Friday, November 22, 2024
Homeಬೆಂಗಳೂರುಸಿಗರೇಟ್ ಕಂಪೆನಿ ಸೂಪರ್ ವೈಸರ್ ದರೋಡೆ : ಆರೋಪಿಗಳ ಬಂಧನಕ್ಕೆ 3 ತಂಡ ರಚನೆ

ಸಿಗರೇಟ್ ಕಂಪೆನಿ ಸೂಪರ್ ವೈಸರ್ ದರೋಡೆ : ಆರೋಪಿಗಳ ಬಂಧನಕ್ಕೆ 3 ತಂಡ ರಚನೆ

ಬೆಂಗಳೂರು, ಫೆ.3- ಸಿಗರೇಟ್ ವಿತರಣಾ ಕಂಪೆನಿಯ ಸೂಪರ್ ವೈಸರ್ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಹಲ್ಲೆ ನಡೆಸಿ 15 ಲಕ್ಷ ದೋಚಿ ಪರಾರಿಯಾಗಿರುವ ದರೋಡೆಕೋರರಿಗಾಗಿ ಪಶ್ಚಿಮ ವಿಭಾಗದ ಪೊಲೀಸರು ಶೋಧ ಕೈಗೊಂಡಿದ್ದಾರೆ. ದರೋಡೆಕೋರರ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡ ಹೊರ ರಾಜ್ಯಕ್ಕೆ ಮತ್ತೊಂದು ತಂಡ ನೆರೆಯ ಜಿಲ್ಲೆಗಳಿಗೆ ಹಾಗೂ ಒಂದು ತಂಡ ನಗರಾದ್ಯಂತ ಕಾರ್ಯಾಚರಣೆ ನಡೆಸುತ್ತಿದೆ.

ಈ ತಂಡಗಳು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಟಿವಿಗಳನ್ನು ಪರಿಶೀಲಿಸಿ ಅದರಲ್ಲಿನ ದೃಶ್ಯಾವಳಿಗಳನ್ನು ಆಧರಿಸಿ ಶೋಧ ನಡೆಸುತ್ತಿವೆ. ನಗರದ ಎಂಡಿ ಸನ್ಸ್ ಎಜೆನ್ಸಿ ಯವರ ಐಟಿಸಿ ಸಿಗರೇಟ್ ವಿತರಣಾ ಕಂಪೆನಿಯಲ್ಲಿ ಸೂಪರ್‍ವೈಸರ್ ಆಗಿರುವ ಗೋಪಾಲ್ ಅವರು ಡೆಲವರಿ ಬಾಯ್ ರೆಹಮನ್ ಮತ್ತು ಟಾಟಾ ಏಸ್ ವಾಹನದ ಚಾಲಕ ಆಸೀಫ್ ಜೊತೆ ಹಣ ಸಂಗ್ರಹಿಸಲು ಮೊನ್ನೆ ಹೋಗಿದ್ದಾಗ ಅಂದು ಮಧ್ಯಾಹ್ನ 1.10ರ ಸುಮಾರಿನಲ್ಲಿ ನಾಗರಬಾವಿ ಎರಡನೇ ಹಂತದ 11ನೇ ಬ್ಲಾಕ್ ಬಳಿ ಮೂವರು ದರೋಡೆಕೋರರು ಡಿಯೋ ಬೈಕ್‍ನಲ್ಲಿ ಇವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.

ಮುಂದಿನ ವಾರದಿಂದ 29 ರೂ.ಗೆ ಸಿಗಲಿದೆ ಭಾರತ್ ಬ್ರಾಂಡ್ ಅಕ್ಕಿ

ಆ ವೇಳೆ ಗೋಪಾಲ್ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಹಲ್ಲೆ ನಡೆಸಿ ಹಣದ ಬ್ಯಾಗನ್ನು ದೋಚಿ ಪರಾರಿಯಾಗಿದ್ದಾರೆ. ಇವರ ಚೀರಾಟ ಕೇಳಿ ವಾಹನ ಚಾಲಕ ಹಾಗೂ ಡೆಲವರಿ ಬಾಯ್ ಬರುವಷ್ಟರಲ್ಲಿ ಸಿನಿಮಾ ಶೈಲಿಯಲ್ಲಿ ದರೋಡೆಕೋರರು ಪರಾರಿಯಾಗಿದ್ದಾರೆ. ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News