ಲಕ್ನೋ,ಸೆ 24-ಕಳೆದ ತಿಂಗಳು ಇಬ್ಬರು ಆರ್‌ಪಿಎಫ್ ಸಿಬ್ಬಂದಿಯ ಹತ್ಯೆಯಲ್ಲಿ ಭಾಗಿಯಾಗಿದ್ದ ಶಂಕಿತ ಮದ್ಯಕಳ್ಳಸಾಗಣೆದಾರನೊಬ್ಬ ಘಾಜಿಪುರ ಜಿಲ್ಲೆಯಲ್ಲಿ ಪೊಲೀಸ್ ಪಡೆಯೊಂದಿಗೆ ನಡೆದಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆ.
ತಡರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಶಂಕಿತ ಮೊಹಮದ್ ಜಾಹಿದ್ ಅಲಿಯಾಸ್ ಸೋನು ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದು, ಇಂದು ಮುಂಜಾನೆ ಗಾಜಿಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯುಪಿ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ನೋಯ್ಡಾ ಘಟಕ ಮತ್ತು ಸ್ಥಳೀಯ ಗಾಜಿಪುರ ಪೊಲೀಸ್ ತಂಡವು ಕಾರ್ಯಾಚರಣೆಯ ಭಾಗವಾಗಿತ್ತು ಎಂದು ಹೆಚ್ಚುವರಿ ಮಹಾನಿರ್ದೇಶಕ ಅಮಿತಾಬ್ ಯಶ್ ತಿಳಿಸಿದ್ದಾರೆ.
ಕಳೆದ ಆ.19ರ ಮಧ್ಯರಾತ್ರಿ ಬಾರ್ಮರ್ ಗುವಾಹಟಿ ಎಕ್‌್ಸಪ್ರೆಸ್‌ನಲ್ಲಿ ಅಕ್ರಮ ಮದ್ಯ ಸಾಗಾಟವನ್ನು ತಡೆಯಲು ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಕಾನ್‌ಸ್ಟೆಬಲ್‌ಗಳಾದ ಜಾವೇದ್ ಖಾನ್ ಮತ್ತು ಪ್ರಮೋದ್ ಕುಮಾರ್ ಪ್ರಯತ್ನಿಸಿದಾಗ ಹತ್ಯೆಯಾಗಿದ್ದರು ಎಂದು ಯಶ್ ಹೇಳಿದ್ದಾರೆ.
ಮದ್ಯ ಕಳ್ಳಸಾಗಣೆದಾರರು ಇಬ್ಬರೂ ಕಾನ್ಸ್ ಟೇಬಲ್‌ಗಳನ್ನು ಅಮಾನುಷವಾಗಿ ಥಳಿಸಿ ಚಲಿಸುವ ರೈಲಿನಿಂದ ಎಸೆದರು,ಇದನ್ನು ಗಂಬೀರವಾಗಿ ಪರಿಗಣಿಸಿ ವಿಶೇಷ ತಂಡ ಆರೋಪಿಗಳಿಗಾಗಿ ಶೋಧ ನಡೆಸುತ್ತಿತ್ತು.
ಈ ಎನ್‌ಕೌಂಟರ್‌ನಲ್ಲಿ ಪಾಟ್ನಾ ಮೂಲದ ಜಾಹಿದ್ ಅಲಿಯಾಸ್ ಸೋನು ಮೃತಪಟ್ಟಿದ್ದು,ಘಟನೆಯಲ್ಲಿ ಇದರಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಎಂದು ಗಾಜಿಪುರ ಪೊಲೀಸ್ ವರಿಷ್ಠಾಧಿಕಾರಿ ಇರಾಜ್ ರಾಜಾ ಹೇಳಿದ್ದಾರೆ.
ಹತ್ಯೆಘಟನೆಯ ಪ್ರಮುಖ ಸಂಚುಕೋರ ಜಾಹಿದ್, ದಿಲ್ದಾರ್‌ನಗರದ ಬಳಿ ಅದೇ ಮಾರ್ಗದಲ್ಲಿ ಮತ್ತೊಮೆ ಮದ್ಯವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ಬಗ್ಗೆ ನಮಗೆ ಖಚಿತ ಮಾಹಿತಿ ಸಿಕ್ಕಿತ್ತು. ಗಾಜಿಪುರ ಪೊಲೀಸ್ ಮತ್ತು ಎಸ್‌ಟಿಎಫ್‌ನ ನೋಯ್ಡಾ ಘಟಕದ ತಂಡವು ಜಾಹಿದ್‌ನನ್ನು ಪತ್ತೆ ಹಚ್ಚಿ ಬಂಧಿಸಲು ಹೋದಾಗ ಗುಂಡಿನ ಚಕಮಕಿಯಲ್ಲಿ ನಡೆದಿದೆ . ಹೆಚ್ಚಿನ ಕಾನೂನು ಪ್ರಕ್ರಿಯೆ ನಡೆಸಲಾಗುತ್ತಿದೆ. ಜಾಹಿದ್ ಅಲಿಯಾಸ್ ಸೋನು ಪತ್ತೆಗೆ 1 ಲಕ್ಷ ರೂಪಾಯಿ ನಗದು ಬಹುಮಾನವನ್ನುಘೋಷಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.