Friday, November 22, 2024
Homeರಾಜಕೀಯ | Politicsಒಂದು ಸಮುದಾಯದ ಓಲೈಕೆಗಾಗಿ ಜಿಹಾದಿ ಸರ್ಕಾರ 'ತಾಲೀಬಾನ್‌ ಗಿರಿ' ನಡೆಸುತ್ತಿದೆ : ಸುನಿಲ್‌ ಕುಮಾರ್‌

ಒಂದು ಸಮುದಾಯದ ಓಲೈಕೆಗಾಗಿ ಜಿಹಾದಿ ಸರ್ಕಾರ ‘ತಾಲೀಬಾನ್‌ ಗಿರಿ’ ನಡೆಸುತ್ತಿದೆ : ಸುನಿಲ್‌ ಕುಮಾರ್‌

ಬೆಂಗಳೂರು, ಮೇ 31- ಒಂದು ಸಮುದಾಯದ ಓಲೈಕೆಗಾಗಿ ಇಡಿ ರಾಜ್ಯದ ಹಿತ ಕಡೆಗಣಿಸಲಾಗುತ್ತಿದೆ ಎಂದರೆ ಅದು ಜಿಹಾದಿ ಸರ್ಕಾರದಿಂದ ಮಾತ್ರ ಸಾಧ್ಯ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌‍ ಸರ್ಕಾರ ರಾಜ್ಯದಲ್ಲಿ ಈಗ ನಡೆಸುತ್ತಿರುವುದು ಸರ್ಕಾರವಲ್ಲ, ತಾಲೀಬಾನ್‌ ಗಿರಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ ಕುಮಾರ್‌ ಸರ್ಕಾರದ ವಿರುದ್ದ ವಾಗ್ದಳಿ ನಡೆಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಪರಾಧ ಕೃತ್ಯ ಅಥವಾ ಕಾನೂನು ಬಾಹಿರ ವರ್ತನೆ ನಡೆಸುವುದು ತಪ್ಪಲ್ಲ ! ಆದರೆ ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳುವುದು ತಪ್ಪು ಎಂದು ವ್ಯಂಗ್ಯವಾಡಿದ್ದಾರೆ.ರಾಜ್ಯದಲ್ಲಿ ಜಿಹಾದಿ ಸರ್ಕಾರ ಅಧಿಕಾರದಲ್ಲಿ ಇದೆ ಎಂಬುದು ಮತ್ತೊಮೆ ಸಾಬೀತಾಗಿದೆ.

ಚನ್ನಗಿರಿಯಲ್ಲಿ ಪೊಲೀಸ್‌‍ ಠಾಣೆಯ ಮೇಲೆ ದಾಳಿ ನಡೆಸಿದವರಿಗೆ ಕ್ಲೀನ್‌ ಚಿಟ್‌ ಕೊಟ್ಟ ಬೆನ್ನಲ್ಲೇ ಮಂಗಳೂರಿನ ಪಂಪ್‌ ವೆಲ್‌ ವೃತ್ತದ ಬಳಿ ರಸ್ತೆಯಲ್ಲಿ ನಮಾಜ್‌ ನಡೆಸಿದ ಪ್ರಕರಣಕ್ಕೆ ರಾಜ್ಯ ಸರ್ಕಾರ ಒತ್ತಾಯಪೂರ್ವಕವಾಗಿ ಬಿ ರಿಪೋರ್ಟ್‌ ಸಲ್ಲಿಸಿದೆ ಎಂದು ಆಪಾದಿಸಿದ್ದಾರೆ.

ಪಂಪ್‌ ವೆಲ್‌ ಪ್ರಕರಣದಲ್ಲೂ ಹಾಗೇ ಆಗಿದೆ. ರಸ್ತೆಯಲ್ಲಿ ನಮಾಜ್‌ ಮಾಡಿ ಸಮಾಜದ ಸ್ವಾಸ್ಥ್ಯ ಹಾಗೂ ಸಾರ್ವಜನಿಕ ಅನಾನುಕೂಲತೆ ಸೃಷ್ಟಿಸಿದವರನ್ನು ಬಂಽಸುವುದು ಬಿಟ್ಟು, ಪ್ರಕರಣವನ್ನು ಬೆಳಕಿಗೆ ತಂದ ಶರಣ್‌ ಪಂಪ್‌ ವೆಲ್‌ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಮಾತ್ರವಲ್ಲ ಪ್ರಕರಣ ದಾಖಲಿಸಿಕೊಂಡ ಪೊಲೀಸ್‌‍ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದೆ ಎಂದು ಆರೋಪ ಮಾಡಿದ್ದಾರೆ.

RELATED ARTICLES

Latest News