ಸುಕಾ, ಜು.1 (ಪಿಟಿಐ) – ಕಳೆದ ತಿಂಗಳು ಐಇಡಿ ಸ್ಪೋಟಿಸಿ ಇಬ್ಬರು ಸಿಆರ್ ಪಿಎಫ್ ಕೋಬ್ರಾ ಸಿಬ್ಬಂದಿ ಸಾವಿಗೆ ಕಾರಣರಾದ ಒಂಬತ್ತು ನಕ್ಸಲೀಯರನ್ನು ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಟದ ಘಟನೆಯಲ್ಲಿ ಭಾಗಿಯಾದ ನಾಲ್ವರನ್ನು ಪೊಲೀಸ್ ಜಂಟಿ ತಂಡ, ಸಿಆರ್ಪಿಎ್ನ ಬೆಟಾಲಿಯನ್ ಮತ್ತು ಕಮಾಂಡೋ ಬೆಟಾಲಿಯನ್ ಫ಼ಾರ್ ರ್ ರೆಸಲ್ಯೂಟ್ ಆಕ್ಷನ್ ಜಾಗರಗುಂದದ ತಿವ್ಮಾಪುರಂ ಮತ್ತು ಟೇಕಲ್ಗುಡಂ ಗ್ರಾಮಗಳ ನಡುವಿನ ಅರಣ್ಯದಿಂದ ಬಂಽಸಿದೆ ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ತಿಳಿಸಿದ್ದಾರೆ.
ಬಂಽತರಲ್ಲಿ ಕುಂಜಮ್ ರಾಮ (35), ಬರ್ಸೆ ಬಿಚ್ಚೆಮ್ (40) ಮಾವೋವಾದಿಗಳ ಮುಂಚೂಣಿಯಲ್ಲಿರುವ ಡಿಎಕೆಎಂಎಸ್ (ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆ) ಸದಸ್ಯರಾಗಿದ್ದು, ಕುನಜ್ಮ್ ಜೋಗಾ (22) ಮತ್ತು ಕುಂಜಮ್ ಭೀಮಾ (21) ಮಿಲಿಟಿಯ ಸದಸ್ಯರಾಗಿದ್ದಾರೆ ಎಂದು ಅವರು ಹೇಳಿದರು. .
ಕಳೆದ ಜೂನ್ 23 ರಂದು ಸಿಲ್ಗರ್ ಮತ್ತು ಟೇಕಲ್ಗುಡೆಂ ಶಿಬಿರಗಳ ನಡುವೆ ತಿವ್ಮಾಪುರಂ ಗ್ರಾಮದ ಬಳಿ ಭದ್ರತಾ ಸಿಬ್ಬಂದಿ ಸಾಗಿಸುತ್ತಿದ್ದ ಟ್ರಕ್ ಅನ್ನು ಸೋಟಿಸಿದ ಕಾನ್್ಸಟೇಬಲ್ ಶೈಲೇಂದ್ರ (29) ಮತ್ತು ಕೋಬ್ರಾದ 201 ನೇ ಬೆಟಾಲಿಯನ್ನ ಚಾಲಕ ವಿಷ್ಣು ಆರ್ (35) ಹುತಾತ್ಮರಾಗಿದ್ದರು
ಇದರೊಂದಿಗೆ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 10 ನಕ್ಸಲೀಯರನ್ನು ಬಂಽಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರತ್ಯೇಕ ಘಟನೆಯಲ್ಲಿ, ಜಿಲ್ಲಾ ರಿಸರ್ವ್ ಗಾರ್ಡ್ ಮತ್ತು ಸ್ಥಳೀಯ ಪೊಲೀಸರ ಜಂಟಿ ತಂಡವುಶೋಧ ಕಾರ್ಯಾಚರಣೆಯಲ್ಲಿದ್ದಾಗ ಜಾಗರಗುಂದ ಪೊಲೀಸ್ ಠಾಣೆ ವ್ಯಾಪ್ತಿಯ ಗೊಂಡಪಲ್ಲಿ ಗ್ರಾಮದ ಅರಣ್ಯದಿಂದ ಐವರು ನಕ್ಸಲೀಯರನ್ನು ಬಂಧಿಸಲಾಯಿತು ಎಂದು ಚವಾಣ್ ಹೇಳಿದರು.ಈ ವರ್ಷ ಏಪ್ರಿಲ್ 6 ರಂದು ಜಗರಗುಂದ ಪ್ರದೇಶದಲ್ಲಿ ಪೊಲೀಸ್ ತಂಡದ ಮೇಲೆ ನಡೆದ ದಾಳಿಯಲ್ಲಿ ಐವರು ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು.