ಕರ್ತವ್ಯದ ವೇಳೆ ದುರ್ನಡತೆ : ಎಎಸ್‍ಐ ಸೇರಿ ನಾಲ್ವರು ಪೊಲೀಸರ ಅಮಾನತು

ತುಮಕೂರು, ಜೂ.12- ಹೆಬ್ಬೂರು ಪೋಲಿಸ್ ಠಾಣೆಯಲ್ಲಿ ದುರ್ನಡತೆಯಿಂದ ನಡೆದುಕೊಂಡು ಇಲಾಖೆಗೆ ಕಳಂಕ ತಂದ ಹಿನ್ನೆಲೆಯಲ್ಲಿ ಎಎಸ್‍ಐ ಸೇರಿದಂತೆ ನಾಲ್ಕು ಜನ ಪೋಲಿಸ್ ರನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೋನಾ ವಂಶಿಕೃಷ್ಣ ಅವರು ಅಮಾನತು ಮಾಡಿ ಮಾಡಿ ಆದೇಶ ಹೊರಡಿಸಿದ್ದಾರೆ. ಎಎಸ್‍ಐ ರಾಮಚಂದ್ರಪ್ಪ.ಎಂ.ಸಿ., ಮಹೇಶ್,ಚಲುವರಾಜು , ಸಂತೋಷ್ ಇವರನ್ನು ಅಮಾನತು ಮಾಡಲಾಗಿದೆ.

ಘಟನೆಯ ಸಂಬಂಧ ಇಲ್ಲಿನ ಸಬ್ ಇನ್‍ಸ್ಪೆಕ್ಟರ್ ರಾಮಕೃಷ್ಣ ಅವರು ಎಸ್ಪಿಯವರ ಗಮನಕ್ಕೆ ತಂದಿದ್ದಾರೆ ಅಗ ರಾಮಕೃಷ್ಣ ಅವರ ವಿರುದ್ಧ ಕೆಂಡಾಮಂಡಲರಾದ ಎಸ್ಪಿಯವರು ಲಿಖಿತವಾಗಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ವರದಿ ನೀಡಿದ್ದಾರೆ.

ಠಾಣೆಯಲ್ಲಿ ಗಲಾಟೆ ಆಗಿರುವ ವಿಷಯವನ್ನು ತಿಳಿದ ಎಸ್ಪಿಯವರು ಹಗಲು ಇರುಳು ಪೋಲಿಸ್ ಇಲಾಖೆಯನ್ನು ಜನ ಸ್ನೇಹಿ ಇಲಾಖೆಯನ್ನಾಗಿ ಮಾಡಲು ಶ್ರಮಿಸುತ್ತಿರುವ ಇಂತಹ ಸಂದರ್ಭದಲ್ಲಿ ಜನರಿಗೆ ಏನು ಹೇಳುತ್ತೀರಾ ಎಂದು ಸಬ್ ಇನ್‍ಸ್ಪೆಕ್ಟರ್ ರಾಮಕೃಷ್ಣ ವಿರುದ್ಧ ಕೆಂಡಾಮಂಡಲರಾದರು.

ನಂತರ ಘಟನೆಯ ಬಗ್ಗೆ ಲಿಖಿತವಾಗಿ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದರು. ಹೆಬ್ಬೂರು ಪೋಲಿಸ್ ಠಾಣೆಯಲ್ಲಿ ಕರ್ತವ್ಯದ ವೇಳೆ ಜೂಜಾಟ ಆಡುವಾಗ ಕ್ಷುಲ್ಲಕ ವಿಷಯಕ್ಕೆ ಸಂಬಂಧಪಟ್ಟಂತೆ ಗಲಾಟೆ ನಡೆದಿರುವ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ಎಸ್ಪಿ ಅವರು ಎ ಎಸ್ಪಿ ಗೆ ನೀಡಿದ ಆದೇಶದ ಹಿನ್ನೆಲೆಯಲ್ಲಿ ಸಂಜೆ ವರದಿ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಎ ಎಸ್ ಐ ಸೇರಿದಂತೆ ನಾಲ್ಕು ಜನ ಪೋಲಿಸ್ ರನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾದ ಕೋನಾ ವಂಶಿ ಕೃಷ್ಣ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಎಚ್ಚರಿಕೆಯ ಗಂಟೆ: ಜಿಲ್ಲಾಯಲ್ಲಿ ಕೆಲವರು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಮದ್ಯಪಾನ ಮಾಡುವುದು, ಇಸ್ಪೀಟ್ ಆಡುವುದು ಸಾರ್ವಜನಿಕವಾಗಿ ದೂರುಗಳು ಬರುತ್ತಿವೆ ಇಂತಹ ಸಿಬ್ಬಂದಿಗಳಿಗೆ ಈ ಆದೇಶ ಎಚ್ಚರಿಕೆಯ ಗಂಟೆಯಾಗಿದೆ.