Thursday, April 3, 2025
Homeರಾಜ್ಯಜೆಡಿಎಲ್‌ಪಿ ನಾಯಕರಾಗಿ ಸುರೇಶ್‌ಬಾಬು ನೇಮಕ

ಜೆಡಿಎಲ್‌ಪಿ ನಾಯಕರಾಗಿ ಸುರೇಶ್‌ಬಾಬು ನೇಮಕ

ಬೆಂಗಳೂರು,ಜು.15- ಜೆಡಿಎಸ್‌‍ನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸುರೇಶ್‌ಬಾಬು ಅವರನ್ನು ನೇಮಿಸಲಾಗಿದೆ. ಜೆಡಿಎಸ್‌‍ನ ರಾಜ್ಯಾಧ್ಯಕ್ಷರಾದ ಎಚ್‌.ಡಿ.ಕುಮಾರಸ್ವಾಮಿಯವರ ಶಿಫಾರಸು ಆಧರಿಸಿ ಜೆಡಿಎಸ್‌‍ ಪಕ್ಷದ ಶಾಸಕರನ್ನಾಗಿ ನೇಮಿಸಿರುವುದಾಗಿ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್‌ ಪ್ರಕಟಿಸಿದರು.

ಕುರುಬ ಸಮುದಾಯಕ್ಕೆ ಸೇರಿರುವ ಸುರೇಶ್‌ಬಾಬು ಅವರು, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ನಾಲ್ಕನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಮೊದಲು ಎಚ್‌.ಡಿ. ಕುಮಾರ ಸ್ವಾಮಿಯವರು ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕರಾಗಿ ಕೆಲಸ ಮಾಡುತ್ತಿದ್ದರು.

ಅಧಿಕೃತ ಬಿಜೆಪಿ ವಿರೋಧ ಪಕ್ಷವಾಗಿದ್ದರೂ ಕೂಡ ಜೆಡಿಎಸ್‌‍ನ ಕುಮಾರಸ್ವಾಮಿಯವರ ಚರ್ಚೆಗಳು, ಹೇಳಿಕೆಗಳು ಹೆಚ್ಚು ಮಹತ್ವ ಪಡೆದುಕೊಂಡಿದ್ದವು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ- ಜೆಡಿಎಸ್‌‍ ಮೈತ್ರಿರಾಜಕಾರಣ ನಡೆಯುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರ ದಿಂದ ಸಂಸದರಾಗಿ ಆಯ್ಕೆಯಾಗಿದ್ದು, ಕೇಂದ್ರ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅವರಿಂದ ತೆರವಾದ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸುರೇಶ್‌ ಬಾಬು ಅವರನ್ನು ನೇಮಿಸಲಾಗಿದೆ.

RELATED ARTICLES

Latest News