Friday, November 22, 2024
Homeಕ್ರೀಡಾ ಸುದ್ದಿ | Sportsಭಾರತಕ್ಕೆ ಮತ್ತೊಂದು ಪದಕ : 50 ಮೀಟರ್‌ ರೈಫಲ್‌ನಲ್ಲಿ ಕಂಚು

ಭಾರತಕ್ಕೆ ಮತ್ತೊಂದು ಪದಕ : 50 ಮೀಟರ್‌ ರೈಫಲ್‌ನಲ್ಲಿ ಕಂಚು

ಫ್ರಾನ್ಸ್ , ಆ.1- ಪ್ಯಾರಿಸ್‌‍ ಒಲಿಂಪಿಕ್ಸ್ ನ ಐದನೆ ದಿನವಾದ ಇಂದು ಭಾರತ ಶೂಟಿಂಗ್‌ ವಿಭಾಗದಲ್ಲಿ ಮತ್ತೊಂದು ಕಂಚಿನ ಪದಕ ಗೆದ್ದಿದೆ.
ಇಂದು ನಡೆದ ಪುರುಷರ ವಿಭಾಗದ 50 ಮೀಟರ್‌ ರೈಫಲ್‌ ಶೂಟಿಂಗ್‌ನಲ್ಲಿ ಭಾರತದ ಸ್ವಪ್ನಿಲ್‌ ಕೌಸ್ಲೆ ಅವರು ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೂರನೆ ಪದಕವನ್ನು ತಂದುಕೊಟ್ಟಿದ್ದಾರೆ.

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಸ್ಪರ್ಧೆಯಲ್ಲಿ ಕೆಲವೇ ಅಂಕಗಳ ಅಂತರದಿಂದ ಬೆಳ್ಳಿ ಪದಕವನ್ನು ಕೈ ಚೆಲ್ಲಿದ್ದಾರೆ. ಚೀನಾದ ವೈ.ಕೆ.ಲ್ಯೂ 463.6 ಅಂಕಗಳ ಮೂಲಕ ಚಿನ್ನದ ಪದಕ ಗೆದ್ದರೆ, ಉಕ್ರೇನ್‌ನ ಕೊಲ್ಲಿಶ್‌ 461.3 ಅಂಕ ಗಳಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.ಭಾರತದ ಕೌಸ್ಲೆ ಅವರು 451.4 ಅಂಕ ಗಳಿಸಿ ಕಂಚಿನ ಪದಕ ಗೆದ್ದಿದ್ದಾರೆ.

ಈಜು : ಪಾನ್ ಝಾನ್ಲೆಗೆ ಒಲಿದ ಚಿನ್ನ
ಪುರುಷರ 100 ಮೀಟರ್ ಫ್ರೀ ಸ್ಟೈಲ್ ವಿಭಾಗದಲ್ಲಿ ಚೀನಾದ ಪಾನ್ ಝಾನ್ಲೆ ಅವರು 46.40 ಸೆಕೆಂಡ್ಗಳಲ್ಲೇ ಗುರಿ ಮುಟ್ಟುವ ಮೂಲಕ ೦.40 ಸಕೆಂಡ್ನಿಂದ ತಮ್ಮ ಹಿಂದಿನ ದಾಖಲೆಯನ್ನು ಉತ್ತಮ ಪಡಿಸಿಕೊಂಡು ಚಿನ್ನದ ಪದಕವನ್ನು ತಮ ಕೊರಳಿಗೇರಿಸಿಕೊಂಡಿದ್ದಾರೆ.

19 ವರ್ಷದ ಹರಯದ ಪಾನ್ ಝಾನ್ಲೆ ಅವರು 2021ರಲ್ಲಿ ಆಯೋಜನೆಗೊಂಡಿದ್ದ ಟೋಕಿಯೋ ಒಲಿಂಪಿಕ್ಸ್ ನಲ್ಲಿ 47.20 ಸೆಕೆಂಡ್ಗಳಲ್ಲಿ ಗೆಲುವಿನ ಗುರಿ ತಲುಪುವ ಮೂಲಕ ಗಮನ ಸೆಳೆದಿದ್ದರು.

ಆದರೆ ಪ್ಯಾರಿಸ್ ಒಲಿಂಪಿಕ್್ಸನಲ್ಲಿ ತಮ ದಾಖಲೆ ಉತ್ತಮಪಡಿಸಿಕೊಂಡ ಪಾನ್ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರೆ, ಆಸ್ಟ್ರೇಲಿಯಾದ ಕೈಲ್ ಚಾಲೆರ್ರಸ ಹಾಗೂ ಡೇವಿಡ್ ಪೊಪಿಕ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದಿದ್ದಾರೆ.

RELATED ARTICLES

Latest News