬ್ಬಂದಿಗಳಿಗೆ ಬರಲಿಲವೆ? ಪಾಪ ಖುಷಿಯಲ್ಲಿ ಬಂದ ಮಕ್ಕಳು ಮಳೆಯಲ್ಲಿ ತೊಯ್ದ ಬ್ಯಾಗುಗಳನ್ನು ಹಿಡಿದು ವಾಪಸ್ಸು ಹೋಗಬೇಕಾದ ಪರಿಸ್ಥಿತಿ ಬಂದಿದ್ದು ನೋವಿನ ಸಂಗತಿ.