Thursday, February 29, 2024
Homeರಾಷ್ಟ್ರೀಯರಜಪೂತ ಕರ್ಣಿ ಸೇನಾ ಅಧ್ಯಕ್ಷನ ಹತ್ಯೆ, ರಾಜಸ್ಥಾನ ಉದ್ವಿಗ್ನ

ರಜಪೂತ ಕರ್ಣಿ ಸೇನಾ ಅಧ್ಯಕ್ಷನ ಹತ್ಯೆ, ರಾಜಸ್ಥಾನ ಉದ್ವಿಗ್ನ

ಜೈಪುರ,ಡಿ.6- ಇಬ್ಬರು ದುಷ್ಕರ್ಮಿಗಳು ಮನೆಗೆ ನುಗ್ಗಿ ರಜಪೂತ ಕರ್ಣಿ ಸೇನಾ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಹತ್ಯೆ ಮಾಡಿದ್ದು,ಇದರಿಂದ ರಾಜ್ಯದ ಹಲವಡೆ ಪ್ರತಿಭಟನೆ ನಡೆಸಿ ರಾಜಸ್ಥಾನ ಬಂದ್ ಗೆ ಕರೆ ನೀಡಲಾಗಿದೆ.

ಆರೋಪಿಗಳನ್ನು ಬಂ„ಸಿ ಗಲ್ಲು ಶಿಕ್ಷೆ ವಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದು ,ಹತ್ಯೆಯ ಮಾಡಿರುವ ದೃಶ್ಯ ಸಿಸಿಟಿವಿ ಕಂಡುಬಂದಿದೆ. ಸರ್ಕಾರಿ ಬಸ್ಗಳ ಮೇಲೆ ಕಲ್ಲು ತೂರಾಟ ನಡೆದಿದೆ.ಪೊಲೀಸ್ ತಂಡ ಆರೋಪಿಗಳ ಹುಡುಕಾಟದಲ್ಲಿ ನಿರತವಾಗಿದೆ ಎಂದು ಡಿಜಿಪಿ ಉಮೇಶ್ ಮಿಶ್ರಾ ಹೇಳಿದ್ದಾರೆ.

ಸಿ.ಪಿ.ಯೋಗೇಶ್ವರ್ ಭಾವನ ಕೊಲೆ ಹಿಂದೆ ಇದೆಯಾ ಹಣಕಾಸು ವಿಚಾರ..?

ಕಳೆದ ಡಿ.3 ರಂದು ವಿಧಾನ ಸಭೆ ಚುನಾವಣೆ -ಫಲಿತಾಂಶ ಪ್ರಕಟಗೊಂಡ ನಂತರ ಕರ್ಣಿ ಸೇನೆಯನ್ನು ನಿರ್ಲಕ್ಷಿಸಿದ್ದರಿಂದ ಕಾಂಗ್ರೆಸ್ ಸೋತಿದೆ ಎಂದು ಸುಖದೇವ್ ಸಿಂಗ್ ಗೊಗಮೆಡಿ ಎಕ್ಸ್ನಲ್ಲಿ ಬರೆದಿದ್ದರು.

ಕಳೆದ ರಾತ್ರಿ ಸುಖದೇವ್ ಹತ್ಯೆಯ ನಂತರ ರಾಜಸ್ಥಾನದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ,ರಾಜ್ಸಮಂದ್ನ ಕುಂಭಲ್ಗಢದಲ್ಲಿ ಮಾರುಕಟ್ಟೆಗಳನ್ನು ಮುಚ್ಚಲಾಗಿದೆ.ಸರೋಹಿತ್ ಗೋಡಾರಾ ಗ್ಯಾಂಗ್ ಗೊಗ ಮಡಿಯನ್ನು ಹತ್ಯೆ ಮಾಡಿದ್ದು ನಾವೇ ಎಂದು ಒಪ್ಪಿಕೊಂಡಿದೆ.

RELATED ARTICLES

Latest News