Sunday, April 28, 2024
Homeರಾಜ್ಯಬರಗಾಲದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಮೇವು ಸರಬರಾಜಿಗೆ ನಿಬಂಧನೆ

ಬರಗಾಲದ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಗೆ ಮೇವು ಸರಬರಾಜಿಗೆ ನಿಬಂಧನೆ

ಬೆಳಗಾವಿ, ಡಿ. 6- ಬರಗಾಲ ಹಿನ್ನೆಲೆಯಲ್ಲ ರಾಜ್ಯದಿಂದ ಯಾವುದೇ ಕಾರಣಕ್ಕೂ ಮೇವು ಹೊರ ರಾಜ್ಯಕ್ಕೆ ಹೋಗಬಾರದು ಎಂದು ನಿಬಂಧನೆ ಹೇರಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಅವರು ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೇವಿನ ಕೊರತೆ ಉಂಟಾಗದಂತೆ ರೈತರಿಗೆ ಮೇವಿನ ಬೀಜ ವಿತರಿಸಲು 20 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದರು.

ಬರ ಪರಿಹಾರ ಕಾರ್ಯಗಳಿಗಾಗಿ ಪ್ರಕೃತಿ ವಿಕೋಪ ಪರಿಹಾರ ನಿಯಡಿ ಪ್ರತಿ ಬರಪೀಡಿತ ತಾಲ್ಲೂಕಿಗೆ 324 ಕೋಟಿ ರೂ.ಗಳನ್ನು ರಾಜದ ಎಲ್ಲಾ ಜಿಲ್ಲೆಗಳಿಗೆ ಬಿಡುಗಡೆಗೊಳಿಸಲಾಗಿದೆ ಎಂದು ವಿವರಿಸಿದರು.

ಸಿ.ಪಿ.ಯೋಗೇಶ್ವರ್ ಭಾವನ ಕೊಲೆ ಹಿಂದೆ ಇದೆಯಾ ಹಣಕಾಸು ವಿಚಾರ..?

ಇನ್ನೂ, ಬರ ಪರಿಸ್ಥಿತಿಯ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದಿಂದ ಎನ್ ಡಿಆರ್ಎಫ್ ಅನುದಾನವನ್ನು ನಿರೀಕ್ಷಿಸಿ ಮಾರ್ಗನೋಚಿಗಳ ಪ್ರಕಾರ ಬೆಳೆ ಹಾನಿ ಪರಿಹಾರದ ಮೊದಲನೆ ಕಂತಾಗಿ ಬೆಳೆ ಹಾನಿ ಪರಿಹಾರವಾಗಿ ಅರ್ಹತೆಯ ಅನುಗೋಣವಾಗಿ 2,000 ಸಾವಿರವರೆಗೆ ಅರ್ಹ ರೈತರಿಗೆ ಪಾವತಿಲು ತೀರ್ಮಾನಿಸಿದೆ ಎಂದು ಹೇಳಿದರು.

ಇದಕ್ಕೂ ಮೊದಲು ಎನ್.ರವಿಕುಮಾರ್ ಪ್ರಸ್ತಾಪಿಸಿ, ರಾಜ್ಯ ಸರ್ಕಾರದ ಕೇಂದ್ರದ ಪರಿಹಾರಕ್ಕೂ ಮೊದಲು 10 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುವ ಮೂಲಕ ರೈತರ ಹಿತ ಕಾಪಾಡಲಿ ಎಂದು ಆಗ್ರಹಿಸಿದರು.

RELATED ARTICLES

Latest News