ಜಲಂಧರ್ : ಮೋದಿ ಭಾಷಣದ ಬೆನ್ನಲ್ಲೇ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ಜಮ್ಮು ಹಾಗೂ ಪಂಜಾಬ್‌ನಲ್ಲಿ ಪಾಕ್ ಡ್ರೋನ್ ದಾಳಿ ನಡೆಸಿದೆ. ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ ಬೆನ್ನಲ್ಲೇ ಪಾಕ್ ನಿಂದ ಜಮ್ಮು ಗಡಿಯಲ್ಲಿ ಮತ್ತೆ ಡೋನ್ ಗಳ ದಾಳಿ ನಡೆದಿರುವ ಬಗ್ಗೆ ವರದಿಗಳಾಗುತ್ತಿವೆ. ಪಂಜಾಬ್‌ನ ಜಲಂಧರ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಸಾಂಬ ಪ್ರದೇಶಗಳಲ್ಲಿ ಮತ್ತೆ ಡೋನ್‌ಗಳು ಪತ್ತೆಯಾಗಿವೆ.
ಜಮ್ಮು, ಸಾಂಬಾ ಸೇರಿದಂತೆ ಹಲವೆಡೆ ಡ್ರೋನ್‌ಗಳು ಹಾರಾಟ ನಡೆಸಿವೆ. ಅಲ್ಲದೇ ಪಂಜಾಬ್‌ನ ಅಮೃತಸರದಲ್ಲೂ ಡ್ರೋನ್‌ಗಳ ಹಾರಾಟ ಕಂಡುಬಂದಿದೆ. ಡ್ರೋನ್ ಹಾರಾಟ ಹಿನ್ನೆಲೆ ಅಮೃತಸರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಮಾತ್ರವಲ್ಲದೇ ಮನೆಯಿಂದ ನಾಗರಿಕರು ಹೊರಬಾರದಂತೆ ಸೂಚನೆ ನೀಡಲಾಗಿದೆ. ಸಾಂಬಾ ಪ್ರದೇಶದಲ್ಲಿ ಬ್ಲಾಕ್‌ಔಟ್ ಘೋಷಿಸಲಾಗಿದೆ.
ಜಲಂಧರ್‌ನ ಸುರನುಸ್ಸಿ ಪ್ರದೇಶದಲ್ಲಿ ಸೋಮವಾರ ರಾತ್ರಿ 9.30 ರ ಸುಮಾರಿಗೆ ಮತ್ತೆ ಡೋನ್‌ಗಳು ಕಾಣಿಸಿಕೊಂಡಿದ್ದು, ನಂತರ ಆ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಅಧಿಕಾರಿ ಹಿಮಾಂಶು ಅಗರ್ವಾಲ್ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಸಾಂಬಾ ಪ್ರದೇಶದಲ್ಲಿ ಪಾಕಿಸ್ತಾನದಿಂದ ಮತ್ತೆ ಭಾರೀ ಗುಂಡಿನ ದಾಳಿ ನಡೆದಿರುವ ಸುದ್ದಿಯಿದ್ದು, ಭಾರತೀಯ ಸೇನೆಯು ಸೂಕ್ತ ಪ್ರತ್ಯುತ್ತರ ನೀಡುತ್ತಿದೆ.
ಅಮೃತಸರಕ್ಕೆ ಹೊರಟಿದ್ದ ಇಂಡಿಗೋ ವಿಮಾನ ದಿಲ್ಲಿಗೆ ವಾಪಸ್
ಅಮೃತಸರದಲ್ಲಿ ಬ್ಲಾಕ್‌ಔಟ್ ಮಾಡಿರುವ ಕಾರಣ ದಿಲ್ಲಿಯಿಂದ ಹೊರಟಿದ್ದ ಇಂಡಿಗೋ ವಿಮಾನವನ್ನು ಅರ್ಧದಲ್ಲೇ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಇಲ್ಲಿ ಏಕಾಏಕಿ ಬ್ಲಾಕ್‌ಔಟ್ ಮಾಡಿದ್ದರಿಂದ ವಿಮಾನ ಲ್ಯಾಂಡ್ ಆಗದೇ ವಾಪಸ್ ಬಂದಿದೆ.ಅಮೃತಸರದಲ್ಲಿ ವಿದ್ಯುತ್ ಸಂಚಾರ ಸ್ಥಗಿತಗೊಂಡ ಕಾರಣ ರಾತ್ರಿ 8.26ಕ್ಕೆ ದಿಲ್ಲಿಯಿಂದ ಹೊರಟಿದ್ದ ಇಂಡಿಗೋ 6ಇ, ರಾತ್ರಿ 9.15 ರ ಸುಮಾರಿಗೆ ರಾಷ್ಟ್ರ ರಾಜಧಾನಿಗೆ ಎನ್ನಲಾಗಿದೆ.