ನವದೆಹಲಿ,ಮೇ22- ಇತ್ತೀಚಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ ( ಇಡಿ ) ಎಲ್ಲಾ ಮಿತಿ ಗಳನ್ನು ದಾಟುತ್ತಿದೆ. ಇದರಿಂದಾಗಿ ಒಕ್ಕೂಟ ವ್ಯವಸ್ಥೆಯ ರಚನೆಯನ್ನು ಉಲ್ಲಂಘಿಸುತ್ತಿದೆ ಎಂದು ಸುಪ್ರೀಂಕೋರ್ಟ್ ಕಿಡಿಕಾರಿದೆ.
ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಮದ್ಯ ಸಂಸ್ಥೆ ಟಾಸ್ಯಾಕ್ (ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್) ವಿರುದ್ಧ ಜಾರಿ ನಿರ್ದೇಶನಾಲಯ ನಡೆಸುತ್ತಿದ್ದ ತನಿಖೆ ಮತ್ತು ದಾಳಿಗಳಿಗೆ ಸುಪ್ರೀಂ ಕೋರ್ಟ್ ತೀವ್ರ ಕಿಡಿಕಾರಿದ್ದು, ತಾತ್ಕಾಲಿಕ ತಡೆ ನೀಡಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಇ.ಡಿ ವರ್ತನೆಯನ್ನು ಕಟು ಶಬ್ದಗಳಲ್ಲಿ ಖಂಡನೆ ಮಾಡಿದರು.ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ವಿಷಯವಾಗಿರುವುದರಿಂದ ಇಡಿಯ ಕ್ರಮಗಳು ಅಸಾಂವಿಧಾನಿಕವಾಗಿದೆ. ಇತ್ತೀಚಿಗೆ ಇಡಿ ಎಲ್ಲಾ ಮಿತಿಗಳನ್ನು ದಾಟುತ್ತಿದೆ ಮತ್ತು ರಾಜ್ಯ ನಿಗಮವನ್ನು ಗುರಿಯಾಗಿಸಿಕೊಂಡು ಒಕ್ಕೂಟ ಫೆಡರಲ್ ರಚನೆಯನ್ನು ಉಲ್ಲಂಘಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಮದ್ರಾಸ್ ಹೈಕೋರ್ಟ್‌ನ ಆದೇಶದ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಂತರ ಈ ಆದೇಶ ಬಂದಿದೆ. ಏಪ್ರಿಲ್ 23ರಂದು ಮದ್ರಾಸ್ ಹೈಕೋರ್ಟ್ ಇ.ಡಿ ತನಿಖೆ ಮುಂದುವರಿಸಲು ಅವಕಾಶ ನೀಡಿದ ನಂತರ ಈ ಮೇಲನವಿ ಸಲ್ಲಿಸಲಾಗಿತ್ತು. ತಮಿಳುನಾಡಿನಲ್ಲಿ 1,000 ಕೋಟಿ ರೂಪಾಯಿಗಳ ಮದ್ಯ ಹಗರಣ ನಡೆದಿದೆ ಎಂದು ಇ.ಡಿ ಆರೋಪಿಸಿದೆ, ಅಲ್ಲಿ ಡಿಸ್ಟಿಲರಿಗಳು ಮದ್ಯ ಪೂರೈಕೆ ಆದೇಶಗಳನ್ನು ಪಡೆಯಲು ಲೆಕ್ಕವಿಲ್ಲದ ಹಣವನ್ನು ನೀಡಿವೆ.
ಆದಾಗ್ಯೂ, ತಮಿಳುನಾಡು ಸರ್ಕಾರವು 2014 ರಿಂದ 2021 ರವರೆಗೆ ವಿಜಿಲೆನ್‌್ಸ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ ಮೂಲಕ ವೈಯಕ್ತಿಕ ಔಟ್‌ಲೆಟ್ ನಿರ್ವಾಹಕರ ವಿರುದ್ಧ 41 ಎಫ್‌ಐಆರ್‌ಗಳನ್ನು ದಾಖಲಿಸಿದೆ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಟಾಸ್ಯಾಕ್ ಮೇಲಿನ ಇಡಿ ದಾಳಿಗಳ ಕುರಿತು ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದು, ಇದು ಕೇಂದ್ರ ಸಂಸ್ಥೆಯ ಅಧಿಕಾರವನ್ನು ಅತಿಕ್ರಮಿಸಿದೆ ಮತ್ತು ಸಂವಿಧಾನದ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ತಮಿಳುನಾಡು ಕೂಡ ಇಡಿ ರಾಜಕೀಯ ದ್ವೇಷದ ಕೃತ್ಯ ಎಂದು ಆರೋಪಿಸಿದೆ ಮತ್ತು ದಾಳಿಗಳು ಕಾನೂನುಬಾಹಿರ ಎಂದು ಪ್ರತಿಪಾದಿಸಿದೆ.
ಮಾರ್ಚ್ 14 ಮತ್ತು ಮೇ 16ರಂದು ನಡೆದ ದಾಳಿಗಳಲ್ಲಿ ಸಂಸ್ಥೆಯ ಹಲವಾರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಮುಚ್ಚಲಾಗಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದ ನಂತರ ಜಾರಿ ನಿರ್ದೇಶನಾಲಯದ (ಇಆ) ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದೆ. ರಾಜ್ಯದಲ್ಲಿ ಮದ್ಯ ವ್ಯಾಪಾರದ ಮೇಲೆ ಏಕಸ್ವಾಮ್ಯ ಹೊಂದಿರುವ ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್. 1,000 ಕೋಟಿ ರೂ. ಮೌಲ್ಯದ ಲೆಕ್ಕವಿಲ್ಲದ ನಗದು ಪತ್ತೆಯಾಗಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ಕಾರ್ಪೊರೇಟ್ ಪೋಸ್ಟಿಂಗ್‌ಗಳು, ಸಾರಿಗೆ ಮತ್ತು ಬಾರ್ ಪರವಾನಗಿ ಟೆಂಡರ್‌ಗಳಿಗೆ ಸಂಬಂಧಿಸಿದ ಆಪಾದಿತ ದತ್ತಾಂಶಗಳು ಹಾಗೂ ಕೆಲವು ಡಿಸ್ಟಿಲರಿಗಳಿಗೆ ಅನುಕೂಲಕರ ಇಂಡೆಂಟ್ ಆದೇಶಗಳು ಕಂಡುಬಂದಿವೆ. ಅಧಿಕಾರಿಗಳ ಪಾಲುದಾರಿಕೆಯೊಂದಿಗೆ ಔಟ್ ಲೆಟ್ ಮಳಿಗೆಗಳು ಮಾರಾಟ ಮಾಡುವ ಪ್ರತಿ ಬಾಟಲಿಗೆ 10ರಿಂದ 30 ರೂ.ಗಳವರೆಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗಿದ್ದ ವಂಚನೆಯ ಬೆಲೆಗಳ ಬಗ್ಗೆ ಪುರಾವೆಗಳು ಸಹ ಇದ್ದವು ಎಂದು ಇ.ಡಿ ಹೇಳಿದೆ.