ಬೆಂಗಳೂರು,ಡಿ.16- ಪತ್ನಿ ಮತ್ತು ಆಕೆಯ ಕುಟುಂಬದವರ ಕಿರುಕುಳದಿಂದ ಬೇಸತ್ತು ಆತಹತ್ಯೆ ಮಾಡಿಕೊಂಡ ಅತುಲ್ ಸುಭಾಷ್ ಅವರು ಸಾಫ್ಟ್ ವೇರ್ ಎಂಜಿನಿಯರ್ ಅಲ್ಲದೇ ಅವರೊಬ್ಬ ಸಾಮಾಜಿಕ ಕಳಕಳಿಯುಳ್ಳವರಾಗಿದ್ದ ರಲ್ಲದೆ ಹಲವು ವಿದ್ಯಾರ್ಥಿಗಳಿಗೆ ಗುರುಗಳಾಗಿದ್ದರು.ಅತುಲ್ ಸುಭಾಷ್ ಅವರ ಆತಹತ್ಯೆಗೆ ರಾಷ್ಟ್ರ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಅವರ ಸಾವಿಗೆ ನ್ಯಾಯಕೊಡಿಸಲು ಹೋರಾಟಗಳು ನಡೆಯುತ್ತಿರುವುದನ್ನು ಗಮನಿಸಿದರೆ, ಅವರೊಬ್ಬ ಎಂಜಿನಿಯರ್ ಅಷ್ಟೇ ಅಲ್ಲದೆ, ಸಮಾಜಮುಖಿ ವ್ಯಕ್ತಿತ್ವ ಹೊಂದಿದ್ದರಲ್ಲದೆ, ಅನಾಥರು, ಬಡವರಿಗೆ ಸಹಾಯ ಮಾಡುವ ಹಂಬಲ ಹೊಂದಿದ್ದರು.
ಸಮಾಜಕ್ಕೆ ಏನಾದರೂ ಮಾಡಬೇಕೆಂಬ ತುಡಿತದಿಂದಾಗಿ ಸೇವ್ ಇಂಡಿಯನ್ ಫ್ಯಾಮಿಲಿ ಫೌಂಡೇಶನ್, ಎನ್ಜಿಒ ಸದಸ್ಯರಾಗಿ, ಆ ಮೂಲಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ, ಅನಾಥಾಶ್ರಮಗಳಿಗೆ ಸಹಾಯಹಸ್ತ ಚಾಚಿದ್ದರು ಎಂದು ಅತುಲ್ ಸ್ನೇಹಿತರು ನೆನೆದು ಅವರ ಸಮಾಜಮುಖಿ ಚಿಂತನೆಗಳನ್ನು ಸರಿಸಿದ್ದಾರೆ.
ತಮ ಜೀವನದಲ್ಲಿ ಅದೆಷ್ಟೋ ನೋವುಗಳಿದ್ದರೂ ಸಹ ಅದ್ಯಾವುದನ್ನು ಸ್ನೇಹಿತರೊಂದಿಗೆ ತೋರ್ಪಡಿಸಿಕೊಳ್ಳುತ್ತಿರಲಿಲ್ಲ, ಎಲ್ಲರೊಂದಿಗೂ ಸಹ ಸೌಮ್ಯವಾಗಿಯೇ ವರ್ತಿಸುತ್ತಿದ್ದ ಸೌಮ್ಯ ಸ್ವಾಭಾವದ ವ್ಯಕ್ತಿತ್ವ ಅತುಲ್ ಸುಭಾಷ್ ಅವರದ್ದು.
ಅತುಲ್ ಅವರು ತಮ ಮಗನನ್ನು ನೋಡಲು, ಮಾತನಾಡಿಸಲು ಹಂಬಲಿಸುತ್ತಿದ್ದರೂ ಸಹ ಅವರ ಪತ್ನಿ ಅದಕ್ಕೆ ಅವಕಾಶ ಕಲ್ಪಿಸದ ಕಾರಣ ಘಾಸಿಗೊಂಡಿದ್ದ ಅವರು ಅನಾಥಾಶ್ರಮಗಳಲ್ಲಿರುವ ಮಕ್ಕಳಿಗೆ ನೆರವಾಗಿ ಆ ನೋವನ್ನು ಮರೆಯುತ್ತಿದ್ದರು ಎಂದು ಸ್ನೇಹಿತರು ಅತುಲ್ ಅವರ ಗುಣಗಾನ ಮಾಡಿದ್ದಾರೆ.
ಉಚಿತವಾಗಿ ಬೋಧನೆ:
ಈಗಿನ ಕಾಲಮಾನದಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮನೆ ಪಾಠಮಾಡುವವರು ಸಾವಿರಾರು ರೂ.ಹಣ ಪಡೆಯುತ್ತಾರೆ. ಅಂತಹುದರಲ್ಲಿ ಆರ್ಟಿಫಿಶಿಯಲ್ ಇಂಟಲಿಜಿಯನ್ಸ್ (ಎಐ) ವಿದ್ಯಾರ್ಥಿಗಳಿಗೆ ಉಚಿತವಾಗಿ ಬೋಧನೆ ಮಾಡುತ್ತಿದ್ದರೆಂದು ಸ್ನೇಹಿತರು ಭಾವುಕರಾದರು.
ಪ್ರತಿಭಾನ್ವಿತ ವ್ಯಕ್ತಿ: ಅತುಲ್ ಸುಭಾಷ್ ಅವರು ಪ್ರತಿಭಾನ್ವಿತರು. ಆರ್ಟಿಫಿಶಿಯಲ್ ಇಂಟಲಿಜೆನ್‌್ಸ ನಲ್ಲಿ (ಎಐ) ಎಕ್ಸ್ ಪರ್ಟ್ ಆಗಿದ್ದ ಅವರು ತಮ ಬುದ್ಧಿವಂತಿಕೆಯಿಂದಲೇ ತಾವು ಉದ್ಯೋಗ ಮಾಡುತ್ತಿದ್ದ ಕಂಪನಿಯಲ್ಲಿ ಒಳ್ಳೆಯ ಹೆಸರುಗಳಿಸಿದ್ದರು. ಅಲ್ಲದೇ, ಸಹೋದ್ಯೋಗಿಗಳಿಗೂ ಅಚ್ಚು ಮೆಚ್ಚಿನ ಸ್ನೇಹಿತರಾಗಿದ್ದರು.ಇಂತಹ ಪ್ರತಿಭಾನ್ವಿತ ಇಂಜಿನಿಯರ್ನನ್ನು ಕಳೆದುಕೊಂಡಿ ರುವುದು ದೇಶಕ್ಕೆ ನಷ್ಟ ಎಂದು ಹೇಳಿದರೆ ತಪ್ಪಾಗಲಾರದು.
ಆರೋಪಿಗಳು ಸಿಕ್ಕಿದ್ದೇ ರೋಚಕ:
ನಗರದ ಮುನ್ನೇಕೊಳಲಿನ ಮಂಜುನಾಥ್ ಲೇಔಟ್ ಡೆಲ್ಫೀನಿಯಂ ರೆಸಿಡೆನ್ಸಿಯಲ್ಲಿ ಟೆಕ್ಕಿ ಅತುಲ್ ಸುಭಾಷ್ (34) ಆತಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಆರೋಪಿಗಳಾದ ಪತ್ನಿ, ಆಕೆಯ ತಾಯಿ, ಸಹೋದರ, ನ್ಯಾಯಾಲಯಕ್ಕೆ ಜಾಮೀನಿಗೆ ಅರ್ಜಿಸಲ್ಲಿಸಿ ತಲೆಮರೆಸಿಕೊಂಡಿದ್ದರಾದರೂ ಮಾರತ್ತಹಳ್ಳಿ ಠಾಣೆ ಪೊಲೀಸರು ಸತತ ಕಾರ್ಯಾಚರಣೆಯಿಂದಾಗಿ ಮೂವರು ಸಿಕ್ಕಿಬಿದ್ದಿರುವುದೇ ರೋಚಕ.
ಆರೋಪಿಗಳ ಬಂಧನಕ್ಕಾಗಿ ವೈಟ್ಪೀಲ್ಡ್ ವಿಭಾಗದ ನಾಲ್ಕು ತಂಡಗಳು ಉತ್ತರ ಭಾರತದಲ್ಲಿ ಶೋಧ ನಡೆಸುತ್ತಿದ್ದವು, ಒಂದು ತಂಡ ಉತ್ತರ ಪ್ರದೇಶಕ್ಕೆ ಹೋಗಿ ಟೆಕ್ಕಿ ಅತುಲ್ ಅವರ ಪತ್ನಿ ಮನೆ ಬಳಿ ಹೋದಾಗ ಬೀಗ ಹಾಕಿರುವುದು ಗಮನಿಸಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಅಂಟಿಸಿ ಹುಡುಕಾಟದಲ್ಲಿ ತೊಡಗಿದ್ದರು.
ಆರೋಪಿಗಳು ಮೊಬೈಲ್ ಸ್ವಿಚ್ ಆಫ್ಮಾಡಿಕೊಂಡು ಉತ್ತರ ಪ್ರದೇಶ ತೊರೆದು ಬೇರೆಡೆಗೆ ಪರಾರಿಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿ ಒಂದು ತಂಡ ಹಲವು ಕಡೆ ಹುಡುಕಾಟ ನಡೆಸುತ್ತಿದ್ದರಾದರೂ, ಆರೋಪಿಗಳು ವಾಸಸ್ಥಳ ಬದಲಿಸುತ್ತಿದ್ದರಿಂದ ಅವರ ಪತ್ತೆ, ಬಂಧನ ಕಾರ್ಯ ತಡವಾಗಿತ್ತು.
ಆದರೂ ಪೊಲೀಸರು ಸವಾಲೆಂಬಂತೆ ತಮ ಚಲಬಿಡದೆ ಆರೋಪಿಗಳ ಹುಡುಕಾಟ ನಡೆಸುತ್ತಿದ್ದರು, ಸ್ನೇಹಿತರ ನೆರವು ಪಡೆಯಲು ಕರೆಮಾಡಿರುವ ಲೊಕೇಶನ್ ಆಧರಿಸಿ ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದರು, ಪಿಜಿಯೊಂದರಲ್ಲಿ ಟೆಕ್ಕಿ ಪತ್ನಿ ನಿಖಿತಾ ತಂಗಿರುವುದು ತಿಳಿದು ತಕ್ಷಣ ಆ ಪಿಜಿಗೆ ಹೋಗಿ ಆಕೆಯನ್ನು ಖೆಡ್ಡಾಗೆ ಬಿಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ನಂತರ ನಿಖಿತಾಳನ್ನು ವಿಚಾರಣೆಗೆ ಒಳಪಡಿಸಿ ಉಳಿದವರ ಬಗ್ಗೆ ವಿಚಾರಿಸಿದಾಗ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ ಸಿಂಘಾನಿಯಾ ಉತ್ತರಪ್ರದೇಶದ ಅಲಹಬಾದನಲ್ಲಿರುವ ಬಗ್ಗೆ ಬಾಯಿಬಿಟ್ಟಿದ್ದಳು.
ಈಕೆಯ ಮಾಹಿತಿ ಮೇರೆಗೆ ಪ್ರಯಾಗ್ ರಾಜ್ನ ಹೋಟೆಲ್ ಬಳಿ ಅವರಿಬ್ಬರನ್ನು ಬಂಧಿಸಿ ನಗರಕ್ಕೆ ಕರೆತರುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ. ನಿಖಿತಾ, ನಿಶಾ, ಅನುರಾಗ್ ಅವರನ್ನು ವಿಚಾರಣೆಗೆ ಒಳಪಡಿಸಿರುವ ಮಾರತ್ತಹಳ್ಳಿ ಠಾಣೆ ಪೊಲೀಸರು ಈ ಪ್ರಕರಣ ಸಂಬಂಧ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಒಟ್ಟಾರೆ ಸಾಫ್ಟ್ ವೇರ್ ಎಂಜಿನಿಯರ್ ಅತುಲ್ ಸುಭಾಷ್ ಅವರ ಆತಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲಿಸರು ತನಿಖೆ ಚುರುಕುಗೊಳಿಸಿದ್ದು, ಅತುಲ್ ಅವರ ಲ್ಯಾಪ್ಟಾಪ್ ಹಾಗೂ ಮೊಬೈಲ್ನ್ನು ವಶಕ್ಕೆ ಪಡೆದು ಅದರಲ್ಲಿ ಇರುವ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದಾರೆ.