ಸೇಂಟ್ಜಾರ್ಜ್ಪಾರ್ಕ್, ನ.11- ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಎರಡನೇ ಪಂದ್ಯದ ಸೋಲಿಗೆ ಸೂರ್ಯಕುಮಾರ್ ಯಾದವ್ ಅವರ ಕಳಪೆ ನಾಯಕತ್ವವೇ ಕಾರಣ ಎಂದು ಮಾಜಿ ಕ್ರಿಕೆಟಿಗರಾದ ಆಕಾಶ್ಚೋಪ್ರಾ ಹಾಗೂ ಪಾರ್ಥೀವ್ ಪಟೇಲ್ ಅವರು ಕಟುವಾಗಿ ಟೀಕಿಸಿದ್ದಾರೆ.
ಸೇಂಟ್ಜಾರ್ಜ್ ಪಾರ್ಕ್ನಲ್ಲಿ ನಡೆದಿದ್ದ ಪಂದ್ಯದಲ್ಲಿ 125 ರನ್ಗಳ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ 7 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿ ಸೋಲಿನ ಅಂಚಿಗೆ ತಲುಪಿತ್ತು. ಆದರೆ ಟ್ರಿಸ್ಟನ್ ಸ್ಟಬ್ಸ್ (47* ರನ್) ಹಾಗೂ ಗೆರಾಲ್ಡ್ ಕೋಟ್ಜೆ (19* ರನ್) ಅವರ ನೆರವಿನಿಂದ 3 ವಿಕೆಟ್ ಗೆಲುವು ಸಾಧಿಸಿ 4 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.
ಪಂದ್ಯದಲ್ಲಿ ವರುಣ್ಚಕ್ರವರ್ತಿ ತಮ ಸ್ಪಿನ್ ಮೋಡಿಯಿಂದ ಎನ್ರಿಚ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಸೇರಿದಂತೆ 5 ವಿಕೆಟ್ ಕಬಳಿಸಿದರೆ, ರವಿಬಿಸ್ನೋಯ್ ಒಂದು ವಿಕೆಟ್ ಪಡೆದಿದ್ದರೂ ಸ್ಪಿನ್ ಸ್ನೇಹಿ ಪಿಚ್ನಲ್ಲಿ ಸ್ಪಿನ್ ಅಲ್ರೌಂಡರ್ ಅಕ್ಷರ್ಪಟೇಲ್ ಗೆ ಕೇವಲ 1 ಓವರ್ ನೀಡಿದ್ದು ಸೂರ್ಯಕುಮಾರ್ಯಾದವ್ ನಾಯಕತ್ವದ ವೈಫಲ್ಯ ತೋರಿಸುವಂತಿತ್ತು ಎಂದು ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದಾರೆ.
ಅಕ್ಷರ್ಗೆ ಹೆಚ್ಚು ಓವರ್ ನೀಡಬೇಕಿತ್ತು:ಆಕಾಶ್ಚೋಪ್ರಾ
`ಅಕ್ಷರ್ಪಟೇಲ್ಗೆ ಹೆಚ್ಚು ಓವರ್ ನೀಡದಿರುವುದಕ್ಕೆ ಕಾರಣವೇನು ಎಂಬುದು ನನಗೆ ಅರ್ಥವಾಗಲಿಲ್ಲ. ಅದರಲ್ಲೂ ಪಂದ್ಯದಲ್ಲಿ ಸ್ಪಿನ್ನರ್ಗಳಾದ ವರುಣ್ಚಕ್ರವರ್ತಿ ಹಾಗೂ ರವಿಬಿಸ್ನೋಯ್ ಅವರು ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡಿದ ನಡುವೆಯೂ ಹೆಚ್ಚುವರಿ ಸ್ಪಿನ್ನರ್ ರೂಪದಲ್ಲಿ ತಂಡದಲ್ಲಿದ್ದ ಅಕ್ಷರ್ಪಟೇಲ್ಗೆ ಹೆಚ್ಚು ಓವರ್ ನೀಡಬೇಕಿತ್ತು. ಅಲ್ಲದೆ ಆತ ಉತ್ತಮ ಬೌಲರ್ ಆಗಿದ್ದಾನೆ’ ಎಂದು ಚೋಪ್ರಾ ಹೇಳಿದ್ದಾರೆ.
ಹೆಚ್ಚುವರಿ ಬ್ಯಾಟರ್ ಆಡಿಸಿ:
`ಅಕ್ಷರ್ಪಟೇಲ್ ಅವರು ಒಳ್ಳೆ ವಿಕೆಟ್ ಟೇಕರ್ ಬೌಲರ್ ಆಗಿದ್ದಾರೆ. ನೀವು ಆತನಿಗೆ ಪ್ಲೇಯಿಂಗ್ ಇಲೆವೆನ್ ಸ್ಥಾನ ನೀಡಿದರೆ ಆತನನ್ನು ಸಮರ್ಥವಾಗಿ ಬಳಸಿಕೊಳ್ಳಿ. ನೀವು ಆತನಿಗೆ ಪಂದ್ಯದಲ್ಲಿ ಕೇವಲ ಒಂದು ಓವರ್ ಮಾತ್ರ ನೀಡುವುದಾದರೆ ಅದರ ಬದಲಿಗೆ ಒಬ್ಬ ಬ್ಯಾಟರ್ಗೆ ತಂಡದಲ್ಲಿ ಸ್ಥಾನ ಕಲ್ಪಿಸಿ’ ಎಂದು ಪಾರ್ಥೀವ್ ಪಟೇಲ್ ಹೇಳಿದ್ದಾರೆ.
`ದಕ್ಷಿಣ ಆಫ್ರಿಕಾ ಬ್ಯಾಟರ್ಗಳು ಸ್ಪಿನ್ನರ್ಗಳ ಎದುರು ಒತ್ತಡಕ್ಕೆ ಸಿಲುಕಿದ್ದರು. ಯಾವಾಗ ನಾಯಕ ಸೂರ್ಯಕುಮಾರ್ ಯಾದವ್ ವೇಗದ ಬೌಲರ್ಗಳನ್ನು ಕರೆತಂದರೋ ಆಗ ಸ್ಟಬ್‌್ಸ ಹಾಗೂ ಕಾಟ್ಜೆ ನಿರ್ಭೀತಿಯಿಂದ ಬ್ಯಾಟ್ ಬೀಸಿದ್ದರು. ಒಂದು ವೇಳೆ ಅಕ್ಷರ್ಗೆ ಚೆಂಡು ನೀಡಿದ್ದರೆ ಭಾರತ ಗೆಲ್ಲಬಹುದಿತ್ತು’ ಎಂದರು.