ಮುಂಬೈ, ಏ.9– ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಮುಕ್ತಾಯ ವರದಿಯ ವಿಚಾರಣೆಯನ್ನು ನಿಯೋಜಿತ ನ್ಯಾಯಾಲಯಕ್ಕೆ ವರ್ಗಾಯಿಸಲು ಸಿಬಿಐಗೆ ಇಲ್ಲಿನ ನ್ಯಾಯಾಲಯ ಅನುಮತಿ ನೀಡಿದೆ.
ಕೇಂದ್ರ ತನಿಖಾ ಸಂಸ್ಥೆ ಕಳೆದ ತಿಂಗಳು ಬಾಂದ್ರಾ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಾವಿನ ಪ್ರಕರಣದ ಮುಕ್ತಾಯ ವರದಿಯನ್ನು ಸಲ್ಲಿಸಿತ್ತು.ಜೂನ್ 14, 2020 ರಂದು ತಮ್ಮ 34 ನೇ ವಯಸ್ಸಿನಲ್ಲಿ ಮುಂಬೈನ ಬಾಂದ್ರಾ ಪ್ರದೇಶದ ತಮ್ಮ ಅಪಾರ್ಟ್ ಮೆಂಟ್‌ನ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟ ಪತ್ತೆಯಾಗಿದ್ದರು.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸೌ ) ನ ವಿಧಿವಿಜ್ಞಾನ ತಜ್ಞರು ಸಿಬಿಐಗೆ ನೀಡಿದ ನಿರ್ಣಾಯಕ ವೈದ್ಯಕೀಯ-ಕಾನೂನು ಅಭಿಪ್ರಾಯದಲ್ಲಿ, ಈ ಪ್ರಕರಣದಲ್ಲಿ ವಿಷ ಮತ್ತು ಕತ್ತು ಹಿಸುಕಲಾಗಿದೆ ಎಂಬ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ ಎಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿದೆ.
ಪ್ರಕರಣದ ವಿಚಾರಣೆಯನ್ನು ಸಿಬಿಐ ಪ್ರಕರಣಗಳ ವಿಚಾರಣೆಗಾಗಿ ನಿಯೋಜಿಸಲಾದ ಎಸ್ಪನೇಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಲು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸುವುದಾಗಿ ಏಜೆನ್ಸಿ ಮಂಗಳವಾರ ಮ್ಯಾಜಿಸ್ಟ್ರೇಟ್ ಕೆ ಸಿ ರಜಪೂತ್ ಅವರಿಗೆ ತಿಳಿಸಿದೆ. ಮ್ಯಾಜಿಸ್ಟ್ರೇಟ್ ರಜಪೂತ್ ಇದಕ್ಕೆ ಅನುಮತಿ ನೀಡಿದ್ದಾರೆ.