Saturday, July 26, 2025
Homeರಾಜ್ಯನಟ ದರ್ಶನ್‌ ಜಾಮೀನು ಕುರಿತು ಹೈಕೋರ್ಟ್‌ಗೆ ಸುಪ್ರೀಂ ತರಾಟೆ

ನಟ ದರ್ಶನ್‌ ಜಾಮೀನು ಕುರಿತು ಹೈಕೋರ್ಟ್‌ಗೆ ಸುಪ್ರೀಂ ತರಾಟೆ

Supreme Court slams High Court over Darshan's bail

ನವದೆಹಲಿ,ಜು.24– ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಇತರ ಆರೋಪಿಗಳಿಗೆ ಜಾಮೀನು ನೀಡಿದ ರೀತಿಗೆ ಕರ್ನಾಟಕ ಹೈಕೋರ್ಟ್‌ನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್‌, ತನ್ನ ಆದೇಶವನ್ನು ಕಾಯ್ದಿರಿಸಿದೆ.ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ನೇತೃತ್ವದ ದ್ವಿಸದಸ್ಯಪೀಠವು, ಈ ಹಿಂದೆ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಕಠಿಣ ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿತು.

ನ್ಯಾಯಾಂಗ ವಿವೇಚನೆಯನ್ನು ನ್ಯಾಯಯುತವಾಗಿ ಅನ್ವಯಿಸಲಾಗಿದೆಯೇ ಎಂದು ಪ್ರಶ್ನಿಸಿದ ಪೀಠವು, ಆದೇಶದ ಬಗ್ಗೆ ನಾವು ಹೇಳಲು ವಿಷಾದಿಸುತ್ತೇವೆ. ಆದರೆ ಹೈಕೋರ್ಟ್‌ ಎಲ್ಲಾ ಜಾಮೀನು ಅರ್ಜಿಗಳಲ್ಲಿ ಒಂದೇ ರೀತಿಯ ಆದೇಶಗಳನ್ನು ನಿರ್ದೇಶಿಸುತ್ತದೆಯೇ? ಎಂದು ನ್ಯಾಯಾಲಯ ಪ್ರಶ್ನೆ ಮಾಡಿತು.

ನಮಗೆ ಸಮಸ್ಯೆಯಾಗಿರುವುದು ಹೈಕೋರ್ಟ್‌ನ ನೀಡಿರುವ ತೀರ್ಪು. ವಿಧಾನ. ಇದು ಹೈಕೋರ್ಟ್‌ ನ್ಯಾಯಾಧೀಶರ ತಿಳುವಳಿಕೆಯೇ? ಸೆಷನ್‌್ಸ ನ್ಯಾಯಾಧೀಶರಾಗಿದ್ದರೆ ನಮಗೆ ಅರ್ಥವಾಗುತ್ತಿತ್ತು. ಆದರೆ ಹೈಕೋರ್ಟ್‌ ನ್ಯಾಯಾಧೀಶರು ಅಂತಹ ತಪ್ಪು ಮಾಡುತ್ತಿದ್ದಾರೆಯೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದೆ.

ಇದನ್ನು ವಿವೇಚನೆಯ ತೀರ್ಪು ಎನ್ನಲು ನಾವ್ಯಾರು ಒಪ್ಪುತ್ತಿಲ್ಲ ಎಂದ ಸುಪ್ರೀಂಕೋರ್ಟ್‌, ಇಂತಹ ಗಂಭೀರ ಪ್ರಕರಣದಲ್ಲಿ ಜಾಮೀನು ನೀಡುವ ಮೊದಲು ಹೈಕೋರ್ಟ್‌ ತನ್ನ ಮನಸ್ಸನ್ನು ವಿವೇಚನಾಯುಕ್ತವಾಗಿ ಬಳಸಿದೆಯೇ ಎಂದು ಮರುಪ್ರಶ್ನೆ ಮಾಡಿದರು. ಹೈಕೋರ್ಟ್‌ ಮಾಡಿದ ಅದೇ ತಪ್ಪನ್ನು ನಾವು ಮಾಡುವುದಿಲ್ಲ ಎಂದ ಪೀಠ, ಇದು ಕೊಲೆ ಮತ್ತು ಪಿತೂರಿಯ ಪ್ರಕರಣವಾಗಿರುವುದರಿಂದ ನಾವು ಸ್ವಲ್ಪ ಗಂಭೀರವಾಗಿರುತ್ತೇವೆ ಎಂದು ಹೇಳಿತು.

RELATED ARTICLES

Latest News