ಬೆಂಗಳೂರು,ನ.8-ಸದ್ಯ ಪರಪ್ಪನ ಆಗ್ರಹಾರ ಜೈಲು ಪಾಲಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೊದಲನೇ ಆರೋಪಿ ಪವಿತ್ರಾ ಗೌಡ ಅವರು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. ಇದರಿಂದಾಗಿ ಪವಿತ್ರಗೌಡಗೆ ಪರಪ್ಪನ ಆಗ್ರಹಾರ ಜೈಲೇ ಖಾಯಂ ಅತಿಥಿ ಗೃಹವಾಗಿದೆ. ಈ ಮೊದಲು ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಇದನ್ನು ಪುನರ್ ಪರಿಶೀಲನೆ ಮಾಡುವಂತೆ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠಕ್ಕೆ ಪವಿತ್ರಾ ಮನವಿ ಮಾಡಿದ್ದರು.
ಮಗಳು ಮತ್ತು ಪೋಷಕರ ಪೋಷಣೆಗಾಗಿ ಜಾಮೀನು ಕೋರಿದ್ದ ಪವಿತ್ರಾ ಗೌಡ, ಆದೇಶದಲ್ಲಿ ಕೆಲವು ತಪ್ಪುಗಳಿವೆ, ಅದನ್ನು ಮೊತೊಮ್ಮೆ ಪರಿಶೀಲಿಸಿ, ಜಾಮೀನು ನೀಡಿ ಎಂದು ಕೋರಿದ್ದರು. ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳಾದ ಜೆಬಿ ಪರ್ದಿವಾಲ್ ಮತ್ತು ಆರ್. ಮಹಾದೇವನ್ ಅವರ ಪೀಠ ಅರ್ಜಿ ವಜಾ ಮಾಡಿದೆ. ನಾವು ತೀರ್ಪು ಮತ್ತು ದಾಖಲೆಗಳನ್ನು ಸೂಕ್ಷವಾಗಿ ಪರಿಶೀಲಿಸಿದ್ದೇವೆ.ಆ ಬಳಿಕವೇ ಆದೇಶ ನೀಡಿದ್ದೇವೆ. ಮೊತೊಮ್ಮೆ ಪರಿಶೀಲನೆ ನಡೆಸಿ ಆದೇಶ ಮಾಡುವ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಹಿಂದೆ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಆದೇಶ ಪರಿಶೀಲನೆ ಕೋರಿ ಸುಪ್ರೆಂಗೆ ಕೊಲೆ ಆರೋಪಿ ಪವಿತ್ರಾ ಗೌಡ ಅರ್ಜಿ ಸಲ್ಲಿಕೆ ಮಾಡಿದ್ದರು..
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ಅಕ್ಟೋಬರ್ 2024ರಲ್ಲಿ ದರ್ಶನ್ ಮತ್ತು ಪವಿತ್ರಾ ಸೇರಿ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿತ್ತು. ಡಿಸೆಂಬರ್‌ನಲ್ಲಿ ರೆಗ್ಯುಲರ್ ಬೇಲ್ ಸಿಕ್ಕಿತ್ತು. ಆದರೆ ಕರ್ನಾಟಕ ಸರ್ಕಾರವು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಆ. 14, 2025ರಂದು ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ ಮತ್ತೆ ಎಲ್ಲರನ್ನು ಜೈಲಿಗೆ ಹಾಕಲಾಗಿತ್ತು.
ಹತ್ಯೆ ಪ್ರಕರಣದಲ್ಲಿ ಪೊಲೀಸರು ಒಟ್ಟು 230 ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಈ ಪೈಕಿ ಸುಮಾರು 70 ಅತ್ಯಂತ ಪ್ರಮುಖವಾಗಿವೆ. ಮೂರು ಪ್ರಮುಖ ಸಾಕ್ಷ್ಯಗಳು ಸಿಸಿಟಿವಿ ದೃಶ್ಯಗಳು ಹಾಗೂ FSL ವರದಿ ಸೇರಿದಂತೆ ತಾಂತ್ರಿಕ ಸಾಕ್ಷ್ಯಗಳೂ ಸೇರಿವೆ.
