ಹಬ್ಬಕ್ಕೆಂದು ಊರಿಗೆ ಬಂದ ನೆಂಟರು ನೀರು ಪಾಲು

Spread the love

ಮಳವಳ್ಳಿ, ಅ.3-ಹಬ್ಬಕ್ಕೆಂದು ನೆಂಟರ ಮನೆಗೆ ಬಂದಿದ್ದ ಬೆಂಗಳೂರು ಮೂಲದ ಯುವಕರಿಬ್ಬರು ನಾಲೆಯಲ್ಲಿ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ತಾಲ್ಲೂಕಿನ ಮಂಗಲ ಗ್ರಾಮದ ವಿ.ಸಿ.ಹೆಬ್ಬಾಕವಾಡಿ ನಾಲೆಯಲ್ಲಿ ಜರುಗಿದೆ. ಬೆಂಗಳೂರಿನಲ್ಲಿ ಮಲ್ಲತ್ತಹಳ್ಳಿಯ ನಿವಾಸಿಗಳಾದ ಮಹೇಂದ್ರ(28), ಆರ್.ಆರ್.ನಗರದ ಮಹೇಶ್ (30) ನೀರಿನಲ್ಲಿ ಕೊಚ್ಚಿ ಹೋದ ಯುವಕರು.

ಹಬ್ಬಕ್ಕೆಂದು ನೆಂಟರ ಮನೆಗೆ ಬಂದಿದ್ದ ಈ ಇಬ್ಬರು ಯುವಕರು ನಾಲೆಯಲ್ಲಿ ಈಜಲು ಹೋಗಿದ್ದು, ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಸುದ್ದಿ ತಿಳಿದು ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವಗಳನ್ನು ನಾಲೆಯಿಂದ ಹೊರತೆಗೆದಿದ್ದು, ವಾರಸುದಾರರಿಗೆ ಒಪ್ಪಿಸಿದ್ದಾರೆ.

Facebook Comments