Monday, May 19, 2025
Homeಅಂತಾರಾಷ್ಟ್ರೀಯ | Internationalಟಿ20 ವಿಶ್ವಕಪ್‌ ಗೆದ್ದ ತಮ್ ಇಂಡಿಯಾ ಗುಣಗಾನ ಮಾಡಿದ ಟೆಕ್‌ ದೈತ್ಯರು

ಟಿ20 ವಿಶ್ವಕಪ್‌ ಗೆದ್ದ ತಮ್ ಇಂಡಿಯಾ ಗುಣಗಾನ ಮಾಡಿದ ಟೆಕ್‌ ದೈತ್ಯರು

ನವದೆಹಲಿ,ಜೂ.30– ಟಿ20 ವಿಶ್ವಕಪ್‌ ಗೆದ್ದ ಭಾರತೀಯ ತಂಡವನ್ನು ಟೆಕ್‌ ದೈತ್ಯ ಸಂಸ್ಥೆಗಳ ಮುಖ್ಯಸ್ಥರು ಶ್ಲಾಘಿಸಿದ್ದಾರೆ.ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯನಾದೆಲ್ಲಾ, ಗೂಗಲ್‌ ಸಿಇಒ ಸುಂದರ್‌ ಪಿಚೈ ಮತ್ತಿತರ ಗಣ್ಯರು ಭಾರತ ಕ್ರಿಕೆಟ್‌ ತಂಡದ ಅಮೋಘ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಎಂತಹ ಅದ್ಭುತ ಆಟ, ಉಸಿರಾಡಲು ಸಾಧ್ಯವಾಗಲಿಲ್ಲ, ಅಭಿನಂದನೆಗಳು ಭಾರತ, ಈ ಗೆಲುವು ತುಂಬಾ ಅರ್ಹವಾಗಿದೆ! ಎಂದು ಗೂಗಲ್‌ ಸಿಇಒ ಸುಂದರ್‌ ಪಿಚೈ ಎಕ್‌್ಸ ಮಾಡಿದ್ದಾರೆ.ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಅವರು ಏನು ಫೈನಲ್‌‍. ಅಭಿನಂದನೆಗಳು. ಭಾರತ ಚೆನ್ನಾಗಿ ಆಡಿದೆ, ಸೂಪರ್‌ ವರ್ಲ್ಡ್‌ ಕಪ್‌. ನಮಗೆ ವೆಸ್ಟ್‌‍ ಇಂಡೀಸ್‌‍ ಮತ್ತು ಯುಎಸ್‌‍ಎಗಳಲ್ಲಿ ಹೆಚ್ಚು ಕ್ರಿಕೆಟ್‌ ನಡೆಯಲಿ ಎಂದು ಆರೈಸಿದ್ದಾರೆ.

ಏತನಧ್ಯೆ, ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್‌ ಮಹೀಂದ್ರಾ ಚಾಟ್‌ಜಿಪಿಟಿಗೆ ಭಾರತೀಯ ಕ್ರಿಕೆಟ್‌ ತಂಡವನ್ನು ಸೂಪರ್‌ಹೀರೋಗಳಾಗಿ ತೋರಿಸುವ ಗ್ರಾಫಿಕ್‌ ಚಿತ್ರವನ್ನು ಮಾಡಲು ಕೇಳಿಕೊಂಡಿದ್ದಾರೆ.

ಏಕೆಂದರೆ ಅವರು ಕೊನೆಯವರೆಗೂ ಸೂಪರ್‌ ಕೂಲ್‌ ಆಗಿದ್ದರು. ಭಾರತಕ್ಕೆ ಈ ಫೈನಲ್‌ನ ದೊಡ್ಡ ಕೊಡುಗೆ ಎಂದರೆ ಅದು ಸುಲಭವಾಗಿ ಬರಲಿಲ್ಲ. ಇದು ಬಹುತೇಕ ಅವರ ಹಿಡಿತದಿಂದ ಹೊರಬಿತ್ತು. ಆದರೆ ಅವರು ತಮ ಮನಸ್ಸಿನಲ್ಲಿ ಎಂದಿಗೂ ಪಂದ್ಯವನ್ನು ಬಿಟ್ಟುಕೊಡಲಿಲ್ಲ ಎಂದು ಅವರು ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸೂಪರ್‌ ಹೀರೋ ಆಗಿರುವುದು ಎಂದಿಗೂ ಗೆಲ್ಲುವ ದಢ ಸಂಕಲ್ಪವಿಲ್ಲದೆ ಬರುವುದಿಲ್ಲ ಮತ್ತು ಎಂದಿಗೂ ಕೊಡುವುದಿಲ್ಲ ಎಂಬ ಮನೋಭಾವನೆಯನ್ನು ನಮೆಲ್ಲರಿಗೂ ನೆನಪಿಸುತ್ತದೆ. ಜೈ ಹೋ! ಎಂದು ಮಹೀಂದ್ರ ಹೇಳಿದ್ದಾರೆ.

RELATED ARTICLES

Latest News